ಮ0ಗಳೂರು ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆ - ನಿಷೇಧಾಜ್ಞೆ

Source: so news | By MV Bhatkal | Published on 19th June 2018, 8:40 PM | Coastal News |

ಮ0ಗಳೂರು :- ಜೂನ್ 21 ರಿಂದ 28 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 20 ಪರೀಕ್ಷಾ ಕೇಂದ್ರಗಳಲ್ಲಿ ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಬಾಹಿರ ಚಟುವಟಿಕೆ, ಅಹಿತಕರ ಘಟನೆಗಳು ನಡೆಯದಂತೆ ಮತ್ತು ಪರೀಕ್ಷೆಗಳನ್ನು ಸುಸೂತ್ರವಾಗಿ ಹಾಗೂ ದೋಷರಹಿತವಾಗಿ ನಡೆಸುವ ನಿಟ್ಟಿನಲ್ಲಿ ದ.ಕ ಜಿಲ್ಲೆಯಲ್ಲಿ ಪೊಲೀಸು ಕಮೀಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ  ಎಸ್.ಎಸ್.ಎಲ್.ಸಿ. ಪೂರಕ ಪರೀಕ್ಷಾ ಕೇಂದ್ರಗಳ 200ಮೀ. ಸುತ್ತಳತೆಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144ರಂತೆ ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಿದ್ದಾರೆ.
ನಿಷೇಧಿತ ವಲಯದಲ್ಲಿ ಯಾವುದೇ ರೀತಿಯಲ್ಲಿ ಪರೀಕ್ಷೆಯಲ್ಲಿ ನಕಲು ಹೊಡೆಯಲು ಸಹಾಯ ಸಹಾಯ ಮಾಡುವುದು, ಚೀಟಿ ಅಥವಾ ಇನ್ನಿತರ ರೀತಿಯಲ್ಲಿ ಉತ್ತರಗಳನ್ನು ಬರೆದು ಹಂಚುವುದು ಅಥವಾ ಇನ್ನಾವುದೇ ವಸ್ತುಗಳನ್ನು ಹಂಚುವುದು/ರವಾನಿಸುವುದು ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿದೆ.
ನಿಷೇದಿತ ವಲಯದಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನು ಕೊಂಡು ಹೋಗುವುದನ್ನು ಹಾಗೂ ಇನ್ನಿತರ ಮಾರಕ ಆಯುಧಗಳನ್ನು ಹೊಂದುವುದನ್ನು ನಿಷೇಧಿಸಿದೆ. ನಿಷೇಧಿತ ವಲಯದಲ್ಲಿ ಪರೀಕ್ಷೆಗೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ಮಾಹಿತಿಯನ್ನು ರವಾನಿಸುವ ಅಥವಾ ತಿಳಿಸುವ ಸಲುವಾಗಿ ಸಂಜ್ಞೆಗಳನ್ನು ಮಾಡುವುದು ಹಾಗೂ ಇನ್ನಿತರ ಕ್ರಿಯೆಗಳಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
 ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮುಂಚಿತವಾಗಿ ಹಾಗೂ ಪರೀಕ್ಷಾ ಅವಧಿಯವರೆಗೆ ಪರೀಕ್ಷಾ ಕೇಂದ್ರಗಳಿಂದ 200 ಮೀಟರ್ ವ್ಯಾಪ್ತಿಯಲ್ಲಿರುವ ಜೆರಾಕ್ಸ್ ಅಂಗಡಿಗಳು ಕಾರ್ಯ ನಿರ್ವಹಿಸುವುದನ್ನು ನಿಷೇಧಿಸಿದೆ. 
ಪರೀಕ್ಷಾ ಕೇಂದ್ರದ ಹೆಸರು ಮತ್ತು ವಿಳಾಸ ಇಂತಿವೆ: ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ, ಶಾರದಾ ಪ್ರೌಢಶಾಲೆ, ಪಾಣೆಮಂಗಳೂರು, ಬಂಟ್ವಾಳ, ಎಸ್.ವಿ.ಎಸ್. ಪ್ರೌಢಶಾಲೆ ,ಬಂಟ್ವಾಳ, ಸೇಂಟ್ ತೆರೇಸಾ ಪ್ರೌಢಶಾಲೆ, ಬೆಳ್ತಂಗಡಿ, ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆ,(ಎಸ್.ಡಿ>ಎಂ), ಧರ್ಮಸ್ಥಳ, ಬೆಳ್ತಂಗಡಿ, ರೋಜಾರಿಯೋ ಪ್ರೌಢಶಾಲೆ, ಬೋಳಾರ, ಮಂಗಳೂರು, ಮಿಲಾಗ್ರೀಸ್ ಪದವಿ ಪೂರ್ವ ಕಾಲೇಜು, ಹಂಪನಕಟ್ಟೆ, ಸೇಂಟ್ ಅಲೋಷಿಯಸ್ ಪ್ರೌಢಶಾಲೆ, ಕೊಡಿಯಾಲ್ ಬೈಲ್, ಕೆನರಾ ಪ್ರೌಢಶಾಲೆ(ಪ್ರಧಾನ), ಡೊಂಗರಕೇರಿ, ಗಣಪತಿ ಪ.ಪೂ. ಕಾಲೇಜು, ಹಂಪನಕಟ್ಟೆ, ಬೆಸೆಂಟ್ ಪ್ರೌಢಶಾಲೆ, ಕೊಡಿಯಾಲ್ ಬೈಲ್, ಕಾಸಿಯಾ ಪ್ರೌಢಶಾಲೆ, ಜೆಪ್ಪು, ಮಂಗಳೂರು, ಸೇಂಟ್ ಮೇರೀಸ್ ಬಾಲಕಿಯರ ಪ್ರೌಢಶಾಲೆ, ಫಳ್ನೀರ್, ಪದುವಾ ಪ್ರೌಢಶಾಲೆ, ನಂತೂರು, ಮಂಗಳೂರು, ಸೈಂಟ್ ಆಗ್ನೇಸ್ ಪ್ರೌಢಶಾಲೆ, ಬೆಂದೂರ್, ಮಂಗಳೂರು, ಜೈನ್ ಪದವಿ ಪೂರ್ವ ಕಾಲೇಜು,(ಪ್ರೌಢಶಾಲಾ ವಿಭಾಗ), ಮೂಡಬಿದ್ರೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಕೊಂಬೆಟ್ಟುಪುತ್ತೂರು, ಸಂತ ಫಿಲೋಮಿನಾ ಪ್ರೌಢಶಾಲೆ, ದರ್ಬೆ, ಪುತ್ತೂರು, ಸೇಂಟ್ ವಿಕ್ಟರ್ ಬಾಲಕಿಯರ ಪ್ರೌಢಶಾಲೆ, ಪುತ್ತೂರು, ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯ. 

 

Read These Next