ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರ ಬಲವರ್ದನೆ – ರಘು ರಾಮಾನುಜಂ

Source: sonews | By Staff Correspondent | Published on 19th September 2018, 11:04 PM | State News |

ಕೋಲಾರ.: ಪ್ರತಿಮಗುವು ವಿಶ್ವಾಸವಿರಿಸುವ, ಗೌರವಿಸುವ ಮತ್ತು ಮೌಲೀಕರಿಸುವ ಶಿಕ್ಷಕರನ್ನು ಒದಗಿಸುವತ್ತ ಚಿಂತನೆ ನಡೆದಿದ್ದು, ಈ ದಿಸೆಯಲ್ಲಿ ಗುಣಾತ್ಮಕ ಶಿಕ್ಷಣಕ್ಕಾಗಿ ಶಿಕ್ಷಕರ ಆಂತರಿಕ ಬಲವರ್ದನೆ ಮತ್ತು ಉನ್ನತೀಕರಣಕ್ಕಾಗಿ ವಿವಿಧ ಕಾರ್ಯಕ್ರಮಗಳು ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಬೆಂಗಳೂರಿನ ಸ್ಟರ್ ಎಜುಕೇಷನ್ ಕಾರ್ಯಕ್ರಮ ವ್ಯವಸ್ಥಾಪಕ ರಘು ರಾಮಾನುಜಂ ತಿಳಿಸಿದರು.
    
ತಾಲ್ಲೂಕಿನ ಹರಟಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಬೋಧನಾ ಕಲಿಕಾ ಪ್ರಕ್ರಿಯೆಗಳ ಪ್ರಕಾರಗಳ ಪ್ರಾತ್ಯಕ್ಷಿತೆ ನೆರವೇರಿಸಿ ಕಿರುಪುಸ್ತಕ ವಿತರಿಸಿ ಅವರು ಮಾತನಾಡುತ್ತಿದ್ದರು. 
    
ಕಲಿಕೆದಾರರು ತಮ್ಮ ಸಂಪೂರ್ಣ ಕಲಿಕೆ ಮತ್ತು ಸಾಧನೆಯ ಸಾಮಥ್ರ್ಯಕ್ಕಾಗಿ ಪ್ರತಿ ಶಿಕ್ಷಕರನ್ನು ಇನ್ಟ್ರಿಕ್ ಮೋಟಿವೇಷನ್‍ಗೆ ಒಳಪಡಿಸಬೇಕು ಎಂದು ಗುರಿಯನ್ನಾಗಿಸಿಕೊಂಡು ಗುಣಾತ್ಮಕ ಶಿಕ್ಷಣದತ್ತ ವಿದ್ಯಾರ್ಥಿಗಳನ್ನು ಕೊಂಡೊಯ್ಯಲು ಈಗಾಗಲೇ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಕಳೆದ ಒಂದು ವರ್ಷದಿಂದ ಪ್ರಯತ್ನ ಸಾಗುತ್ತಿದೆ ಎಂದರು.
    
ಕಲಿಕಾ ಸುಧಾರಣಾ ಚಕ್ರಗಳನ್ನು ನಿರ್ಮಿಸಿಕೊಂಡು ವರ್ಷವೊಂದಕ್ಕೆ 6 ಸಮಾಲೋಚನಾ ಸಭೆಗಳ ಮೂಲಕ ಶೈಕ್ಷಣಿಕ ಪ್ರಗತಿಗೆ ಸ್ಟರ್ ಸಂಸ್ಥೆಯು ರಾಜ್ಯದ ಡಿ.ಎಸ್.ಇ.ಆರ್.ಟಿ. ಸಂಸ್ಥೆಯ ಸಹಯೋಗದಲ್ಲಿ ಸಿ.ಆರ್.ಪಿ., ಬಿ.ಆರ್.ಪಿ. ಹಾಗೂ ಶಿಕ್ಷಕರ ಶೈಕ್ಷಣಿಕ ಬಲ ಸಂವರ್ಧನೆ ಮತ್ತು ಶಾಲಾ ನಾಯಕತ್ವ ಮತ್ತು ಬೋಧನೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಅವರು ತಿಳಿಸಿದರು. 
    
ತರಗತಿಯ ಪದ್ದತಿಗಳ ಅವಲೋಕನ, ದಿನದ ಪಾಠವನ್ನು ಪರಿಚಯಿಸುವುದು, ಕ್ರಿಯಾ ಯೋಜನೆ, ಶಿಕ್ಷಕರ ಅವಲೋಕನ, ಇದುವರೆಗೂ ತರಗತಿಗಳಲ್ಲಿ ಕಂಡುಬಂದಿರುವ ಬದಲಾವಣೆಗಳ ಕುರಿತು ಪ್ರಸ್ತುತಿ, ತರಗತಿಯನ್ನು ಹೇಗೆ ಆರಂಭಿಸಬೇಕು ಮತ್ತು ದಿನದ ಪಾಠವನ್ನು ಹೇಗೆ ಪರಿಚಯಿಸಬೇಕೆಂಬುವ ತರಗತಿ ಪದ್ದತಿಗಳು, ಅನುಷ್ಠಾನಗೊಳಿಸಲು ತರಗತಿಗಳ ಆಯ್ಕೆ ಮತ್ತಿತರ ವಿಷಯಗಳ ಬಗ್ಗೆ ಕೂಲಂಕುಷ ಚರ್ಚೆ ಸಮಾಲೋಚನೆಗಳನ್ನು ಜಿಲ್ಲೆಯ ಎಲ್ಲಾ ಶೈಕ್ಷಣಿಕ ಕ್ಷೇತ್ರಗಳಲ್ಲೂ ಮುಗಿಸಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಶಿಕ್ಷಕರ ಸಹಕಾರ, ಸಲಹೆ ನಿರೀಕ್ಷಿಸಲಾಗಿದೆ ಎಂದರು.
    
ಶಿಕ್ಷಕರೊಂದಿಗೆ ಬೋಧನಾ ಪ್ರಾತ್ಯಕ್ಷಿತೆಯ ಚಟುವಟಿಕೆಯಲ್ಲಿ ಶಾಲಾ ಮುಖ್ಯೋಪಾದ್ಯಾಯ ಜಿ.ಶ್ರೀನಿವಾಸ್, ಸಹ ಶಿಕ್ಷಕರಾದ ಎಂ.ಕೃಷ್ಣಪ್ಪ, ಪಿ.ಎಂ. ಗೋವಿಂದಪ್ಪ, ಎಂ.ಆರ್.ಮೀನಾ, ಆರ್.ಮಂಜುಳ, ಕೆ. ಮಮತಾ ಮತ್ತಿತರರು ಭಾಗವಹಿಸಿದ್ದರು.
 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...