ಶ್ರೀನಿವಾಸಪುರ: ತಾಲೂಕು ಆಡಳಿತವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನ ಆಚರಣೆ

Source: shabbir ahmed | By Arshad Koppa | Published on 21st February 2017, 8:10 AM | State News |

ಶ್ರೀನಿವಾಸಪುರ: ವಿದೇಶಿ ಮೊಗಲರ ಸಾಮ್ರಾಜ್ಯವನ್ನು ಬಗ್ಗು ಬಡಿದು ಭಾರತೀಯರು ಎಂದಿಗೂ ಗುಲಾಮಗಿರಿಯನ್ನು ಒಪ್ಪುವುದಿಲ್ಲ ಎಂದು ಕೆಚ್ಚದೆಯ ಕಲಿ ಪಟ್ಟಾಭಿಷಕ್ತನಾಗಿ ಜಗತ್ತಿಗೆ ತನ್ನ ಪೌರುಷವನ್ನು ತೋರಿದ ಮಹಾನ್ ಚೇತನ ಛತ್ರಪತಿ ಶಿವಾಜಿ ಮಹಾರಾಜರು ಎಂದು ತಹಶೀಲ್ದಾರ್ ವೈ.ರವಿ ರವರು ನುಡಿದರು.
 ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಆಡಳಿತ ತಾಲೂಕು ಮರಾಠ ಸಮಾಜ ಸಂಸ್ಥೆಯ ವತಿಯಿಂದ ಭಾನುವಾರ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಮೊಗಲರು ನಮ್ಮ ಧಾರ್ಮಿಕ ಮತ್ತು ಸಾಂಸ್ಕøತಿಕವಾಗಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿ ಇಡೀ ದೇಶವನ್ನು ತಮ್ಮ ಕಪಿ ಮುಷ್ಠಿಯಲ್ಲಿ ಹಿಡಿದುಕೊಂಡಿದ್ದ ಸಂದರ್ಭದಲ್ಲಿ ಭಾರತ ಮಾತೆಯನ್ನು ವಿದೇಶಿಯರ ಸಂಕೋಲೆಗಳಿಂದ ಬಂದ ಮುಕ್ತಗೊಳಿಸಲು ಮರಾಠರ ಸೈನ್ಯವನ್ನು ಕಟ್ಟಿ ಒಂದೊಂದೆ ರಾಜ್ಯವನ್ನು ಗೆದ್ದು ಎಲ್ಲಾ ಸಾಮಂತರನ್ನು ಒಗ್ಗೂಡಿಸುವ ಮೂಲಕ ಅಟ್ಟ ಹಾಸ ಮೆರೆಯುತ್ತಿದ್ದ ಮೊಗಲರನ್ನು ಮಸಣಕ್ಕೆ ಅಟ್ಟಿದ ಅಪ್ರತಿಮ ವೀರ ಶಿವಾಜಿ ಎಂದು ಬಣ ್ಣಸಿದರು.
    ಮರಾಠ ಸಮಾಜದ ಕಮತಂಪಲ್ಲಿ ನಾರಾಯಣರಾವ್ ಮಾತನಾಡಿ ಶಿವಾಜಿ ಮಹಾರಾಜರು ಕೇವಲ ಮರಾಠ ಸಮಾಜಕ್ಕೆ ಮಾತ್ರ ಸೀಮಿತರಲ್ಲ. ಅಚಲ ಹಿಂದುಸ್ಥಾನ ಇಂದು ಉಳಿದಿದೆ ಎಂದರೆ ಅದು ಶಿವಾಜಿ ಮಹಾರಾಜರ ಅಪ್ರತಿಮ ಪೂರುಷದ ಹೋರಾಟದಿಂದ ಮಾತ್ರ. ಅವರು ಯಾವುದೇ ಜಾತಿಗೆ ಸೀಮಿತರಲ್ಲ. ಭಾರತೀಯರೆಲ್ಲರೂ ಒಂದಾಗಿ ಇಂತಹ ಮಹಾನ್ ವೀರರನ್ನು ಸ್ಮರಣೆ ಮಾಡಬೇಕು. ಇನ್ನು ಮುಂದೆ ಪ್ರತೀ ವರ್ಷ ಶಿವಾಜಿ ಮಹಾರಾಜರ ಪಲ್ಲಕ್ಕಿಯಲ್ಲಿ ಮೆರವಣ ಗೆ ಮಾಡಿ  ಸಾರ್ವಜನಿಕರಿಗೆ ಅವರ ಅಪ್ರತಿಮ ಶೌರ್ಯದ ಇತಿಹಾಸವನ್ನು ತಿಳಿಸ ಬೇಕಾಗಿದೆ ಎಂದರು.
 ಕಾರ್ಯಕ್ರಮದಲ್ಲಿ ತಾಲೂಕು ಮರಾಠ ಸಮಾಜ ಬಾಂದವರು ಹಾಗೂ ಸಮಾಜದ ಮುಖಂಡರಾದ ಶಿವಾಜಿರಾವ್, ಈಶ್ವರ್‍ರಾವ್, ಬಾಬುರಾವ್  ಇತರರು ಹಾಜರಿದ್ದರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...