ಅತಿಕ್ರಮಣದಾರರು ಪಟ್ಟಾ ಪಡೆಯಲು ಪ್ರಭಲ ಹೋರಾಟಕ್ಕಿಳಿಯಬೇಕು; ರವೀಂದ್ರ ನಾಯ್ಕ ಕರೆ

Source: sonews | By Staff Correspondent | Published on 17th December 2018, 10:50 PM | Coastal News | Don't Miss |

ಭಟ್ಕಳ: ಅರಣ್ಯ ಭೂಮಿ ಅತಿಕ್ರಮಣದಾರರರು ತಮಗೆ ಪಟ್ಟಾ ದೊರಕಿಸಿಕೊಳ್ಳಲು ಪ್ರಭಲ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ಅತಿಕ್ರಮಣ ಹೋರಾಟಗಾರ ಹಾಗೂ ಶಿರಸಿಯ ನ್ಯಾಯವಾದಿ ಎ.ರವೀಂದ್ರ ನಾಯ್ಕ ಹೇಳಿದರು. 

ಭಟ್ಕಳದಲ್ಲಿ ಅರಣ್ಯಭೂಮಿ ಅತಿಕ್ರಮಣದಾರರನ್ನುದ್ದೇಶಿಸಿ ಮಾತನಾಡಿದ ಅವರು ಅತಿಕ್ರಮಣದಾರರಿಗೆ ಪಟ್ಟಾ ನೀಡಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇಲ್ಲವಾಗಿದೆ. ಜಿಲ್ಲೆಯಲ್ಲಿ ಒಂದೇ ದಿನ 2982 ಅತಿಕ್ರಮಣದಾರರ ಅರ್ಜಿಯನ್ನು ತಿರಸ್ಕರಿಸಿ ದಾಖಲೆ ನಿರ್ಮಿಸಲಾಗಿದೆ. ಅರಣ್ಯ ಹಕ್ಕು ಕಾಯ್ದೆಯಲ್ಲಿ ಅತಿಕ್ರಮಣದಾರರಿಗೆ ದಾಖಲೆಗಾಗಿ ಒತ್ತಡ ಹೇರುವಂತಿಲ್ಲ ಎಂಬ ವಿಚಾರವಿದ್ದರೂ ಅರ್ಜಿ ತಿರಸ್ಕರಿಸಿ ಮತ್ತೆ ದಾಖಲೆ ಕೇಳಲಾಗುತ್ತಿದೆ. ಅತಿಕ್ರಮಣದಾರರನ್ನು ಕಾನೂನು ಬಲೆಗೆ ಸಿಲುಕಿಸಲಾಗಿದ್ದು, ಅರ್ಜಿ ತಿರಸ್ಕøತಗೊಂಡಿರುವ ಎಲ್ಲಾ ಅತಿಕ್ರಮಣದಾರರೂ ಮೇಲ್ಮನವಿ ಸಲ್ಲಿಸುವುದು ಅತೀ ಅಗತ್ಯವಾಗಿದೆ. ಅತಿಕ್ರಮಣದಾರರು ಪ್ರಭಲ ಹೋರಾಟ ನಡೆಸಿ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕು. ಅತಿಕ್ರಮಣದಾರರಿಗೆ ಪಟ್ಟಾ ನೀಡುವ ಬಗ್ಗೆ ಇನ್ನೂ ತನಕ ವಿಧಾನಸಭೆಯಲ್ಲಾಗಲೀ, ಲೋಕಸಭೆಯಲ್ಲಾಗಲೀ ಯಾವ ಜನಪ್ರತಿನಿಧಿಯೂ ಗಂಭೀರವಾಗಿ ಚರ್ಚೆ ಮಾಡಿಲ್ಲ. ಅತಿಕ್ರಮಣದಾರರಿಗಾಗುತ್ತಿರುವ ಸಂಕಷ್ಟವನ್ನು ಮನಗಂಡು ಇನ್ನಾದರೂ ಜನಪ್ರತಿನಿಧಿಗಳು ಸದನದಲ್ಲಿ ಈ ಬಗ್ಗೆ ಗಟ್ಟಿ ಧ್ವನಿ ಎತ್ತಬೇಕು. ಅತಿಕ್ರಮಣದಾರರು ಸುಮ್ಮನೆ ಕೂತರೆ ಪಟ್ಟಾ ಸಿಗುವುದಿಲ್ಲ ಎಂದ ಅವರು ತಾವು ಒಟ್ಟಾಗಿ ಪ್ರಭಲ ಹೋರಾಟಕ್ಕೆ ಮುಂದಾಗುವುದಿದ್ದಲ್ಲಿ ಎಲ್ಲಾ ರೀತಿಯ ಬೆಂಬಲ, ಸಹಕಾರ ನೀಡುತ್ತೇನೆ. ಅತಿಕ್ರಮಣದಾರರಿಗೆ ನ್ಯಾಯ ಸಿಗುವ ವರೆಗೂ ನನ್ನ ಹೋರಾಟ ನಿರಂತರ ನಡೆಯುತ್ತದೆ. ಅತಿಕ್ರಮಣದಾರರು ಮೇಲ್ಮನವಿ ಸಲ್ಲಿಸಿದರೆ ಅಷ್ಟು ಸುಲಭವಾಗಿ ಒಕ್ಕಲೆಬ್ಬಿಸಲು ಆಗುವುದಿಲ್ಲ. ಇಲ್ಲದಿದ್ದಲ್ಲಿ ತೊಂದರೆಗೆ ಸಿಲುಕುವ ಸಾಧ್ಯದೆ ಇದೆ. ಹೀಗಾಗಿ ಅತಿಕ್ರಮಣದಾರರು ಜಾಗೃತರಾಗಿ ಮೊದಲು ತಿರಸ್ಕøತಗೊಂಡಿರುವ ಅರ್ಜಿಗೆ ಮೇಲ್ಮನವಿ ಸಲ್ಲಿಸಬೇಕು. ನಂತರ ಪ್ರಭಲ ಹೋರಾಟಕ್ಕೆ ಅಣಿಯಾಗಬೇಕು ಎಂದರು. 

ಈ ಸಂದರ್ಭದಲ್ಲಿ ಹಾಡುವಳ್ಳಿ ಗ್ರಾ.ಪಂ. ಅಧ್ಯಕ್ಷ ಶ್ರೀಧರ ಶೆಟ್ಟಿ, ಅಬ್ದುಲ್ ಖಯ್ಯೂಂ ಕೋಲಾ, ರಿಝ್ವಾನ್, ದೇವರಾಜ ಗೊಂಡ, ಮಾದೇವ ನಾಯ್ಕ, ತಿಮ್ಮಯ್ಯ ನಾಯ್ಕ, ಪರಮೇಶ್ವರ ಮರಾಠಿ ಮೊದಲಾದವರಿದ್ದರು.   

ಬಾಕ್ಸ್.. ಬಾಕ್ಸ… ಬಾಕ್ಸ್…. 
ಶಾಸಕರ ನಿರ್ಲಕ್ಷ್ಯ: ಜಿಲ್ಲೆಯ ಅರಣ್ಯ ಅತಿಕ್ರಮಣದಾರರ ಅರ್ಜಿ ಶೇ; 53 ರಷ್ಟು ತಿರಸ್ಕøತವಾದಾಗ್ಯೂ ಅರಣ್ಯವಾಸಿಗಳ ಹಿತಾಸಕ್ತಿ ದೃಷ್ಟಿಯಿಂದ ಹಾಗೂ ಅರಣ್ಯವಾಸಿಗಳ ಹಕ್ಕಿಗೆ ಸಂಬಂಧಿಸಿ ಕಾನೂನಾತ್ಮಕ ತೊಡಕು ನಿವಾರಣೆಗೆ ಜಿಲ್ಲೆಯ ಶಾಸಕರುಗಳು ಬೆಳಗಾಂವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುವ ದಿಶೆಯಲ್ಲಿ ಇಲ್ಲಿಯವರೆಗೆ ವಿಫಲವಾಗಿರುವುದು ವಿಷಾದಕರ. -ರವೀಂದ್ರ ನಾಯ್ಕ 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...