ಜು.19 ರಂದು ಎಸೆಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ;ಎಸ್.ಎಂ.ಎಸ್ ಮೂಲಕ ಮೂಬೈಲ್ ಗೆ ರವಾನೆ

Source: sonews | By Staff Correspondent | Published on 18th July 2018, 7:33 PM | State News | Don't Miss |

ಬೆಂಗಳೂರು: ಜೂನ್ 2018ರ ಎಸೆಸೆಲ್ಸಿ ಪೂರಕ ಪರೀಕ್ಷೆಯ ಫಲಿತಾಂಶವನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಜು.19ರ ಮಧ್ಯಾಹ್ನ 12 ಗಂಟೆ ನಂತರ ಎಸ್‌ಎಂಎಸ್ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಶಾಲಾ ಫಲಿತಾಂಶಗಳನ್ನು ಎಸ್‌ಎಟಿಎಸ್ ಜಾಲತಾಣದಲ್ಲಿಯೂ ಪಡೆಯಬಹುದು. ಪ್ರೌಢಶಾಲೆಗಳಲ್ಲಿ ಜು.20ರ ಮಧ್ಯಾಹ್ನ 12ಗಂಟೆಯ ನಂತರ ಪ್ರಕಟಿಸಲಾಗುವುದು.

ಎಸೆಸೆಲ್ಸಿ ಪರೀಕ್ಷಾ ಫಲಿತಾಂಶವನ್ನು http://sslc.kar.nic.in ಹಾಗೂ http://karresults.nic.in ಜಾಲತಾಣಗಳಲ್ಲಿ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳ ಛಾಯಾಪ್ರತಿ ಹಾಗು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಆನ್ಲೈನ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.

www.kseeb.kar.nic.in ಜಾಲತಾಣದಲ್ಲಿ ಈ ಬಗ್ಗೆ ಸುತ್ತೋಲೆ ಹಾಗು ಅರ್ಜಿ ಹಾಕುವ ವಿಧಾನದ ವಿವರಗಳನ್ನು ನೀಡಲಾಗಿದೆ. ಜು.19 ರಿಂದ 28ರ ವರೆಗೆ ಛಾಯಾಪ್ರತಿಗಾಗಿ ಅರ್ಜಿ ಸಲ್ಲಿಸಬಹುದು. ಜು.21ರಿಂದ ಆಗಸ್ಟ್ 4ರ ವರೆಗೆ ಮರುಮೌಲ್ಯ ಮಾಪನಕ್ಕಾಗಿ ಅರ್ಜಿ ಸಲ್ಲಿಸಲು ಮಂಡಳಿ ತಿಳಿಸಿದೆ.

ಜೂನ್ 2018ರ ಎಸೆಸೆಲ್ಸಿ ಪೂರಕ ಪರೀಕ್ಷೆಯನ್ನು ಜೂನ್ 21ರಿಂದ ಜೂ.28ರ ವರೆಗೆ ರಾಜ್ಯಾದ್ಯಂತ ಒಟ್ಟು 673ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದೆ. ಜೂನ್-2018ರಲ್ಲಿ ವಿದ್ಯಾರ್ಥಿಯ ಪ್ರಯತ್ನದ ಸಂಖ್ಯೆ ಹಾಗೂ ಅಭ್ಯಸಿಸಿರುವ ಪಠ್ಯಕ್ರಮವನ್ನು ಅನುಸರಿಸಿ ಮೊದಲ ಬಾರಿಗೆ ಪ್ರಶ್ನೆಪತ್ರಿಕೆಗಳ ವಿಧಗಳನ್ನು ಸರಳೀಕರಿಸಿ ಎ ಮತ್ತು ಬಿ (ರೆಗ್ಯಲರ್ ಕೇಂದ್ರಗಳಿಗೆ) ಹಾಗೂ ಸಿ ಮತ್ತು ಡಿ (ಖಾಸಗಿ ಕೇಂದ್ರಗಳಿಗೆ) ಎಂದು ಭಾಗಿಸಿ ಪರೀಕ್ಷಾ ನಿರ್ವಹಣೆಯನ್ನು ಸುಲಭವಾಗುವಂತೆ ಮಾಡಲಾಗಿದೆ.

ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಜು.8ರಿಂದ ರಾಜ್ಯದ 9 ಶೈಕ್ಷಣಿಕ ಜಿಲ್ಲೆಗಳ 50 ಮೌಲ್ಯಮಾಪನ ಕೇಂದ್ರಗಳಲ್ಲಿ ಒಟ್ಟು 10,946 ಮೌಲ್ಯಮಾಪಕರುಗಳನ್ನು ನಿಯೋಜಿಸಿ ನಡೆಸಲಾಗಿದೆ. ಮೌಲ್ಯಮಾಪನದ ನಂತರ ಅಂಕಗಳನ್ನು ಅಂತರ್ಜಾಲ ಆಧಾರಿತ ತಂತ್ರಾಂಶದ ನೆರನೊಂದಿಗೆ ಮೌಲ್ಯಮಾಪನ ಕೇಂದ್ರಗಳಿಂದ ನೇರವಾಗಿ ಮಂಡಳಿಯ ಸರ್ವರ್‌ಗೆ ವರ್ಗಾಯಿಸಲಾಗಿದೆ. ಇದು ನೂತನ ಪ್ರಯತ್ನವಾಗಿದ್ದು ಯಶಸ್ವಿಯಾಗಿದೆ.

ಫಲಿತಾಂಶವನ್ನು ಎಪ್ರಿಲ್-2018ರ ರೀತಿಯಲ್ಲಿಯೇ ಮಂಡಳಿಯಿಂದ (ಮಲ್ಲೇಶ್ವರಂ) ನಿಯಂತ್ರಣದಲ್ಲಿರುವ ಕೆಎಸ್‌ಡಿಸಿ ಸರ್ವರ್‌ನಲ್ಲಿ (ವಿಕಾಸಸೌಧ) ಸಿದ್ದಪಡಿಸಲಾಗಿದೆ. ಮೌಲ್ಯಮಾಪಕರಿಗೆ ಇದೇ ಮೊದಲ ಬಾರಿಗೆ ನೋಂದಣಿ ಸಮಯದಲ್ಲಿ ಸಂಗ್ರಹಿಸಿರುವ ಬ್ಯಾಂಕ್ ಖಾತೆಗಳಿಗೆ ಎನ್‌ಇಎಫ್‌ಟಿ ಮೂಲಕ ಗೌರವಧನವನ್ನು ಪಾವತಿಸಲಾಗಿದೆ.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...