ಅಕ್ರಮವಾಗಿ ದನ ಸಾಗಿಸುತ್ತಿದ್ದ ಆರೋಪಿಗಳು ಪೋಲೀಸರ ವಶಕ್ಕೆ

Source: SO News | By Manju Naik | Published on 31st July 2018, 12:30 AM | Coastal News |

 

ಭಟ್ಕಳ: ಅಕ್ರಮವಾಗಿ ಮಹೀಂದ್ರ ಪಿಕಪ್ ವಾಹನದಲ್ಲಿ ದನಗಳನ್ನು ಸಾಗಿಸುತ್ತಿರುವ ಬಗ್ಗೆ  ಮಾಹಿತಿ ತಿಳಿದು ಗ್ರಾಮೀಣ ಪೊಲೀಸರು ಅವರ ಬೆನ್ನತ್ತಿ ಇಲ್ಲಿನ ಗುಳ್ಮೆ ಕ್ರಾಸ ಬಳಿ ವಾಹನ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 
ಬಂಧಿತ ಆರೋಪಿಗಳಾದ ಇಲ್ಲಿನ ಮುಗಳಿಹೊಂಡದ ಇರ್ಫಾನ್ ಸನವುಲ್ಲಾ ಭಾಷಾ ಸಾಬ್ (22) ವಾಹನ ಚಾಲಕ ಹಾಗೂ ಮುಗ್ದುಮ್ ಕಾಲೋನಿ ಸನ್ನಾಂ ಸ್ಟ್ರೀಟ್‍ನ ಇರ್ಫಾನ್ ಭಾಷಾ ಖಾನ್ (34) ಎಂದು ತಿಳಿದು ಬಂದಿದೆ. ಬಂಧಿತ ಆರೋಪಿಗಳು 
20 ಸಾವಿರ ರೂ. ಮೌಲ್ಯದ 2 ಕೋಣ, 10 ಸಾವಿರ ಮೌಲ್ಯದ 1 ಎತ್ತು ಹಾಗೂ 3 ಸಾವಿರ ಮೌಲ್ಯ ದನ ಕರು ಸಾಗುತ್ತಿದ್ದ ಬಗ್ಗೆ ಪೊಲೀಸರು ಮಾಹಿತಿ ತಿಳಿಸಿದ್ದಾರೆ.
ವಾಹನವೂ ಇಲ್ಲಿನ ಸಬ್ಬತ್ತೆಯಿಂದ ಭಟ್ಕಳದ ಕಡೆ ಮಹೇಂದ್ರ ಪಿಕಪ್ ವಾಹನದಲ್ಲಿ ಸಾಗಿಸುವ ವೇಳೆ ಪೊಲೀಸರು ಮಾಹಿತಿ ತಿಳಿದು ಸಾಗರ್ ರೋಡಿನಿಂದ ಆರೋಪಿಗಳ ಬೆನ್ನು ಹತ್ತಿ ಗುಳ್ಮೆ ಕ್ರಾಸ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.  ಈ ಕುರಿತು ಆರೋಪಗಳ ಮೇಲೆ ಪ್ರಾಣಿ ಹತ್ಯೆ ನಿರ್ಮೂಲನಾ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿದ್ದು ಠಾಣೆ ಪಿಎಸ್‍ಐ ರವಿ ಜಿ.ಎಸ್. ತನಿಖೆ ನಡೆಸುತ್ತಿದ್ದಾರೆ.

Read These Next