ಶ್ರೀನಿವಾಸಪುರದಲ್ಲಿ  ಫಲಾಹಿ ಉಮ್ಮತ್ ಫೌಂಡೇಷನ್ ನಿಂದ ವಿದ್ಯಾರ್ಥಿ ಸಮ್ಮೇಳನ 

Source: sonews | By Staff Correspondent | Published on 16th December 2018, 10:30 PM | State News |

ಶ್ರೀನಿವಾಸಪುರ :ನಗರದ ರಾಜಧಾನಿ ಗಾರ್ಡನ್ನಲ್ಲಿ ಫಲಾಹಿ ಉಮ್ಮತ್ ಫೌಂಡೇಷನ್  ಸಂಯುಕ್ತ  ಆಶ್ರಯದಲ್ಲಿ ವಿದ್ಯಾರ್ಥಿ ಸಮ್ಮೇಳನ ಏರ್ಪಡಿಸಲಾಗಿತ್ತು .

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಮ್ಸ್ ಉನ್ನಿಸಾ ಭಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು  ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡಬೇಕು ಮುಂಬರುವ ಎಲ್ಲ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ತೆಗೆದು ಉನ್ನತ ದರ್ಜೆಯಲ್ಲಿ   ಉತ್ತೀರ್ಣರಾಗಿ  ಶಾಲೆಗೆ ಮತ್ತು ತನ್ನ ಊರಿಗೆ  ಧನಾತ್ಮಕವಾದ ಹೆಸರನ್ನು ತಂದುಕೊಡಬೇಕೆಂದು ಕೊಡಬೇಕು ಕ್ಷೇತ್ರ ಶಿಕ್ಷಣಾಧಿಕಾರಿ  ಶಿಕ್ಷಕರಿಗೆ ಕಿವಿಮಾತನ್ನು ಹೇಳಿದ್ದರು ಶಿಕ್ಷಕರು ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಬೇಕಾಗುತ್ತದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಫಲಾಹಿ ಉಮ್ಮತ್ ಫೌಂಡೇಶನ್ ಅಧ್ಯಕ್ಷ ಅಬಿದ್ ಅನ್ಸಾರಿ, ಉಪಾಧ್ಯಕ್ಷ ಕೆ ಅಯಾಜ್ ಅಹ್ಮದ್ ಶರೀಫ್, ಕಾರ್ಯದರ್ಶಿ ಅಯಾಜ್ ಪಾಶಾ, ಪದಾಧಿಕಾರಿಗಳು ಹಾಗೂ ಡಾ ಸೈಯದ್ ಕಾಜಿಮ್ ಸಂಚಾಲಕ ಎಚ್ ಆರ್ ಡಿ ಜಮಾತ್ ಇ ಇಸ್ಲಾಮಿ ಹಿಂದ್ ಕಾರ್ನಾಟಕ. ಲೇಯಿಕ್ ಲ್ಲಾ ಖಾನ್ ಮನ್ಸುರಿ ಜಮಾತ್ ಇ ಇಸ್ಲಾಮಿ ಹಿಂದ್ ಜಿಲ್ಲೆಯ ಸಂಘಟಕ ತುಮಕೂರು, ತಾಲೂಕು ಉರ್ದು ಶಿಕ್ಷಕರ ಸಂಘದ ಅಧ್ಯಕ್ಷ ಮೊಹಮ್ಮದ್ ಸಾದಿಕ್, ಉಪಾಧ್ಯಕ್ಷ ಆರಿಫ್, ಕಾರ್ಯದರ್ಶಿ ಆಖ್ಮಲ್ ಖಾನ್, ಐ ಐ ಬಿ ಬಿ ಕಾಲೇಜು ನಿರ್ದೇಶಕ ಎಂ ಪಾಶಾ ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು .

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...