ಬ್ಯಾಂಕ್ ಶಟರ್ ಗೆ ಡಿಕ್ಕಿ ಹೊಡೆದ ಕಾರು; ಪ್ರಾಣಾಪಾಯದಿಂದ ಪಾರಾದ ಪಾದಾಚಾರಿ

Source: sonews | By Staff Correspondent | Published on 18th March 2019, 7:57 PM | Coastal News | Don't Miss |

ಭಟ್ಕಳ: ಇಲ್ಲಿನ ಮುರ್ಡೇಶ್ವರದ ಸಿಂಡಿಕೇಟ್ ಬ್ಯಾಂಕ ಬಳಿ ಶನಿವಾರದಂದು ಸಂಜೆ ಪ್ರವಾಸಿಗರ ಕಾರೊಂದು ಪಾರ್ಕ ಮಾಡಿದ್ದ ಕಾರನ್ನು ರಿವರ್ಸ ತೆಗೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬ್ಯಾಂಕ ಮುಭಾಗದ ಶೇಟರ್ಸಗೆ ಬಡಿದಿದ್ದು, ಪಾದಚಾರಿಯೊಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಜಾ ಮಜಾವನ್ನು ಸವಿಯಲು ಮುರ್ಡೇಶ್ವರಕ್ಕೆ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗರ ತಂಡವು ತಾವು ಬ್ಯಾಂಕ ಎದುರು ಪಾರ್ಕ ಮಾಡಿದ ಸ್ಥಳದಿಂದ ರಿವರ್ಸ ತೆಗೆಯುವ ವೇಳೆ ಈ ಅವಘಡ ಸಂಭವಿಸಿರುವದು ಇಲ್ಲಿನ ಸಿ.ಸಿ.ಟಿವಿ. ಫೋಟೇಜ್ ನಲ್ಲಿ ಸೆರೆಯಾಗಿದೆ. 

ದೇವರ ದರ್ಶನ ಮುಗಿಸಿ ತಮ್ಮ ಊರಿಗೆ ವಾಪಸ್ಸಾಗುವ ವೇಳೆ ತಮ್ಮ ಕಾರನ್ನು ರಿವರ್ಸ್ ತೆಗೆದುಕೊಳ್ಳುವ ವೇಳೆ ಚಾಲಕನ ಅಜಾಗರುಕತೆಯಿಂದ ನಿಯಂತ್ರಣ ತಪ್ಪಿದ ಕಾರು ರಸ್ತೆಯ ಪಕ್ಕದಲ್ಲಿಯೇ ನಡೆದು ಹೋಗುತ್ತಿದ್ದ ಪಾದಚಾರಿಯನ್ನು ಗಮನಿಸದೇ ಏಕಾಏಕಿ ಹಿಂದೆ ಚಲಾಯಿಸಿದ್ದಾನೆ. ತಕ್ಷಣ ಪಾದಚಾರಿ ಗಮನಿಸಿ ಕಾರಿನ ಬಡಿತದಿಂದತಪ್ಪಿಸಿಕೊಂಡು ಪಕ್ಕಕ್ಕೆ ಜಿಗಿದಿದ್ದು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ತಪ್ಪಿಸಿಕೊಂಡಿದ್ದಾನೆ. 

ನಂತರ ಕಾರು ವೇಗದಲ್ಲಿದ್ದ ಕಾರಣ ನೇರವಾಗಿ ಸಿಂಡಿಕೇಟ್ ಬ್ಯಾಂಕ್‍ನ ಮುಂಭಾಗದ ಶೇಟರ್ಸಗೆ ಬಂದು ಬಡಿದಿದೆ. ಬ್ಯಾಂಕಿನ ಕಾರ್ಯಾವಧಿಯಲ್ಲಿ ಅವಗಢ ಸಂಭವಿಸಿದ್ದು ಬ್ಯಾಂಕ್ ಸಿಬ್ಬಂದಿಗಳು, ಗ್ರಾಹಕರು ಕಾರು ನುಗ್ಗಲು ಯತ್ನಿಸಿದ್ದು ಹೌಹಾರಿದ್ದಾರೆ. ಇದರಿಂದ ಕೆಲಕಾಲ ಬ್ಯಾಂಕ ಅಧಿಕಾರಿಗಳು ಹಾಗೂ ಕಾರು ಚಾಲಕನ ನಡುವೆ ಸ್ವಲ್ಪ ಮಾತಿನ ಚಕಮಕಿ ಉಂಟಾಯಿತು. ಕೊನೆಯಲ್ಲಿ ಕಾರು ಚಾಲಕ ಬ್ಯಾಂಕ ಮುಂಬಾಗದ ಶೇಟರ್ಸ ಸರಿಪಡಿಸಿಕೊಡುವುದಾಗಿ ಒಪ್ಪಿಕೊಂಡಿದ್ದು ಇಬ್ಬರ ನಡುವೆ ರಾಜಿಯಲ್ಲಿ ವಿಷಯ ಅಂತ್ಯವಾಗಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...