ವಿವಿಪಿಅಟಿ ರಹಿತ ಇವಿಎಂ ಬಳಕೆ ದೂರು:  ಕೇಂದ್ರ, ಚು.ಆಯೋಗಕ್ಕೆ ಸುಪ್ರೀಂ ನೋಟಿಸ್

Source: S O News service | By sub editor | Published on 13th April 2017, 7:13 PM | National News | Don't Miss |

ನವದೆಹಲಿ : ವಿವಿಪಿಎಟಿ ರಹಿತ ವಿದ್ಯುನ್ಮಾನ ಮತಯಂತ್ರಗಳ ಬಳಕೆಯನ್ನು ಪ್ರಶ್ನಿಸಿ ಬಿಎಸ್ಪಿ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಸಂಬಂಧ  ಚುನಾವಣಾ ಆಯೋಗ, ಹಾಗೂ ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಕೇಳಿದೆ.

ಮೇ. 8 ರಂದು ವಿಚಾರಣೆ ನಡೆಯಲಿದ್ದು ಅಷ್ಟರೊಳಗೆ ಪ್ರತಿಕ್ರಿಯೆ ನೀಡಿ ಎಂದು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ನ್ಯಾ. ಚಲಮೇಶ್ವರ್ ನ್ಯಾಯಪೀಠವು ನೋಟಿಸ್ ನೀಡಿದೆ.

ವಿಚಾರಣೆ ವೇಳೆ ಬಿಸ್ಪಿ ಪರ ವಕೀಲ ಪಿ. ಚಿದಂಬರಂ, ವಿವಿಪಿಎಟಿ ಇಲ್ಲದೇ ಇವಿಎಂ ಬಳಸುವುದರಿಂದ ಮತದಾರನಿಗೆ ತಾನು ಯಾರಿಗೆ ಮತ ಹಾಕಿದ್ದೇನೆಂದು ದೃಢವಾಗುವುದಿಲ್ಲ. ಹಾಗಾಗಿ ಮತದಾನದ ನಿಖರತೆ ಬಗ್ಗೆ ಅನುಮಾನ ಏಳುತ್ತದೆ. ಇವಿಎಂಗಳಲ್ಲಿ ವಂಚನೆ ಮಾಡುವ ಸಾಧ್ಯತೆಯಿರುತ್ತದೆ. ಈ ಮಷಿನ್ ನ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಎರಡನ್ನು ಸುಲಭವಾಗಿ ಹ್ಯಾಕ್ ಮಾಡಬಹುದು ಎಂದು ಹೇಳಿದ್ದಾರೆ.

ಹಿರಿಯ ವಕೀಲ ಕಪಿಲ್ ಸಿಬಲ್, ಈ ವಿಚಾರದಲ್ಲಿ ಕಾಂಗ್ರೆಸ್ ಮಧ್ಯಪ್ರವೇಶಿಸಲು ಇಚ್ಚಿಸುತ್ತದೆ. ಜಗತ್ತಿನಲ್ಲಿ 1 ದೇಶವನ್ನು ಹೊರತುಪಡಿಸಿ ಉಳಿದೆಲ್ಲಾ ದೇಶಗಳು ಇವಿಎಂ ಯಂತ್ರಗಳನ್ನು ಬಳಸುತ್ತಿದೆ. ಪ್ರತಿಯೊಂದು ಟೆಕ್ನಾಲಜಿಯನ್ನು ಹ್ಯಾಕ್ ಮಾಡಬಹುದು ಎಂದಿದ್ದಾರೆ.      

Read These Next

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು

ಆಂಧ್ರಪ್ರದೇಶದಲ್ಲಿ ಹಿಂಸಾಚಾರಕ್ಕೆ ತಿರುಗಿದ ಚುನಾವಣೆ: ಟಿಡಿಪಿ, ವೈಎಸ್​ಆರ್​ ಪಕ್ಷಗಳ ಇಬ್ಬರು ಕಾರ್ಯಕರ್ತರ ಸಾವು