ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾಟಕ್ಕೆ ತೆರೆ;ಬೆಂಗಳೂರು ವಿಭಾಗಕ್ಕೆ ಅತಿಹೆಚ್ಚು ಸ್ಥಾನ

Source: S O News service | By Staff Correspondent | Published on 6th December 2016, 7:01 PM | Coastal News | State News | Don't Miss |

ಭಟ್ಕಳ; ಕಳೆದ ಮೂರು ದಿನಗಳಿಂದ ಇಲ್ಲಿನ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ  ನಡೆಯುತ್ತಿರುವ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಬಾಲಕೀಯರ ರಾಜ್ಯಮಟ್ಟದ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿ ಸೋಮವಾರ ರಾತ್ರಿ ತೆರೆಕಂಡಿತು.
ಉ.ಕ.ಜಿಲ್ಲಾಡಳಿತ ಜಿ.ಪಂ,  ಉಪನಿರ್ದೇಶಕರ ಕಾರ್ಯಾಲಯ. ಸಾರ್ವಜನಿಕ ಶಿಕ್ಷಣ ಇಲಾಖೆ ಉತ್ತರ ಕನ್ನಡ, ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ೧೪ ಹಾಗೂ ೧೭ ವರ್ಷ ವಯೋಮಾನದ ವಿದ್ಯಾರ್ಥಿಗಳ ಮೂರು ದಿನಗಳ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಿಲಾಗಿತ್ತು.  
ಸಮಾರೋಪ ಸಮಾರಂಭಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಿ.ಪಿ.ಐ. ಸುರೇಶ ನಾಯಕ ಮಾತನಾಡಿ, ಭಟ್ಕಳ ನಗರದಲ್ಲಿ ರಾಜ್ಯಮಟ್ಟದ ಇಲಾಖಾ ಕ್ರೀಡಾಕೂಟ ಅತ್ಯಂತ ವ್ಯವಸ್ಥಿತವಾಗಿ ಜರಗಿದೆ. ಇದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳ ಶ್ರಮ ಹಾಗೂ ಇಲ್ಲಿನ ದೈಹಿಕ ಶಿಕ್ಷಕರು ಶ್ರಮ ಸ್ಮರಣೀಯವಾದುದು. ಯಾವುದೇ ಕಾರಣಕ್ಕೂ ಸೋಲು ಗೆಲುವುನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು.  . ಈ ಥ್ರೋಬಾಲ್ ಪಂದ್ಯದಲ್ಲಿ ವಿಜೇತರಾದವರು  ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯಲಿ ಎಂದು ಹಾರೈಸಿದರು. 
ಭಟ್ಕಳ ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಷ್ಣು ದೇವಾಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿಜೇತ ತಂಡದ ಬಾಲಕ ಬಾಲಕೀಯರು ಹಾಗೂ ತರಬೇತುದಾರರಿಗೆ ಶಾಲು ನೀಡಿ ಸನ್ಮಾನಿಸಲಾಯಿತು. 
ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಪಟಗಾರ ಸ್ವಾಗತಿಸಿದರು. ಶ್ರೀಧರ ಶೇಟ್ ಶಿರಾಲಿ ಕಾರ್ಯಕ್ರಮದ ನಿರೂಪಿಸಿದರು. ಜಿ.ವಿ.ನಾಯ್ಕ. ವಂದನಾರ್ಪಣೆಯನ್ನು ಸಲ್ಲಿಸಿದರು. 
ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಬಿ.ನಾಯ್ಕ. ಆರ್.ಎಚ್.ನಾಯ್ಕ, ಎಂ.ಕೆ.ನಾಯ್ಕ ಮತ್ತಿತರರು  ಉಪಸ್ಥಿತರಿದ್ದರು.  
ಫಲಿತಾಂಶ: 
೧೪ ವರ್ಷ ವಯೋಮಾನ- ಬಾಲಕರ ವಿಭಾಗ. 
ಪ್ರಥಮ ಸ್ಥಾನ - ಬೆಂಗಳೂರು ವಿಭಾಗ ತಂಡ. ದ್ವಿತೀಯ ಸ್ಥಾನ - ಬೆಳಗಾವಿ ವಿಭಾಗ ತಂಡ. 
ಬಾಲಕಿಯರ ವಿಭಾಗ:  ಪ್ರಥಮ ಸ್ಥಾನ - ಮೈಸೂರು ವಿಭಾಗ ತಂಡ.  ದ್ವಿತೀಯ ಸ್ಥಾನ- ಬೆಂಗಳೂರು ವಿಭಾಗ ತಂಡ. 

೧೭ ವರ್ಷದ ವಯೋಮಾನ- ಬಾಲಕರ ವಿಭಾಗ:  

ಪ್ರಥಮ ಸ್ಥಾನ - ಬೆಂಗಳೂರು ತಂಡ. ದ್ವಿತೀಯ ಸ್ಥಾನ, ಗುಲಬರ್ಗಾ ವಿಭಾಗ ತಂಡ. 
ಬಾಲಕಿಯರ ವಿಭಾಗ:  ಪ್ರಥಮ ಸ್ಥಾನ - ಮೈಸೂರು ವಿಭಾಗ ತಂಡ.   ದ್ವಿತೀಯ ಸ್ಥಾನ - ಬೆಂಗಳೂರು ವಿಭಾಗ ತಂಡ.

 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...