ಫೆ.3 ರಂದು ಎಂ.ವಿ.ಕೃಷ್ಣಪ್ಪ ಅವರ ಶತಮಾನೋತ್ಸವ ಸಮಾರಂಭ

Source: sonews | By Staff Correspondent | Published on 28th January 2019, 11:44 PM | State News |

ಶ್ರೀನಿವಾಸಪುರ: ರೈತರು, ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಕಾರಣರಾದ ದಿವಂಗತ ಎಂ.ವಿ.ಕೃಷ್ಣಪ್ಪ ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವುದರ ಮೂಲಕ, ಅವರಿಗೆ ಗೌರವ ಸಲ್ಲಿಸಬೇಕು ಎಂದು ವಿಧಾನ ಸಭಾಧ್ಯಕ್ಷ ಕೆ.ಆರ್‌.ರಮೇಶ್ಕುಮಾರ್ಹೇಳಿದರು.

ಪಟ್ಟಣದ ರಾಜಧಾನಿ ಮ್ಯಾಂಗೋ ಮಂಡಿ ಗಾರ್ಡನ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲ್ಲೂಕಿನ ನಾಗರಿಕರ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋಲಾರದ ಸರ್ಕಾರಿ ಜೂನಿಯರ್ಕಾಲೇಜು ಮೈದಾನದಲ್ಲಿ ಫೆ.3 ರಂದು ಎಂ.ವಿ.ಕೃಷ್ಣಪ್ಪ ಅವರ ಶತಮಾನೋತ್ಸವ ಸಮಾರಂಭ ಏರ್ಪಡಿಸಲಾಗಿದೆ. ಮಾಜಿ ಪ್ರಧಾನಿ             ಎಚ್‌.ಡಿ.ದೇವೇಗೌಡ ಅವರು ಸಮಾರಂಭ ಉದ್ಘಾಟಿಸುವರು ಹಾಗೂ ಮಾಜಿ ಕೇಂದ್ರ ಸಚಿವ ಎಸ್‌.ಎಂ.ಕೃಷ್ಣ ಎಂ.ವಿ.ಕೃಷ್ಣಪ್ಪ ಅವರ ಬಗ್ಗೆ ಮಾತನಾಡುವರು. ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಮಾರಂಭದಲ್ಲಿ ಭಾಗವಹಿಸುವರು ಎಂದು ಹೇಳಿದರು.

ಸಮಾರಂಭದಲ್ಲಿ ಕ್ಷೇತ್ರದ ಮಹಿಳೆಯರು ಸೇರಿದಂತೆ ಎಲ್ಲ ವರ್ಗದ ಜನರೂ ಪಕ್ಷಾತೀತವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಜರ್ಮಿನಿಯಿಂದ ವಿಮಾನದಲ್ಲಿ ಸೀಮೆ ಹಸುವನ್ನು ತಂದು ರೈತರ ಆರ್ಥಿಕ ಅಭಿವೃದ್ಧಿಗೆ ಕಾರಣರಾದ ಎಂ.ವಿ.ಕೃಷ್ಣಪ್ಪ ಅವರಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಫೆ.15 ರಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಶ್ರೀನಿವಾಸಪುರಕ್ಕೆ ಭೇಟಿ ನೀಡಲಿದ್ದು, ಕನಕ ಭವನ ಉದ್ಗಾಟಿಸಲಿದ್ದಾರೆ. ರೂ. 1000 ಕೋಟಿ ವೆಚ್ಚದಲ್ಲಿ ಸೂಪರ್ಸ್ಟೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಎಲ್ಎನ್ಟಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ರೂ.500 ಕೋಟಿ ವೆಚ್ಚದಲ್ಲಿ ಕ್ಯಾನ್ಸ್ರ್ಆಸ್ಪತ್ರೆ ನಿರ್ಮಿಸಲು ಟಾ ಟಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ರೂ.65 ಕೋಟಿ ವೆಚ್ಚದಲ್ಲಿ ಕೋಲಾರ ದಿಂದ ತಾಡಿಗೋಳ್ಕ್ರಾಸ್ವರೆಗೆ ಚತುಷ್ಪಥ ರಸ್ತೆ ನಿರ್ಮಿಸಲಾಗುವುದು. ಆಂಧ್ರಪ್ರದೇಶದ ಗಡಿಯ ವರೆಗೆ ರೂ.240 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು. ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲಾಗುವುದು. ಕಂದಾಯ ಇಲಾಖೆಯಿಂದ ಪೋಡಿ ಸರ್ವೆ ಕಾರ್ಯ ಆರಂಭಿಸಲಾಗಿದೆ. ನಾಲ್ಕು ತಿಂಗಳೊಳಗೆ ಪಿ ನಂಬರ್ರಹಿತ ವ್ಯವಸ್ಥೆ ಜಾರಿಗೆ ಬರಲಿದೆ. ಅರ್ಹರಿಗೆ ಮಾತ್ರ ಬಗರ್ಹುಕುಂ ಸಾಗುವಳಿ ಪತ್ರ ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಎಪಿಎಂಸಿ ನಿರ್ದೇಶಕ ಎನ್‌.ರಾಜೇಂದ್ರ ಪ್ರಸಾದ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌, ಡಿಸಿಸಿ ಬ್ಯಾಂಕ್ನಿರ್ದೇಶಕ ವೆಂಕಟರೆಡ್ಡಿ, ಮುಖಂಡರಾದ ಟಿಎಂವಿ ಮುಕ್ತಿಯಾರ್‌, ವೆಂಕಟಶಿವಾರೆಡ್ಡಿ, ಕೆ.ಎಚ್‌.ಸಂಪತ್ಕುಮಾರ್ಇದ್ದರು.

Read These Next

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...