ಸೂಸಗಡಿ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್

Source: SO News | By MV Bhatkal | Published on 31st July 2018, 4:01 PM | Coastal News |

ಭಟ್ಕಳ: ಇಲ್ಲಿನ ಸೂಸಗಡಿ ಹೋಬಳಿ ಮಟ್ಟದ ಕಂದಾಯ ಮತ್ತು ಪಿಂಚಣಿ ಅದಾಲತ್ ಸೋಮವಾರದಂದು ಇಲ್ಲಿನ ತಹಸೀಲ್ದಾರ ಕಛೇರಿಯಲ್ಲಿ ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಸಹಾಯಕ ಆಯುಕ್ತ ಸಾಜಿದ್ ಅಹ್ಮದ ಮುಲ್ಲಾ ‘ಸರಕಾರದಿಂದ ಜನರಿಗೆ ಬರುವ ಪಿಂಚಣಿ ಪಹಣಿ ಪತ್ರ ಸಾಮಾನ್ಯ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಅದಾಲತ ನಡೆಸುತ್ತಿದ್ದು, ಮುಂದಿನ ದಿನದಲ್ಲಿ ಪ್ರತಿ ತಿಂಗಳು ಅದಾಲತ ನಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಹಣಿ ಪತ್ರದಲ್ಲಿ ಏನಾದರೂ ದೋಪಷವಿದ್ದಲ್ಲಿ ಸರಿಪಡಿಸಿ ನೀಡಲಾಗುವುದು. ಜನರು ಕಛೇರಿ ತಿರುಗಾಡುವ ಬದಲು ಅದಾಲತನಲ್ಲಿ ಪಾಲ್ಗೊಂಡು ಅರ್ಹ ದಾಖಲಾತಿ ನೀಡಿದ್ದಲ್ಲಿ ಒಂದು ದಿನದಲ್ಲಿ ಅವರಿಗೆ ಆದೇಶ ಪ್ರತಿ ನೀಡುವ ವ್ಯವಸ್ಥೆ ಇದರಿಂದಾಗಲಿದೆ. ಇಲ್ಲಿನ ಯಾವುದೇ ಹಳ್ಳಿ ವ್ಯಾಪ್ತಿಯಲ್ಲಿ ಅಧಿಕ ಸಂಖ್ಯೆಯ ಜನರಿಗೆ ಪಿಂಚಣಿ ಅಥವಾ ಕಂದಾಯ ವಿಚಾರವಾಗಿ ಸಮಸ್ಯೆಯಾಗಿದ್ದಲ್ಲಿ ಅಂತಹ ಪ್ರದೇಶಕ್ಕೆ ಕುದ್ದು ತಹಸೀಲ್ದಾರ ಸಮೇತ ಸ್ಥಳಕ್ಕೆ ನಾವೇ ಬರಲಿದ್ದೇವೆ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಒಟ್ಟು 20 ಮಂದಿ ಪಿಂಚಣಿ ಅರ್ಹ ಫಲಾನುಭವಿಗಳಿಗೆ ಮಂಜುರಾತಿ ಪತ್ರಗಳನ್ನು ಸಹಾಯಕ ಆಯುಕ್ತ ಸಾಜಿದ ಅಹ್ಮದ್ ಮುಲ್ಲಾ ವಿತರಿಸಿದರು. 

ಈ ಸಂಧರ್ಭದಲ್ಲಿ ತಹಸೀಲ್ದಾರ್ ವಿ.ಎನ್.ಬಾಡಕರ್, ಪ್ರಭಾರಿ ಕಂದಾಯ ನಿರೀಕ್ಷಕ ರಾಜು ನಾಯ್ಕ, ತಹಸೀಲ್ದಾರ್ ಕಛೇರಿ ಕ್ಲರ್ಕ ವಿಶ್ವನಾಥ ಕರಡಿ ಮತ್ತು ತಾಲೂಕಿನ ಎಲ್ಲಾ ಗ್ರಾಮ ಲೆಕ್ಕಾಧಿಕಾರಿ ಹಾಗೂ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...