ಮುಂಡಗೋಡದಲ್ಲಿ ಜಿಲ್ಲಾಮಟ್ಟದ ಕನಕದಾಸ ಜಯಂತ್ಯೋತ್ಸವ 

Source: sonews | By Staff Correspondent | Published on 23rd November 2018, 11:28 PM | Coastal News | Don't Miss |

ಮುಂಡಗೋಡ : ಜಿಲ್ಲಾಡಳಿತ ಉತ್ತರಕನ್ನಡ, ಜಿಲ್ಲಾಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಉತ್ತರಕನ್ನಡ  ಇವರ ಸಂಯುಕ್ತಾಶ್ರಯದಲ್ಲಿ ಭಕ್ತ ಕನಕದಾಸರ 531ನೇ ಜಿಲ್ಲಾ ಮಟ್ಟದ ಜಯಂತ್ಯೋತ್ಸವ ವನ್ನು 26-11-2018 ರಂದು ಮುಂಡಗೋಡದಲ್ಲಿ ಆಚರಿಸಲಾಗುತ್ತಿದೆ.

ನವೆಂಬರ 26 ರಂದು ಬೆಳಗ್ಗೆ 9 ಗಂಟೆಗೆ ಪ್ರವಾಸಿ ಮಂದಿರ ಆವರಣ(ಐ.ಬಿ)ದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಲಾತಂಡಗಳಿಂದ ಮೆರವಣಿಗೆ ಹೊರಡುವುದು. ಕನಕದಾಸರ ಮೂರ್ತಿ ಇರುವ ಮಿನಿವಿಧಾನ ಸೌಧ ದ ಎದುರಿಗೆ  ಸಭಾ ಕಾರ್ಯಕ್ರಮವು 11 ಗಂಟೆಗೆ ನಡೆಯಲಿದೆ.

ಗೌರವಾನ್ವಿತ ಬಸವರಾಜ ಹೊರಟ್ಟಿ ಮಾನ್ಯ ಸಭಾಪತಿಗಳು ವಿಧಾನ ಪರಿಷತ್ ಉಪಸ್ಥಿತಿಯಲ್ಲಿ, ಕಾರ್ಯಕ್ರಮದ ಉದ್ಘಾಟಕರಾಗಿ ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಆಗಮಿಸಲಿದ್ದಾರೆ. ಶಾಸಕ ಶಿವರಾಮ ಹೆಬ್ಬಾರ ಅಧ್ಯಕ್ಷತೆಯಲ್ಲಿ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಗೌರವಾನ್ವಿತ ಅತಿಥಿಗಳಾಗಿ ಹಾಗೂ ಮುಖ್ಯ ಅತಿಥಿಗಳಾಗಿ ಜಿ.ಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಲ್ಲೆಯ ವಿವಿಧ ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆ(ಶಿರಸಿ), ದಿನಕರ ಶೆಟ್ಟಿ(ಕುಮಟಾ), ರೂಪಾಲಿ ನಾಯ್ಕ(ಕಾರವಾರ), ಸುನೀಲ ನಾಯ್ಕ(ಭಟ್ಕಳ),  ವಿಧಾನ ಪರಿಷತ್ ಸದಸ್ಯರಾದ ಶ್ರೀಕಾಂತ ಘೋಟ್ನೆಕರ, ಎಸ್.ವ್ಹಿ,ಸಂಕನೂರ, ಜಿ.ಪಂ ಸಮಾಜಿಕ ನ್ಯಾಯ ಅಧ್ಯಕ್ಷೆ ಜಯಮ್ಮ ಹಿರಳ್ಳಿ, ಜಿ.ಪಂ ಸದಸ್ಯರಾದ ಎಲ್.ಟಿ.ಪಾಟೀಲ, ರವಿಗೌಡ ಪಾಟೀಲ, ಜಿ.ಪಂ ಉಪಾಧ್ಯಕ್ಷ ಸಂತೋಷ ರೇಣುಕೆ ಹಾಗೂ ಮುಂಡಗೋಡ  ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಣಿ ಸುರಗೀಮಠ ಸೇರಿದಂತೆ ಮುಂತಾದ ಆಮಂತ್ರಿತ ಜಿಲ್ಲಾಪಂಚಾಯತ, ತಾಲೂಕ ಪಂಚಾಯತ್, ಗ್ರಾ.ಪಂ ಪಂಚಾಯತ್ ಪಟ್ಟಣ ಪಂಚಾಯತ್ ಸದಸ್ಯರು ಎಲ್ಲ ಸಂಘಸಂಸ್ಥೆಗಳ ಪದಾಧಿಕಾರಿಗಳು ಕುರುಬ ಸಮಾಜದ ಬಾಂದವರು, ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು ಎಲ್ಲ ಪತ್ರಕರ್ತರು ಆಗಮಿಸಲಿದ್ದಾರೆ.  

ಜಿಲ್ಲಾಧಿಕಾರಿಗಳು ಎಸ್.ಎಸ್.ನಕುಲ್, ಜಿ.ಪಂ ಸಿಇಒ ಮೊಹ್ಮದ ರೋಷನ, ಪೊಲೀಸ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ , ಶಿರಸಿ ಉಪವಿಭಾಗಧಿಕಾರಿ ಕೆ ರಾಜು ಮೊಗವೀರ, ಕನ್ನಡ ಮತ್ತು ಸಂಸ್ಕøತಿ ಸಹಾಯಕ ನಿರ್ದೇಶಕ ಹೇಮಂತ ಹಾಗೂ ಮುಂಡಗೋಡ ತಹಶೀಲ್ದಾರ (ಭಾ.ಆ.ಸೇ)ದಿಲೀಶ ಶಶಿ ಸರ್ವರಿಗೂ ಸ್ವಾಗತ ಕೊರಲಿದ್ದಾರೆ
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...