ಸಮಸಮಾಜದ ನಿರ್ಮಾತೃ ಛತ್ರಪತಿ ಶಿವಾಜಿ ಮಹಾರಾಜ: ಡಾ.ಶಿವಾನಂದ ನಾಯ್ಕ್

Source: sonews | By Staff Correspondent | Published on 19th February 2019, 6:24 PM | Coastal News |

ಕಾರವಾರ: ಸಾಮಾಜಿಕ ಬದುಕಿನಲ್ಲಿ ಶೋಷಣೆ, ಅಸಮಾನತೆ ಸರಿಪಡಿಸಿ ಸಮಸಮಾಜದ ನಿರ್ಮಿಸುವ ನಿಟ್ಟಿನಲ್ಲಿ ಉದಯಿಸಿದ ರಾಜ ಶಿವಾಜಿ ಮಹಾರಾಜ ಎಂದು ಶಿವಾಜಿ ಕಾಲೇಜಿನ ಪ್ರಾಚಾರ್ಯ ಡಾ.ಶಿವಾನಂದ ನಾಯ್ಕ್ ಅಭಿಪ್ರಾಯಪಟ್ಟರು.
    
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮತನಾಡಿದರು.
    
ಶಿವಾಜಿ ಮಹಾರಾಜರು ರಾಜನಾಗಿದ್ದು ಸ್ವಂತ ಬಲದಿಂದ ಎಂದ ಅವರು ಸಮಾಜದಲ್ಲಿ ಹಲವಾರು ಶೋಷಣೆಗಳನ್ನು ಅನುಭವಿಸಿದ ಶಿವಾಜಿ ಮಹಾರಾಜರು ತಮ್ಮ ಸಾಮ್ರಾಜ್ಯ ಕಟ್ಟಿ ಅಲ್ಲಿನ ಶೂದ್ರರು, ಬುಡಗಟ್ಟು ಜನಾಂಗದವರು ಹಾಗೂ ಮುಸ್ಲಿಮರನ್ನು ಸಮಾನವಾಗಿ ಕಾಣುವ ಮೂಲಕ ಸಾಮಾಜಿಕ ತಾರತಮ್ಯವನ್ನು ಮೆಟ್ಟಿ ನಿಂತಿದ್ದಾರೆ ಎಂದರು.
    
ಅನ್ಯರ ವಿರುದ್ಧ ಹೋರಾಡುವ ಮೂಲಕ ಸ್ವರಾಜ್ಯ ಸ್ಥಾಪನೆಯ ಪ್ರಥಮ ರಾಜ ಛತ್ರಪತಿ ಶಿವಾಜಿ ಮಹಾರಾಜ ಎಂದ ಅವರು, ಭೂಕಬಳಿಕೆ, ಅನ್ಯಾಯಗಳನ್ನು ಎಂದೂ ಸಹಿಸಿಕೊಳ್ಳದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಮಹಾ ಪರಾಕ್ರಮಿ. ಒಮ್ಮೆ ತಮಗೆ ಅರಿವಿಲ್ಲದೆ ಮಹಿಳೆಯೊಬ್ಬರು ಆಳುತ್ತಿದ್ದ ಬಳ್ಳಾರಿಯ ಕೋಟೆಯನ್ನು ತನ್ನ ಸೈನಿಕರು ಮುತ್ತಿಗೆ ಹಾಕಿದಾಗ ವಿಷಯ ತಿಳಿದ ಶಿವಾಜಿ ಮಹಾರಾಜರು ಆ ರಾಣಿಗೆ ಕ್ಷಮೆ ಕೋರಿ ತಾವು ತಾಯಿ ಸಮಾನರು ನಿಮ್ಮ ರಕ್ಷಣೆ ಹೊಣೆ ತಮ್ಮದೆಂದು ಭರವಸೆ ನೀಡಿ ತಮ್ಮ ಮಾತೃ ಹೃದಯವನ್ನು ಪ್ರದರ್ಶಿಸಿದ ಇತಿಹಾಸವಿದೆ. ತಾಯಿ ಜೀಜಾಬಾಯಿಯವರಿಂದ ಅಂತಃಕರಣದ ಸಂಸ್ಕಾರವನ್ನೂ ಕಲಿತಿದ್ದ ಶಿವಾಜಿಯವರು ತಮ್ಮ ಆಡಳಿತದ ಅವಧಿಯಲ್ಲಿ ಎಂದೂ ದಾರಿತಪ್ಪಲಿಲ್ಲ ಎಂದರು.
    
ತಮ್ಮ ಯುದ್ಧ ತಂತ್ರಗಾರಿಕೆಯಿಂದ ಹೆಸರಾದ ಛತ್ರಪತಿ ಶಿವಾಜಿ ಮಹಾರಾಜರು ಯುವ ಯುದ್ಧೋತ್ಸಾಹಿಗಳಿಗೆ ಸಹಾ ಸ್ಫೂರ್ತಿಯ ಸೆಲೆಯಾಗಿದ್ದರು ಎಂದು ಅವರು ಹೇಳಿದರು.
    
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರವಾರದ ಉಪ ವಿಭಾಗದ ಸಹಾಯಕ ಕಮಿಷನರ್ ಅಭಿಜಿನ್ ಅವರು ಮಾತನಾಡಿ, ದೇಶಕ್ಕಾಗಿ ಬಲಿದಾನ ಮಾಡು ಸೈನಿಕರಿಗೆ ಪ್ರತಿಯೊಬ್ಬರೂ ತಮ್ಮ ಕೃತಜ್ಞತೆ ಸಲ್ಲಿಸಬೇಕಿದೆ. ಸಮರದಲ್ಲಿ ಬಲಿಯಾದ ಯೋಧರಷ್ಟೆ ಗಾಯಾಳುಗಳೂ ಸಮಾನವಾಗಿ ಹೋರಾಟದಲ್ಲಿ ಭಾಗವಹಿಸಿರುತ್ತಾರೆ. ಅವರಿಗೆ ದೇಶದ ಜನರು ನೆರವಾಗಬೇಕು ಎಂದು ಹೇಳಿದರು.
    
ನಗರಸಭೆ ಸದಸ್ಯ ಹನುಮಂತ ತಳವಾರ, ರಾಷ್ಟ್ರೀಯ ಹೆದ್ದಾರಿ ಕಾರ್ಯಪಾಲಕ ಎಂಜಿನಿಯರ್ ಸಂಪತ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಳೆದ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಹಿಮಂತರಾಜು ಜಿ ಸ್ವಾಗತಿಸಿದರು. ಶಿಕ್ಷಕ ಗಣೇಶ್ ಬಿಷ್ಟಣ್ಣನವರ ವಂದಿಸಿದರು. 
 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...