ರುದ್ರಭೂಮಿಗೆ ತ್ಯಾಜ್ಯ ಕಸ ಎಸೆಯುವವರ ವಿರುದ್ದ ಕ್ರಮಕ್ಕೆ ಆಗ್ರಹ

Source: sonews | By Manju Naik | Published on 5th August 2018, 12:50 PM | Coastal News |

ಭಟ್ಕಳ: ಇಲ್ಲಿನ ವೆಂಕಟಾಪುರದ ಕಾರಗದ್ದೆಯಲ್ಲಿನ ಹಿಂದು ರುಧ್ರಭೂಮಿಯ ಸ್ಥಳದಲ್ಲಿ ಕಸ ಕಡ್ಡಿ ಎಸೆದು ಅಪವಿತ್ರಗೊಳಿಸುತ್ತಿದ್ದು ಇದರಿಂದ ಹಿಂದುಗಳ ಭಾವನೆಗೆ ಧಕ್ಕೆ ಉಂಟಾಗುತ್ತಿದ್ದ ಹಿನ್ನೆಲೆ ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿ ಹಾಗೂ ಕಾರಗದ್ದೆ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ಶನಿವಾರದಂದು ಸಲ್ಲಿಸಿದರು.

ಮನವಿಯಲ್ಲಿ ಇಲ್ಲಿನ ವೆಂಕಟಾಪುರ ಕಾರಗದ್ದೆ ಸರ್ವೇ ನಂ: 32 ಎ1ಎ ದಲ್ಲಿ ಹಿಂದು ರುಧ್ರಭೂಮಿಯಿದ್ದು, ಈ ಭಾಗದ ಹಿಂದುಗಳು ಅದನ್ನು ಉಪಯೋಗಿಸುತ್ತಾ ಬಂದಿದ್ದಾರೆ. ರುದ್ರಭುಮಿಯ ಸ್ವಚ್ಛತೆಯ ಬಗ್ಗೆ ಗಮನ ಹರಿಸುತ್ತಾ ಬಂದಿರುವ ವೇಳೆ ಕಳೆದ ಕೆಲ ದಿನಗಳ ಹಿಂದೆ ರುದ್ರಭುಮಿಯನ್ನು ಅಪವಿತ್ರಗೊಳಿಸಿ ತ್ಯಾಜ್ಯವನ್ನು ಹಾಗೂ ಹೊಲಸು ಚೀಲವನ್ನು ಎಸೆದು ಹೋಗುತ್ತಿದ್ದು ಹಿಂದುಗಳಿಗೆ ತೀವ್ರ ಮುಜುಗರವಾಗುತ್ತಿದೆ. ರುದ್ರಭೂಮಿಯನ್ನು ಅಪವಿತ್ರಗೊಳಿಸುವ ಉದ್ದೇಶವಿರುದರಿಂದ ತಕ್ಷಣವೇ ಹಿಂದು ರುದ್ರಭುಮಿಯನ್ನು ಸ್ವಚ್ಛಗೊಳಿಸಿಕೊಡಬೇಕು ಮತ್ತು ಇನ್ನು ಮುಂದೆ ಕಿಡಿಗೇಡಿಗಳು ಹಿಂದು ರುಧ್ರಭೂಮಿಯನ್ನು ಅಪವಿತ್ರಗೊಳಿದಂತೆ ಕ್ರಮ ಕೈಗೊಳ್ಳುವುದರೊಂದಿಗೆ ಈ ವ್ಯಾಪ್ತಿಯಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಿ ಉದ್ದೇಶಪೂರ್ವಕವಾಗಿ ಕಸ ಕಡ್ಡಿ ಎಸೆಯುವವರ ಮೇಲೆ ಕ್ರಮ ಜರುಗಿಸಬೇಕೆಂದು ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿ ಹಾಗೂ ಕಾರಗದ್ದೆ ಸಾರ್ವಜನಿಕರು ಜಾಲಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು. ಮುಖ್ಯಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪಂಚಾಯತ್ ಕ್ಲಾರ್ಕ ಮನವಿಯನ್ನು ಸ್ವೀಕರಿಸಿದರು. ಈ ಸಂಧರ್ಭದಲ್ಲಿ ಹಿಂದೂ ರುದ್ರಭೂಮಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್.ಎಂ.ನಾಯ್ಕ, ಸಾರ್ವಜನಿಕರಾದ ತಿಮ್ಮಯ್ಯ ನಾಯ್ಕ ಚಂದ್ರು ನಾಯ್ಕ,ಬಾಬು ನಾಯ್ಕ , ಜಯಂತ ನಾಯ್ಕ ,ಶ್ರೀಧರ ನಾಯ್ಕ, ದೇವೆಂದ್ರ ನಾಯ್ಕ, ರಮೇಶ ನಾಯ್ಕ, ಮುಂತಾದವರು ಇದ್ದರು.

Read These Next

ಕಾರವಾರ: ಚುನಾವಣೆ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ.

ಉತ್ತರ ಕನ್ನಡ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿ ಮತದಾನ ಪ್ರಮಾಣ ಹೆಚ್ಚಿಸಿದ ಸರ್ವರಿಗೂ ಜಿಲ್ಲಾ ...