ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರಗಳ್ಳ ನಡೆಸಿದ್ದ ಕಳ್ಳರ ಬಂಧನ

Source: shabbir | By Arshad Koppa | Published on 20th July 2017, 8:13 AM | State News | Special Report |

ಶ್ರೀನಿವಾಸಪುರ, - ಜು - 19: ಕೋಲಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸರಗಳ್ಳತನವನ್ನು ಮಾಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂದಿಸಿದ ಪೋಲೀಸ್ ಇಲಾಖೆಯ ಸಿಬ್ಬಂದಿಗಳನ್ನು ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಡಾ.ರೋಹಿಣ  ಕಟೋಚ್ ರವರು ಅಭಿನಂದಿಸಿದರು.


   ಬುಧವಾರ ಸಂಜೆ ಶ್ರೀನಿವಾಸಪುರ ಠಾಣೆಯ ಆವರಣದಲ್ಲಿ ಬೆಂಗಳೂರಿನಲ್ಲಿ ಕಳ್ಳತನ ಮಾಡಿಕೊಂಡ ಬಂದ ದ್ವಿಚಕ್ರವಾಹನಗಳಲ್ಲಿ ಒಚಿಟಿ ಮಹಿಳೆಯರ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಸರಗಳ್ಳರಿಂದ ವಶಪಡಿಸಿಕೊಂಡ ಸರಗಳು ಮತ್ತು ಬೈಕ್‍ಗಳನ್ನು ಪ್ರದಶಿಸಿದ ನಂತರ ಮಾತನಾಡಿದ ಇವರು ಪ್ರಮುಖ ಆರೋಪಿ ತಜಮುಲ್‍ಪಾಷಾ ಎಂಬುವರು ಮುಳಬಾಗಿಲು ನಿವಾಸಿಯಾಗಿದ್ದು 2015ರಲ್ಲಿ ಇವರ ಮೇಲೆ ಕಳ್ಳತನದ ಪ್ರಕರಣಗಳು ದಾಖಲಾಗಿದೆ. 2016ರಲ್ಲಿ ಜೈಲ್‍ನಲ್ಲಿ ಇದ್ದ ಆರೋಪಿ 2017ರಲ್ಲಿ ಬೇಲ್ ಪಡೆದುಕೊಂಡು ಹೊರಗಡೆ ಬಂದಿದ್ದಾನೆ. ಶ್ರೀನಿವಾಸಪುರ ಕೋಲಾರ ರಸ್ತೆಯಲ್ಲಿ ಒಚಿಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅವರ ಮೇಲೆ ದಾಳಿ ನಡೆಸಿ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾನೆ. ಮಧ್ಯವರ್ತಿ ಮುಳಬಾಗಿಲು ನಿವಾಸಿ ರಿಜ್ವಾನ್ ಮುಖಾಂತರ ಸರಗಳನ್ನು ಇತರೆ ಚಿನ್ನದ ಅಂಗಡಿಗಳಲ್ಲಿ ಸರಗಳನ್ನು ಮಾರಾಟ ಮಾಡಿರುತ್ತಾರೆ. ಪೋಲೀಸರ ತಂಡ ಈ ಸರಗಳ್ಳತನವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
   ಕೋಲಾರ ಜಿಲ್ಲಾ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಎಂ.ರಾಜೀವ್ ಮಾರ್ಗದರ್ಶನದಲ್ಲಿ ಮುಳಬಾಗಿಲು ಉಪವಿಭಾಗದ ಡಿವೈಎಸ್‍ಪಿ ಬಿ.ಕೆ.ಉಮೇಸ್ ನೇತೃತ್ವದಲ್ಲಿ ಶ್ರೀನಿವಾಸಪುರ ಸಿಪಿಐ ವೆಂಕಟರಾಮಪ್ಪ, ಕೋಲಾರ ಡಿಸಿಬಿ ವೆಂಕಟಾಚಲಪತಿ, ಶ್ರೀನಿವಾಸಪುರ ಪಿಎಸ್‍ಐ ಪ್ರದೀಪ್ ಸಿಂಗ್, ಸಿಬ್ಬಂದಿಗಳಾದ ಸೈಯದ್‍ಖಾಸಿಂ, ವೇಣುಗೋಪಾಲ್, ಗುರುಪ್ರಸಾದ್, ಮಂಜುನಾಥ, ಜಾವೀದ್, ಮುನಿವೆಂಕಟಸ್ವಾಮಿ, ಮುನಿವೆಂಕಟರೆಡ್ಡಿ, ರಮೇಶ್, ಮುರಳಿ ಮತ್ತು ಶಂಕರ್ ರವರನ್ನೊಳಗೊಂಡಂತೆ ತಂಡಗಳನ್ನು ರಚಿಸಿಕೊಂಡು ಆರೋಪಿಳ ಪತ್ತೆ ಕಾರ್ಯ ಹಚ್ಚಿದ್ದರು. ಬೈಕ್ ಗಳ ಬೆಲೆ ಸುಮಾರು 2ಲಕ್ಷ ಎಂದು ಅಂದಾಜಿಸಲಾಗಿದೆ ಮತ್ತು 180ಗ್ರಾಮ ತೂಕದ ಚಿನ್ನದ ಸರಗಳ ಬೆಲೆ 5ಲಕ್ಷ ರೂಗಳೆಂದು ಮಾಹಿತಿ ಕೊಟ್ಟರು.

Read These Next

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...