ಕಠಿಣ ಪರಿಸ್ಥಿತಿಯಲ್ಲೋ ಮುಖ್ಯಮಂತ್ರಿ ಕುಮಾರ್ ಸ್ವಾಮಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ: ಎಮ್. ಗಂಗಣ್ಣಾ

Source: sonews | By Staff Correspondent | Published on 27th September 2018, 10:40 PM | Coastal News | Don't Miss |

ಭಟ್ಕಳ: ಪ್ರಸ್ತಕ್ತ ರಾಜಕೀಯ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಒತ್ತಡಗಳ ನಡುವೆಯೂ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷ ಗಂಗಣ್ಣಾ ಹೇಳಿದರು. 

ಅವರು ಗುರುವಾರ ಇಲ್ಲಿನ ಪ್ರವಾಸಿಬಂಗ್ಲೆಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು. 

ದಿನ ಬೆಳಗಾದರೆ ಸಾಕು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮುಖ್ಯಮಂತ್ರಿ ಕುಮಾರ್ ಸ್ವಾಮಿಯವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಅತ್ಯಂತ ಕಠಿಣ ಪರಿಸ್ಥಿತಿಯಲ್ಲೋ ಕುಮಾರ್ ಸ್ವಾಮಿಯವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. 48000 ಕೋಟಿ ರೂ ರೈತರ ಸಾಲಮನ್ನಾ ಮಾಡಿದ್ದು ಇದು ಅತ್ಯಂತ ಪ್ರಶಂಸನೀಯವಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಅಂಟಿಕೊಂಡಿರುವ ಕೊಳೆ ರೋಗದ ಕುರಿತಂತೆ ವರದಿಯನ್ನು ಕೇಳಲಾಗಿದ್ದು ಇದಕ್ಕೂ ಸೂಕ್ತ ಕ್ರಮ ಜರಗಿಸಲಾಗುವುದು ಎಂದರು. 

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಷಡ್ಯಂತ್ರಗಳ ಮೂಲಕ ದುರ್ಬಲಗೊಳಿಸಲು ಪ್ರಯತ್ನಿಸಿದರೆ ರಾಜ್ಯದ ಜನತೆ ಸಿಡಿದೇಳುತ್ತಾರೆ ಎಂಬ ಹೇಳಿಕೆಯನ್ನು ಮಾಧ್ಯಮಗಳು ತಮಗೆ ತೋಚಿದಂತೆ ತಿರುಚಿ ಪ್ರಕಟಿಸಿದ್ದು ಮನಸ್ಸಿಗೆ ಬೇಸರ ತಂದಿದೆ ಎಂದ ಅವರು, ಕೆಲ ಮಾಧ್ಯಮಗಳ ದೋರಣೆಯನ್ನು ಟೀಕಿಸಿದರು. ಉತ್ತರಕನ್ನಡ ಜಿಲ್ಲೆಯಲ್ಲಿ ಜೆ.ಡಿ.ಎಸ್. ಪಕ್ಷ ಶಕ್ತಿಯುತವಾಗಿದ್ದು ಪಕ್ಷದ ಮುಖಂಡರುಗಳಲ್ಲಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ದುರ್ಬಲಗೊಂಡಿದ್ದು ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಪಡಿಸಲು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷವನ್ನು ಮರುಸಂಘಟಿಸಲಾಗುವುದು ಎಂದರು. ಜಿಲ್ಲೆಯ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸಹಕರಿಸುವುದಾಗಿ ಅವರು ಭರವಸೆ ನೀಡಿದರು. 

ಜೆಡಿಎಸ್ ತಾಲೂಕಾಧ್ಯಕ್ಷ ಇನಾತುಲ್ಲಾ ಶಾಬಂದ್ರಿ ಮಾತನಾಡಿ, ಭಟ್ಕಳದಲ್ಲಿನ ಅರಣ್ಯ ಅತಿಕ್ರಮಣದ ಸಮಸ್ಯೆಯನ್ನು  ಕುಮಾರ್ ಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಗೆಹರಿಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.  

ಜೆ.ಡಿ.ಎಸ್. ರಾಜ್ಯ ಕಾರ್ಯದರ್ಶಿ ಸಂತೋಷ್ ರಾಯ್ಕರ್, ಡಿ.ಎಚ್.ಪಟಗಾರ, ಮುನಾಫ್ ಮಿರ್ಜಾನ್ಕರ್, ಎಂ.ಡಿ.ನಾಯ್ಕ, ಈಶ್ವರ್ ನಾಯ್ಕ, ಕೃಷ್ಣಾನಂದಾ ಪೈ, ವೆಂಕಟೇಶ್ ನಾಯ್ಕ, ವಿ.ಆರ್.ನಾಯ್ಕ, ಇಬ್ರಾಹಿಂ, ಅಬ್ದುಲ್ ಸಮದ್ ಸೇರಿದಂತೆ ಇತರರು ಉಪಸ್ಥಿತರಿದ್ದರು. 
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...