ಜಿಲ್ಲೆಗೆ ಹರಿಯುತ್ತಿರುವ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕುವುದನ್ನು ನಿಲ್ಲಿಸಲಿ; ಪ್ರಗತಿಪರ ರೈತ ಹನುಮಯ್ಯ

Source: sonews | By Staff Correspondent | Published on 28th January 2019, 6:08 PM | State News | Don't Miss |

ಕೋಲಾರ:  ಯಾವುದೇ ಶುದ್ದೀಕರಣ ಇಲ್ಲದೆ ಹರಿಯುತ್ತಿರುವ ಬೆಂಗಳೂರು ತ್ಯಾಜ್ಯ ನೀರಿನಿಂದ ಸಮೃದ್ದವಾದ ಬೆಳೆಗಳನ್ನು ಬೆಳೆದು ಆರ್ಥಿಕ ಸದೃಡರಾಗಿರುವ ಯಾವುದೇ ತೊಂದರೆ ಇಲ್ಲದೆ ಆರೋಗ್ಯವಂತರಾಗಿ ಜೀವನ ಮಾಡುತ್ತಿರುವ ತೆಮಿಳುನಾಡಿನ ಬಾಗಲೂರು ಸುತ್ತಮುತ್ತಲ ಗ್ರಾಮಗಳಿಗೆ ನೀರಾವರಿ ಹೋರಾಟಗಾರರು ಬೇಟಿ ಕೊಟ್ಟು ವಾಸ್ತವಾಂಶ ಅರಿತು ಜಿಲ್ಲೆಗೆ ಹರಿಯುತ್ತಿರುವ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕುವುದನ್ನು ನಿಲ್ಲಿಸಲಿ ಎಂದು ಪ್ರಗತಿಪರ ರೈತ ವಕ್ಕಲೇರಿ ಹನುಮಯ್ಯ ಹೋರಾಟಗಾರರಿಗೆ ತಿಳಿಹೇಳಿದರು.
    
ತೋಟಗಳಿಗೆ ಬೇಟಿಕೊಟ್ಟು ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಯಾವುದೇ ಶುದ್ದೀಕರಣವಿಲ್ಲ ಹತ್ತಾರು ವರ್ಷಗಳಿಂದ ಹರಿಯುತ್ತಿರುವ ಬೆಂಗಳೂರಿನ ತ್ಯಾಜ್ಯ ನೀರಿನಿಂದ ತೆಮಿಳುನಾಡು ರಾಜ್ಯದ ಬಾಗಲೂರು ಹಾಗೂ ಸುತ್ತಮುತ್ತಲಿನ ಸಾವಿರಾರು ರೈತರು ಇಂದು ಕ್ಯಾಪ್ಸಿಕಾಂ, ಟೊಮೇಟೊ, ಬೀನ್ಸ್, ಬಾಳೆಗಿಡ, ಹೂ. ಹಸುಗಳಿಗೆ ಮೇವು ಮೀನುಗಳ ಸಾಕಾಣಿಕೆ ಮತ್ತಿತರ ತರಕಾರಿ ಬೆಳೆಗಳನ್ನು ಬೆಳೆದು ಸಮೃದ್ದವಾದ ಬೆಳೆಗಳನ್ನು ತೆಗೆದು ಆರ್ಥಿಕವಾಗಿ ಸದೃಡವಾಗುತ್ತಿದ್ದಾರೆ. ತೋಟಗಳಿಗೆ ಬೇಟಿ ಕೊಟ್ಟು ಅಲ್ಲಿನ ರೈತರನ್ನು ವಿಚಾರಿಸಿದರೆ ಇದುವರೆಗೂ ಯಾವುದೇ ತೊಂದರೆಯಾಗಿಲ್ಲ ಆರೋಗ್ಯವೂ ಸಹಾ ಉತ್ತಮವಾಗಿದ್ದು ನಾವು ಬೆಳೆಯುವ ತರಕಾರಿ ಮತ್ತು ಹೂ. ಬೆಳೆಗಳನ್ನು ಬೆಂಗಳೂರಿನ ಮಾರುಕಟ್ಟೆಗೆ ಸರಬರಾಜು ಮಾಡುತ್ತೇವೆ. ಮಾರುಕಟ್ಟೆಯಲ್ಲೂ ಉತ್ತಮವಾದ ಬೆಲೆ ಸಿಗುತ್ತಿದೆಂದು ಸಂತೋಷ ವ್ಯಕ್ತಪಡಿಸಿದರು.  ಆದರೆ  ಬಯಲು ಸೀಮೆಯ ಕೋಲಾರ ಜಿಲ್ಲೆಗೆ ಹರಿಯುತ್ತಿರುವ 1480 ಕೋಟಿ ವ್ಯಚ್ಚದಲ್ಲಿ ಶುದ್ದೀಕರಿಸಿ ಹರಿಯುತ್ತಿರುವ ನೀರಿನಲ್ಲಿ ಯಾವ ತೊಂದರೆ ಇದೆ ಎಂದು ಯೋಜನೆಗೆ ತಡೆಯಾಜ್ಞೆ ತಂದಿದ್ದಾರೆಂದು ಬಯಲು ಸೀಮೆಯ ಲಕ್ಷಾಂತರ ರೈತರ ಪ್ರಶ್ನೆಯಾಗಿದೆ.  ಪಕ್ಕದ ರಾಜ್ಯದಲ್ಲಿ ಶುದ್ದೀಕರಿಸದೆ ಹರಿಯುವ ನೀರಿನಿಂದ ತೊಂದರೆಯಾಗುತ್ತಿಲ್ಲ ಆದರೆ ಸಾವಿರಾರು ಕೋಟಿ ಖರ್ಚು ಮಾಡಿ ಹರಿಯುವ ನೀರಿನಲ್ಲಿ ಆರೋಗ್ಯ ಕೆಡುತ್ತದೆಯೆ ಎಂಬುದು ಜನರ ಪ್ರಶ್ನೆ ತಡೆಯಾಜ್ಞೆ ತಂದು ಸಂತೋಷದಲ್ಲಿರುವ ಹೋರಾಟಗಾರರೆ ತಾವು ಪಕ್ಕದ ರಾಜ್ಯಕ್ಕೆ ಹರಿಯುತ್ತಿರುವ ನೀರಿನಿಂದ ಬೆಳೆಯುತ್ತಿರುವ ಬೆಳೆಗಳ ತೋಟಗಳಿಗೆ ಬೇಟಿ ಕೊಟ್ಟು ಮನವರಿಕೆ ಮಾಡಿಕೊಂಡು ಕೇಸನ್ನು ವಾಪಾಸ್ಸು ಪಡೆದು ಸಂಕಷ್ಟದಲ್ಲಿರುವ ರೈತರ ನೆರವಿಗೆ ಬನ್ನಿ ಎಂದು ಆಗ್ರಹಿಸಿದರು.
   
ತಾಲ್ಲೂಕಧ್ಯಕ್ಷ ಕಂಬಳ್ಳಿ ಮಂಜುನಾಥ್ ಮಾತನಾಡಿ ದಶಕಗಳಿಂದ ಬೀಕರ ಬರಗಾಲದ ಜೊತೆಗೆ ಬೆಳೆದ ಬೆಳೆಗೆ ಸೂಕ್ತವಾದ ಬೆಲೆ ಹಾಗೂ ನೀರಿನ ಸಮಸ್ಯೆಯಿಂದ  ಒದ್ದಾಡಿ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯತ್ತ ಮುಖಮಾಡುತ್ತಿದ್ದ ರೈತರ ಕಷ್ಟ ಗೊತ್ತಿರದ ನೀರಾವರಿ ಹೋರಾಟಗರರ ಹೆಸರಿನಲ್ಲಿ ರೈತರ ಕಣ್ಣೀರಿಗೆ ಕಾರಣರಾಗುವುದು ಎಷ್ಟು ಸರಿ ಅವರಿಗೆ ನೀರಿನ ಮೇಲೆ ಅನುಮಾನವಿದ್ದರೆ  ಪಕ್ಕದ ರಾಜ್ಯದ ರೈತರೊಡನೆ ಸಂವಾದ ಮಾಡಲಿ ಅವರು ಬೆಳೆಯುವ ಬೆಳೆಗಳನ್ನು ನಮ್ಮ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ಧಾರೆ ಆದ್ದರಿಂದ ಯಾವುದೇ ತೊಂದರೆಯಾಗುತ್ತಿಲ್ಲ ಈ ರೀತಿಯ ತಡೆಯಾಜ್ಞೆ ತರುವುದನ್ನು ನೋಡಿದರೆ ಇದರೆ ಹಿಂದೆ ಕಾರ್ಪೊರೇಟ್ ಕಂಪನಿಗಳ ಕೈವಾಡವಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ ಎಂದು ಆರೋಪ ಮಾಡಿದರು.
 
ತೋಟಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಪುತ್ತೇರಿ ರಾಜು, ರಾಮಪ್ಪ, ಲಕ್ಷ್ಮಣ ಮುಂತಾದವರಿದ್ದರು.
 
    

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...