ಶ್ರೀನಿವಾಸಪುರ: 363 ಶಿವ ನಮಸ್ಕಾರ ಮಾಡಿದರೆ ಸರ್ವಾಂಗ ಆರೋಗ್ಯ ವೃದ್ಧಿ 

Source: shabbir ahmed | By Arshad Koppa | Published on 26th February 2017, 8:21 AM | State News |

ಶ್ರೀನಿವಾಸಪುರ,  ಫೆ ೨೪: 363 ಶಿವ ನಮಸ್ಕಾರ ಮಾಡುವುದರಿಂದ ದೇಹದ ಸರ್ವಾಂಗ ಆರೋಗ್ಯ ವೃದ್ಧಿಯಾಗಿ  ಬೆಸಿಗೆಯ ಪ್ರಕೃತಿ ತಾಪಮಾನ ತಡೆಯುವ ಶಕ್ತಿ ಮಾನಸಿಕ ದೈಹಿಕ ಸಮತೋಲನ ದೊರೆಯುತ್ತದೆ ಎಂದು ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀನಿವಾಸಪುರ ಶಾಖೆಯ ಸಂಚಾಲಕರಾದ ಮುಖ್ಯ ಶಿಕ್ಷಕ ಚೌಡಪ್ಪ ಹೇಳಿದರು.
   ಬಾಲಕೀಯರ ಪಪೂ ಕಾಲೇಜು ಸಮೀಪದ ಕೃಷ್ಣೇಗೌಡ ಅವರ ಸಭಾಂಗಣದಲ್ಲಿ ಶುಕ್ರವಾರ ಶ್ರೀಪತಂಜಲಿ ಯೋಗ ಶೀಕ್ಷಣ ಸಮಿತಿಯಿಂದ ಪ್ರಥಮ ಬಾರಿ ಶಿವ ನಮಸ್ಕಾರ (ಏಕಾದಶಿ ರುದ್ರ ನಮಸ್ಕಾರ) ಮಹಾಶಿವರಾತ್ರಿ ಅಂಗವಾಗಿ ಏರ್ಪಡಿಸಿದ್ದ ಸಾಮೂಹಿಕ 363 ಶಿವ ನಮಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
  ಮಾಘಮಾಸ ಅಂತ್ಯವಾಗಿ ಬೇಸಿಗೆ ಪ್ರಾರಂಭದಿಂದ ಪ್ರಕೃತಿಕವಾಗಿ ಜನಸಾಮಾನ್ಯರ ಆರೋಗ್ಯ ಹೊಂದಿಕೊಳ್ಳಲು ಕಷ್ಟವಾಗುವುದರಿಂದ ಶಿವನ ನಾನಾ 11 ರೂಪಗಳ ರುದ್ರ ನೃತ್ಯ ನರ್ತನ ಕಲೆಯನ್ನು ಪ್ರತಿ ಸುತ್ತಿಗೆ 33 ಶಿವ ನಮಸ್ಕಾರಗಳಂತೆ 11 ಸುತ್ತುಗಳಲ್ಲಿ 363 ನಮಸ್ಕಾರ ಮಾಡುವುದರಿಂದ ಮಾನಸಿಕ ದೈಹಿಕ ಭೌತಿಕ ಕೌಟುಂಬಿಕ ಭಾವನಾತ್ಮಕ ಸಮಸ್ಯೆಗಳು ದೂರವಾಗಿ ಪರಶಿವನು ನಮಗೆ ಆರೋಗ್ಯ ವೃದ್ಧಿಸಿ ಶಕ್ತಿ ಮನಃಶಾಂತಿ ತುಂಬಿ ಸಹನಶಿಲರನ್ನಾಗಿ ಸೇವಾ ಮನೋಭಾವ ಕರುಣ ಸುತ್ತಾನೆ.
  ಮಾನವ ದೇಹದಲ್ಲಿನ ಶೆಟ್ ಚಕ್ರಗಳು ಕ್ರಿಯಾಶೀಲವಾಗಿ ದೇಹದ 9 ಮಹದ್ವಾಗಳು ಅಂದರೆ ಕಣ್ಣು, ಕಿವಿ, ಮೂಗು ಎರಡೆರಡು ಸೇರಿ 6 ಮತ್ತು ಬಾಯಿ ಹಾಗೂ ಮಲ ಮೂತ್ರ ವಿಸರ್ಜನಾಂಗ ದ್ವಾರಗಳು ಸೇರಿ ಮನುಷ್ಯನ ದೇಹದ ನವ ರಂದ್ರಗಳು ಕ್ರಿಯಾಶಿಲವಾಗುತ್ತವೆ. ಇದರಿಂದ ನವಗ್ರಹ ದೋಶ ನಿವಾರಣೆಗೊಂಡು 9 ಗ್ರಹ ಜಾಗೃತಗೊಂಡು ನಮ್ಮ ಉಳಿವಿಗೆ ಕಾರಣರಾದ ಬ್ರಹ್ಮ ವಿಷ್ಣು ಮಹೆಶ್ವರ ತ್ರಿಮೂರ್ತಿಗಳ ಅನುಗ್ರಹ ನಮಗೆ ದೊರೆತು ವರ್ಷದ 365 ದಿನಗಳು ಶನಿ ರಾಹು ಕೇತು ದೋಶ ಮುಕ್ತರಾಗಿ ಕುಟುಂಬ ಮತ್ತು ನಮ್ಮ ಜೀವನದಲ್ಲಿ ಬಳಲಿಕೆ ತಪ್ಪುತ್ತದೆ ಎಂದು ವಿವರಿಸಿದರು.
  ಶಿಕ್ಷಕ ಎಸ್.ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿ ಪ್ರತಿ ನಮಸ್ಕಾರದಲ್ಲಿ ಓಂ ನಮಃ ಶಿವಾಯ ಮಂತ್ರ ಪಠನೆಯೊಂದಿಗೆ ಪ್ರತಿ ಸುತ್ತಿನಲ್ಲಿ 21 ಸಲ ಹಣೆಯನ್ನು ನೆಲಕ್ಕೆ ಮುಟ್ಟಿಸುವುದರಿಂದ ಹಸಿವು, ಬಾಯಾರಿಕೆ, ಚಳಿ, ಬಿಸಿಲು, ತಿರುಗಾಟದ ಬಳಲಿಕೆ, ಮಲಗುವ ಸಮಸ್ಯೆ, ಕುಳಿತುಕೊಳ್ಳುವ ತೊಂದರೆ, ಯೋಚನ ಶಕ್ತಿ ತೊಂದರೆ, ಉತ್ತಮ ಜ್ಞಾನ ಇಲ್ಲವೆಂಬ ಕೊರಗು, ಗೌರವ ಸಿಗದಿದ್ದಾಗ ಸಹನೆಗೆ ಬಂಗ ಬಾರದೆ ಆ ಪರಮಾತ್ಮನು ಶಾಂತಿ ಸಹನೆ ಮೈಗೂಡುತ್ತದೆ. 9 ಭಾರಿ ಮಂಡಿಗೆ ತಾಕಿಸಿ 3 ಸಲ ಶಿವನ ಸ್ಮರಣೆಯಿಂದ ಪ್ರತಿ ಸುತ್ತಿನಲ್ಲಿ 33 ಬಾರಿ ಶಿವನ ಪಠನೆ ಸೇರಿ 363 ಸಲ ಶಿವ ಸ್ಮರಣೆ ಸ್ಥಿತಿ ರೂಪಕಗಳು ಮಾಡುವುದರಿಂದ 33 ಕೋಟಿ ದೇವತೆಗಳ ದೂಶ ಮುಕ್ತರಾಗಿ ಹೆಚ್ಚು ದೈಹಿಕ ಕ್ಷಮತೆ ವೃದ್ಧಿಯಾಗುತ್ತದೆ. ಇದರಿಂದ ಶಿವರಾತ್ರಿ ಹಬ್ಬದ ದಿನ ಪೂರ್ತಿ 3 ಹೊತ್ತು ಉಪವಾಸ ಮಾಡಲು ದೈವ ಕೃಪಾ ಸಂಕಲ್ಪ ನಮ್ಮ ಮೇಲೆ ಇರುವುದರಿಂದ ದೇಹ ಬಳಲಿಕೆಯಾಗದೆ ಚೈತನ್ಯವಾಗಿರುತ್ತದೆ ಎನ್ನುವುದು ನಮಗರಿವಾಗುತ್ತದೆ.


  ಮನುಷ್ಯನ ಆರೋಗ್ಯ ವೃದ್ಧಿಯಾಗಿ ಮಾನಸಿಕ ದೈಹಿಕ ಸಮತೋಲನ ಏಕಾಗ್ರತೆ ಆದ್ಯಾತ್ಮಿಕ ಭಾವನಾತ್ಮಕ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು. ಭೂಮಿ ಮೇಲಿನ ಮಾನವರಾದಿಯಾಗಿ ಪಶು ಪಕ್ಷಿ ಪ್ರಾಣ  ಸೇರಿದಂತೆ ಎಲ್ಲಾ ಜೀವರಾಶಿ ಮರ ಗಿಡ ಸಸ್ಯ ಸಂಕುಲದಲ್ಲಿ ಎಲ್ಲಾ ಕೆಲಸ ಕಾರ್ಯಗಳಲ್ಲಿ ಶಿವ ಸ್ವರೂಪ ಇದೆ ಎನ್ನುವುದು ಯಾರು ಮತೆಯುವಂತಿಲ್ಲ. ಕಷ್ಟಕರವಾದ 363 ಶಿವ ನಮಸ್ಕಾರ ಮಾಡಿದ್ದು ಕಂಡರೆ ಪ್ರತ್ಯಕ್ಷ ದೈವವೆ ಇವರಿಗೆ ಶಕ್ತಿ ಅನುಗ್ರಹಿಸಿದ್ದಾರೆಂದರೆ ತಪ್ಪಾಗಲಾರದೆಂದು ಸ್ಮರಿಸಿದರು. ಸಹ ಶಿಕ್ಷಕಿ ವರಲಕ್ಷ್ಮಿ ಮತ್ತು ಉಮಾದೇವಿ ಶಿವ ನಮಸ್ಕಾರ ಮಾಡಿಸಿದರು. ಪ್ರಬಾವತಮ್ಮ ಪಂಚಂಗ ಪಠಿಸಿ, ವಸಂತಲಕ್ಷ್ಮಮ್ಮ ಅಮೃತ ವಚನ ಪಠಿಸಿದರು.


 

Read These Next

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...