ಶ್ರೀನಿವಾಸಪುರ:  ಕೃಷಿ ಮೇಳಕ್ಕೆ ತಾಲೂಕಿನ ರೈತರನ್ನು ಕರೆತರಲು ಉಚಿತ ಬಸ್ ವ್ಯವಸ್ಥೆ

Source: shabbir | By Arshad Koppa | Published on 19th November 2017, 8:31 AM | State News |

ಶ್ರೀನಿವಾಸಪುರ, - ನವಂಬರ್-18: ಕೃಷಿ ಮೇಳಗಳಿಂದ ರೈತರಿಗೆ ಉಪಯುಕ್ತ ಮಾಹಿತಿ ಲಭ್ಯವಾಗಲಿದ್ದು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವ ಆಧುನಿಕ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಪಡೆಯ ಬಹುದಾಗಿದೆ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ವಿನಯ್ ಹೇಳಿದರು.
  ಶನಿವಾರ ಬೆಳಿಗ್ಗೆ ಪಟ್ಟಣದ ಸಹಾಯಕ ಹಿರಿಯ ತೋಟಗಾರಿಕೆ ನಿರ್ಧೇಶಕರ ಕಛೇರಿ ಮುಂಬಾಗ ಬೆಂಗಳೂರಿನ ಜಿಕೆವಿಕೆಯಲ್ಲಿ ರಾಜ್ಯ ಕೃಷಿ ಮೇಳ ನಡೆಯುತ್ತಿರುವುದರಿಂದ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ಆಶ್ರಯದಲ್ಲಿ ತಾಲೂಕಿನ ರೈತರನ್ನು ಬಸ್ಸಿನಲ್ಲಿ ಉಚಿತವಾಗಿ ಕರೆದು ಕೊಂಡು ಹೋಗವ ಸಂದರ್ಭದಲ್ಲಿ ಮಾತನಾಡಿದ ಇವರು ಆಧುನಿಕ ತಂತ್ರಜ್ಞಾನ ಬೇಸಾಯವನ್ನು ಅಳವಡಿಸಿಕೊಳ್ಳಲು ಉತ್ತೇಜನ ನೀಡಲು ಮತ್ತು ಅವರಿಗೆ ಉಪಯುಕ್ತ ಮಾಹಿತಿ ನೀಡಲು ಇಂತಹ ಕಾರ್ಯಕ್ರಮಗಳನ್ನು ಆಗಿಂದಾಗ್ಗೆ ಆಯೋಜಿಸಬೇಕಾಗಿದೆ. ಕಡಿಮೆ ನೀರಾವರಿಯನ್ನು ಬಳಸಿಕೊಂಡು ತರಕಾರಿ ಬೆಳೆಗಳನ್ನು ಕೋಲಾರ ಜಿಲ್ಲೆಯ ರೈತರು ದೇಶದಲ್ಲಡೆ ಮಾಧರಿಯಾಗಿದ್ದಾರೆ. ಕೋಲಾರ ಜಿಲ್ಲೆಯ ತರಕಾರಿಗೆ ಹೊರ ರಾಜ್ಯಗಳಲ್ಲಿ ಬಹಳ ಬೇಡಿಕೆ ಇದ್ದು ಮತ್ತಷ್ಟು ವೈಜ್ಞಾನಿಕ ಯಂತ್ರಗಳನ್ನು ಬಳಸಿ ಕೃಷಿಗೆ ಉತ್ತೇಜಿಸ ಬೇಕಾಗಿದೆ ಎಂದು ತಿಳಿಸಿದರು.
   ಬಾರತೀಯ ಕಿಸಾನ್ ಸಂಘದ ತಾಲೂಕು ಸಂಚಾಲಕ ಕೊಳತೂರು ಬಾಲಚಂದ್ರ ಮಾತನಾಡಿ ದೇಶದ ಬೆನ್ನೆಲುಬು ರೈತರಾಗಿದ್ದಾರೆ. ರೈತರು ಬೆಳೆದ ಬೆಳಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಸರ್ಕಾರದ ಕೆಲಸವಾಗಿದೆ. ತಂತ್ರಜ್ಞಾನದಲ್ಲಿ ದೇಶ ಮುಂದುವರೆದಿದ್ದರೂ ರೈತರಿಗೆ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದೇವೆ. ಅದರಿಂದಾಗಿಯೇ ಆಗಿಂದಾಗ್ಗೆ ತರಕಾರಿ ಮತ್ತು ಧವಸ ಧಾನ್ಯಗಳ ಬೆಲೆಗಳು ಇಳಿಮುಖ ಹಾಗೂ ಏರಿಕೆಯಾಗುತ್ತಿರುತ್ತದೆ. ದೇಶದ ಜನರ ಸಂಖ್ಯೆಗನುಗುಣವಾಗಿರುವ ಬೇಡಿಕೆ ಮತ್ತು ವಿಧೇಶಗಳಿಗೆ ರಫ್ತು ಮಾಡುವ ಸಾಮಥ್ರ್ಯಕ್ಕೆ ತಕ್ಕಂತೆ ರೈತರಿಗೆ ಪದಾರ್ಥಗಳ ಬಗ್ಗೆ ಮಾಹಿತಿ ನೀಡುವಲ್ಲಿ ಸರ್ಕಾರಗಳು ವಿಫಲಾವಾಗಿವೆ. ಧಾನ್ಯಗಳನ್ನು ಹೆಚ್ಚು ಬೆಳೆದಾಗ ರೈತರಿಗೆ ಬೆಲೆ ಇಲ್ಲವೆಂದು ದಳ್ಳಾಳಿಗಳು ರೈತರ ಬಳಿ ಸುಲಿಗೆ ಮಾಡುತ್ತಾರೆ ಇದನ್ನು ತಪ್ಪಿಸಲು ಪ್ರತಿ ತಾಲೂಕು ಕೇಂದ್ರಗಳಲ್ಲಿ ರೈತರ ಬೆಳೆಗಳಿಗೆ ಸರ್ಕಾರವೇ ಮುತುವರ್ಜಿ ವಹಿಸಿಕೊಂಡು ರೈತರ ಬೆಳೆಯನ್ನು ಖರೀದಿಸಿ ಬೇಡಿಕೆ ಇರುವ ಸ್ಥಳಗಳಲ್ಲಿ ಮಾರಾಟ ಮಾಡಿ ರೈತರ ಸಂಕಷ್ಟವನ್ನು ಪಾರು ಮಾಡಬೇಕೆಂದು ಆಗ್ರಹಿಸಿದರು.
     ಜೇನು ಕೃಷಿ ಸಹಾಯಕ ಈಶ್ವರರೆಡ್ಡಿ ಕೃಷಿ ಮೇಳದಲ್ಲಿ ಹೊಸ ತಂತ್ರಜ್ಞಾನದ ಯಂತ್ರಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಹೆಚ್ಚು ಇಳುವರಿ ನೀಡುವ ವಿವಿಧ ತರಹೇವಾರಿ ತಳಿಗಳ ಬಗ್ಗೆಯೂ ಮಾಹಿತಿ ಲಭ್ಯವಾಗಲಿದೆ. ರೈತರಿಗೆ ಇದರಿಂದ ಹೆಚ್ಚು ಉಪಯೋಗವಾಗಲಿದೆ ಎಂದು ಆಶಿಸಿದರು. 

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...