ರೈಲಿನಲ್ಲಿ ಚಿನ್ನಾಭರಣ ಕಳುವು ಮಾಡಿ ಪರಾರಿಯಾಗಲು ಯತ್ನಿಸಿದವರ ಬಂಧನ

Source: sonews | By Staff Correspondent | Published on 7th October 2018, 4:08 PM | Coastal News | Incidents | Don't Miss |

ಭಟ್ಕಳ: ಪ್ರಯಾಣಿಕರ ಬಳಿಯಿಂದ ನಗದು ಹಾಗೂ ಚಿನ್ನಾಭರಣವಿದ್ದ ಬ್ಯಾಗೊಂದನ್ನು ಕಳುವುಗೈದು ಪರಾರಿಯಾಗಲು ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ರೈಲ್ವೆ ಪೊಲೀಸರ ಸಹಕಾರದೊಂದಿಗೆ ಭಟ್ಕಳ ರೈಲ್ವೆ ಪೊಲೀಸರು ಬಂಧಿಸಿರುವ ಶನಿವಾರ ನಡೆದಿದೆ. 

ಬಂಧಿತ ಆರೋಪಿಗಳನ್ನು ಆಹ್ಮದ್ ಶೇಖ್ ಮತ್ತು ಶಹಿರಾ ಶೇಖ್ ಎಂದು ಗುರುತಿಸಲಾಗಿದೆ. 

ಇವರು ಉಡುಪಿ ರೈಲು ನಿಲ್ದಾಣದಿಂದ ನಗದು ಮತ್ತು ಚಿನ್ನಾಭರಣವಿದ್ದ ಬ್ಯಾಗನ್ನು ಕಳುವು ಮಾಡಿದ್ದಾರೆ ಎಂದು ಉಡುಪಿಯ ಪ್ರಕಾಶ ಅಲ್ವಿನ್ ಮಂಡೋಸಾ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಿಸಿ ಟಿವಿ ಕ್ಯಾಮರಾದ ಜಾಡನ್ನು ಹಿಡಿದು ಆರೋಪಿಗಳ ಬೆನ್ನಟ್ಟಿದ್ದ ಪೊಲೀಸರು ಗೋವಾಕ್ಕೆ ಹೋಗುತ್ತಿದ್ದ ಮತ್ಸ್ಯಗಂಧ ರೈಲಿನಲ್ಲಿ ಆರೋಪಿಗಳು ಪ್ರಯಾಣಿಸುತ್ತಿದ್ದಾರೆಂಬ ಮಾಹಿತಿ ಮೆರೆಗೆ ಭಟ್ಕಳದ ಪೊಲೀಸರಿಗೆ ವಿಷಯ ಮುಟ್ಟಿದ್ದು ಇಲ್ಲಿನ ರೈಲ್ವೆ ಪೊಲೀಸರು ಕಾರ್ಯಪ್ರವೃತ್ತಗೊಂಡು ಆರೋಪಿಗಳನ್ನು 50ಸಾವಿರ ರೂ ನಗದು ಹಾಗೂ 1.20ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಬಂಧಿಸಿ ಮಣಿಪಾಲ ಪೊಲೀಸರ ವಶಕ್ಕೆ ನೀಡಲಾಗಿದೆ. 

ಕಾರ್ಯಚರಣೆಯಲ್ಲಿ ಉಡುಪಿ ರೈಲ್ವೆ ಪೊಲೀಸರಾದ ಸಂತೋಷ ಗಾಂವಕರ್, ಭಟ್ಕಳದ ಶಿಶುಪಾಲ ಮತ್ತು ಅಜೇಶ ಪಾಲ್ಗೊಂಡಿದ್ದರು. ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಚರಣೆಯು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...