ಕಾಬೂಲ್ ಟೆರರ್ ಅಟ್ಯಾಕ್; ಆತ್ಮಾಹುತಿ ದಾಳಿಗೆ 40 ಪೊಲೀಸರು ಹುತಾತ್ಮ

Source: ಉದಯವಾಣಿ | Published on 30th June 2016, 4:37 PM | Global News |

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಪೊಲೀಸ್ ವಾಹನಗಳನ್ನು ಗುರಿಯಾಗಿರಿಸಿ ಉಗ್ರರು ನಡೆಸಿದ ಆತ್ಮಹತ್ಯಾ ಬಾಂಬರ್ ದಾಳಿಯಲ್ಲಿ 40 ಪೊಲೀಸರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ದಾಳಿಯ ಹೊಣೆಯನ್ನು ತಾಲಿಬಾನ್ ಸಂಘಟನೆ ಹೊತ್ತುಕೊಂಡಿದೆ.

ಕಳೆದ ವಾರವಷ್ಟೇ ಕಾಬೂಲ್ ನಲ್ಲಿರುವ ಕೆನಡಾ ರಾಯಭಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನೇಪಾಳಿ ಸೆಕ್ಯುರಿಟಿ ಗಾರ್ಡ್ಸ್ ಗಳ ಬಸ್ ಅನ್ನು ಗುರಿಯಾಗಿರಿಸಿ ಉಗ್ರರು ದಾಳಿ ನಡೆಸಿದ್ದರು. ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದರು.

ಇಂದು ನಡೆದ ದಾಳಿಯಲ್ಲಿ ಅಂದಾಜು 40 ಮಂದಿ ಪೊಲೀಸರು ಸಾವನ್ನಪ್ಪಿರುವ ಸಾಧ್ಯತೆ ಇದ್ದಿರುವುದಾಗಿ ಬಿಬಿಸಿ ವರದಿ ಮಾಡಿದೆ.

Read These Next