ಅಮದಳ್ಳಿ ಚತುಷ್ಪಥ  ರಸ್ತೆ ಸಂತೃಸ್ಥರಿಂದ ಸಹಾಯಕ ಕಮಿಷನರೊಂದಿಗೆ ಚರ್ಚೆ      

Source: sonews | By Staff Correspondent | Published on 28th September 2018, 3:18 PM | Coastal News |

ಕಾರವಾರ: ಕಾರವಾರ ತಾಲೂಕಿನ ಅಮದಳ್ಳಿ ಗ್ರಾಮದಿಂದ ಹಾದು ಹೋಗುವ ಚತುಷ್ಪತ ರಸ್ತೆಗಾಗಿ ಹಲವರು ಸಂತ್ರಸ್ತರಾಗುತ್ತಿದ್ದು, ಈ ಬಗ್ಗೆ ನಿಯೋಗವೊಂದು ಕಾರವಾರದ ಸಹಾಯಕ ಕಮಿಷನರ್‍ರಾದ ಅಭಿಜಿನ್.ಬಿ. ರವರನ್ನು ಭೇಟಿ ಮಾಡಿ ಸಂತ್ರಸ್ತರ ಹಲವು ಸಮಸ್ಸೆಗಳ ಕುರಿತು ಚರ್ಚಿಸಿದರು.
    
ಯಾವುದೇ ಸೂಚನೆ ನೀಡದೇ- ಕಳೆದ ರಕ್ಷಾಬಂಧನದ ದಿನ ಏಕಾಏಕಿ ಕಟ್ಟಡಗಳನ್ನು ತೆರವುಗೊಳಿಸಿದಕ್ಕೆ ನಿಯೋಗ ತೀವೃ ಅಸಮಾಧಾನ ವ್ಯಕ್ತ ಪಡಿಸಿತು. ಚತುಷ್ಪತÀ ರಸ್ತೆ ಕಾಮಗಾರಿಗೆ ನಮ್ಮ ವಿರೋಧವಿಲ್ಲ. ಆದರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ತೆರವುಗೊಳಿಸಬೇಕಿತ್ತೆಂದು ಅವರು ಚರ್ಚೆಯ ಸಂಧರ್ಬದಲ್ಲಿ ಕಮಿಷÀನರ್ ಅವರಿಗೆ ಮನವರಿಕೆ ಮಾಡಿರುತ್ತಾರೆ.
    
ಇನ್ನೂ ಹಲವರಿಗೆ ಕಟ್ಟಡ ಹಾಗೂ ಭೂ-ಪರಿಹಾರ ನೀಡಬೇಕಾಗಿದ್ದು, ಎಲ್ಲಾ ಪ್ರಕ್ರಿಯೆ ಮುಗಿದ ಬಳಿಕವೇ ತೆರವು ಕಾರ್ಯ ನಡೆಸಬೇಕೆಂದು ನಿಯೋಗ ಸಕ್ಷಮ ಪ್ರಾಧಿಕಾರ ರವರಲ್ಲಿ ಮನವಿ ಮಾಡಿತು.
    
ಅಲ್ಲದೇ ಭೂಮಿಗೆ 2014ರ ದರ ನಿಗದಿ ಪಡಿಸಲಾಗಿದ್ದು, ನ್ಯಾಯವಿತವಾಗಿ 2017-18ರ ದರ ನಿಗದಿಗೊಳಿಸಲು ಸೂಕ್ತ ಕ್ರಮ ಕೈಗೊಂಡು ನ್ಯಾಯ ನಿಡಬೇಕೆಂದು ವಿನಂತಿಸಲಾಯಿತು.
    
ಈಗಾಗಲೇ ನಾವು ರಾಷ್ಟ್ರಿಯ ಯೋಜನೆಗಳಾದ ಸೀಬರ್ಡ್ ನೌಕಾನೆಲೆ, ಕೊಂಕಣ ರೇಲ್ವೆ ಯೋಜನೆಗಳಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿರುತ್ತಿದ್ದು, ಈಗ ಮತ್ತೇ ಚತುಷ್ಪತ ರಸ್ತೆಗಾಗಿ ನಿರಾಶ್ರಿತರಾಗಿ ಅತಂತ್ರರಾಗುತ್ತಿರುವುದಾಗಿ ವಿವರಿಸಿದರು. 
    
ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಸಹಾಯಕ ಕಮಿಷÀನರ್ ರವರು-   ಪರಿಹಾರ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಎಲ್ಲಾ ಸಂತ್ರಸ್ತರಿಗೆ ಪರಿಹಾರ ನೀಡಿದ ನಂತರವೇ ಉಳಿದಿರುವ ತೆರವು ಕಾರ್ಯ ನಡೆಸಲಾಗುವುದೆಂದು ನಿಯೋಗಕ್ಕೆ ಭರವಸೆ ನಿಡಿರುತ್ತಾರೆ.
    
ಸಹಾಯಕ ಕಮಿಷÀನರ್ ರವರನ್ನು ಭೇಟಿಯಾಗಿ ಚರ್ಚಿಸಿದ ನಿಯೋಗದಲ್ಲಿ- ಸೀಬರ್ಡ್ ನೌಕಾನೆಲೆ ನಿರಾಶ್ರಿತರ ವೇದಿಕೆಯ ಪ್ರಧಾನ ಕಾರ್ಯದರ್ಶಿ ರವೀಂದ್ರ ಅಮದಳ್ಳಿ, ಅಮದಳ್ಳಿ ಗ್ರಾಮಪಂಚಾಯತ ಸದಸ್ಯರಾದ ಅಶೋಕ.ಎಲ್.ತೆಂಡೂಲಕರ ,ದತ್ತಾತ್ರೆಯ ಗೌಡ, ಪ್ರಮುಖರಾದ ಮಹೇಶ ಬಿಣಗೇಕರ, ದಿವಾಕರ.ಆರ್.ಅಮದಳ್ಳಿ, ವಿನೋದ ನಾಯ್ಕ, ಮಣಿಕಂಠ ಅಮದಳ್ಳಿ , ನಾಗರಾಜ ಅಮದಳ್ಳಿ, ದಾಮೋದರ ಗಂಗಾಧರ ಗೌಡ, ಮುಂತಾದವರು ಇದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...