ಸಿರಿಯ: 2 ವಾರಗಳಲ್ಲಿ 1,000 ಸಾವು; 4,800 ಗಾಯಾಳು

Source: sonews | By sub editor | Published on 9th March 2018, 11:08 PM | Global News | Don't Miss |

ಲಂಡನ್: ಸಿರಿಯದ ಬಂಡುಕೋರ ನಿಯಂತ್ರಣದ ಪೂರ್ವ ಘೌಟದಲ್ಲಿ ಕೇವಲ ಎರಡು ವಾರಗಳಲ್ಲಿ 1,000 ಮೃತದೇಹಗಳು ಮತ್ತು 4,800 ಗಾಯಾಳುಗಳನ್ನು ‘ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ (ಎಂಎಸ್‌ಎಫ್)’ನ ಬೆಂಬಲ ಹೊಂದಿರುವ ಆಸ್ಪತ್ರೆಗಳು ಸ್ವೀಕರಿಸಿರುವುದಾಗಿ ವೈದ್ಯರ ಸಂಘಟನೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆದಾಗ್ಯೂ, ಫೆಬ್ರವರಿ 18ರಿಂದ ಮಾರ್ಚ್ 4ರವರೆಗಿನ ಅವಧಿಯ ಈ ಸಾವು ನೋವುಗಳ ಸಂಖ್ಯೆ ಕನಿಷ್ಠವಾಗಿದೆ ಹಾಗೂ ವಾಸ್ತವಿಕ ಸಂಖ್ಯೆ ಹೆಚ್ಚಾಗಿರಬಹುದು ಎಂದು ಅದು ಹೇಳಿದೆ.

ರಾಜಧಾನಿ ಡಮಾಸ್ಕಸ್‌ನ ಉಪನಗರ ಪೂರ್ವ ಘೌಟದಲ್ಲಿ ಎಂಎಸ್‌ಎಫ್ ಸ್ಥಾಪಿಸಿರುವ 20 ವೈದ್ಯಕೀಯ ಸಂಸ್ಥಾಪನೆಗಳ ಪೈಕಿ 15 ಬಾಂಬ್ ದಾಳಿಗಳಲ್ಲಿ ಧ್ವಂಸಗೊಂಡಿದೆ ಎಂದು ವೈದ್ಯರ ಸಂಘಟನೆ ತಿಳಿಸಿದೆ.

‘‘ತಕ್ಷಣ ಯುದ್ಧವಿರಾಮವನ್ನು ಜಾರಿಗೊಳಿಸಬೇಕು ಹಾಗೂ ಮುತ್ತಿಗೆಗೊಳಗಾಗಿರುವ ಪ್ರದೇಶದಲ್ಲಿರುವ ರೋಗಿಗಳು ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ಅಲ್ಲಿಗೆ ವೈದ್ಯಕೀಯ ಪರಿಕರಗಳನ್ನು ಸಾಗಿಸಲು ಅವಕಾಶ ನೀಡಬೇಕು ಎಂಬ ತನ್ನ ಕರೆಯನ್ನು ಎಂಎಸ್‌ಎಫ್ ಪುನರುಚ್ಚರಿಸುತ್ತದೆ’’ ಎಂದು ಸಂಘಟನೆ ಹೇಳಿದೆ.

ಮತ್ತೆ 13 ನಾಗರಿಕರ ಸಾವು

ಈ ನಡುವೆ, ಪೂರ್ವ ಘೌಟದ ವಿವಿಧ ಪಟ್ಟಣಗಳ ಮೇಲೆ ಸರಕಾರಿ ಪಡೆಗಳು ಹೊಸದಾಗಿ ನಡೆಸಿದ ವೈಮಾನಿಕ ಬಾಂಬ್ ದಾಳಿಗಳಲ್ಲಿ 13ಕ್ಕೂ ಅಧಿಕ ನಾಗರಿಕರು ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

ಡಮಾಸ್ಕಸ್‌ನ ಉಪನಗರ ಪೂರ್ವ ಘೌಟದಲ್ಲಿ ಯುದ್ಧವಿರಾಮಕ್ಕೆ ಕರೆ ನೀಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಅಂಗೀಕರಿಸಿರುವ ನಿರ್ಣಯ ಇನ್ನೂ ಜಾರಿಯಾಗಿಲ್ಲ.

ಯುದ್ಧವಿರಾಮವನ್ನು ಜಾರಿಗೊಳಿಸಲು ನೆರವಾಗುವಂತೆ ಸಿರಿಯದ ಮಿತ್ರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರಿಗೆ ಪದೇ ಪದೇ ಮಾಡಿರುವ ಮನವಿಗಳು ವ್ಯರ್ಥವಾಗಿವೆ.

Read These Next

ತಾಲಿಬಾನ್ ನಾಯಕ ಮುಲ್ಲಾ ಫಝ್ಲುಲ್ಲಾಹ ನ ಬಂಧನಕ್ಕೆ 32 ಕೋಟಿ ರೂ. ಬಹುಮಾನ ಘೋಷಿಸಿದ ಅಮೆರಿಕ

ವಾಶಿಂಗ್ಟನ್: ತೆಹ್ರೀಕೆ ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ)ನ ನಾಯಕ, ಅಫ್ಘಾನಿಸ್ತಾನದಲ್ಲಿ ನೆಲೆಸಿರುವ ಮೌಲಾನಾ ಫಝ್ಲುಲ್ಲಾನ ...

ವಂಚನೆಗೊಳಗಾದ ಸಾವಿರಾರು ಅಗ್ರಿಗೋಲ್ಡ್ ಗ್ರಾಹಕರಿಗೆ ಸರ್ಕಾರ ನ್ಯಾಯ ಒದಗಿಸಬೇಕು-ರಮೇಶ

ಭಟ್ಕಳ: ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದ ಗ್ರಾಹಕರಿಗೆ ನ್ಯಾಯ ವದಗಿಸುವ ದೃಷ್ಟಿಯಿಂದ ಅಗ್ರಿಗೋಲ್ಡ್ ಗ್ರೂಫ್ ಆಫ್ ...

ಮುರ್ಡೇಶ್ವರದ ಆರ್.ಎನ್.ಎಸ್.ಪ್ರಥಮ ದರ್ಜೆ ಕಾಲೇಜಿನಲ್ಲಿ ಪೂಲ್ ಕ್ಯಾಂಪಸ್ ಸಂದರ್ಶನ

ಭಟ್ಕಳ: ಗ್ರೀಟ್ ಟೆಕ್ನಾಲಜಿಸ್ ಪ್ರೈವೇಟ್ ಲಿಮಿಟೆಡ್ (ಟ್ಯಾಲಿ ಸಾಪ್ಟವೇರ್ ಗ್ರೂಪ್) ಬೆಂಗಳೂರು ಕಂಪನಿಯಲ್ಲಿ ಕೆಲಸ ನಿರ್ವಹಿಸಲು 100 ಜನ ...

ರಾ.ಹೆ.ಅಗಲೀಕರಣ;೩೦ರ ಬದಲು ೪೫ಮೀಟರ್ ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಬೃಹತ್ ಪ್ರತಿಭಟನೆ

ಭಟ್ಕಳ: ಇಲ್ಲಿನ ಶಿರಾಲಿ ಪಂಚಾಯತ ವ್ಯಾಪ್ತಿಯಲ್ಲಿ ಹೆದ್ದಾರಿ ಅಗಲೀಕರಣ ವಿಚಾರವಾಗಿ ಸುಮಾರು 700 ಮೀಟರವರೆಗೆ ರಸ್ತೆ ಅಗಲೀಕರಣವನ್ನು 45 ...