ಶ್ರೀನಿವಾಸಪುರ: ಶ್ರೀ ಜಿಜಿ ವೇಣು ವಿಧ್ಯಾ ಸಂಸ್ಥೆಯಲ್ಲಿ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ

Source: shabbir | By Arshad Koppa | Published on 19th November 2017, 8:34 AM | State News |

ಶ್ರೀನಿವಾಸಪುರ, - ನವಂಬರ್-18: ಜಗತ್ತಿನ ಶ್ರೇಷ್ಠ ಕೃತಿಗಳಾದ ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ ಮತ್ತು ವ್ಯಾಸಮಹರ್ಷಿಗಳು ರಚಿಸಿದ ಶ್ರೀ ಮದ್ ಮಹಾಭಾರತವನ್ನು ಪ್ರತಿಯೊಬ್ಬರೂ ಅರಿಯುವ ದೃಷ್ಠಿಯಿಂದ ಪ್ರೌಢಶಾಲೆ ಮತ್ತು ಪದವೀ ಪೂರ್ವ ಕಾಲೇಜುಗಳ ಮಕ್ಕಳಿಗೆ ವಿಶ್ವಹಿಂದೂ ಪರಿಷದ್ ಆಶ್ರಯದಲ್ಲಿ ರಾಜ್ಯ ಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ತಾಲೂಕು ವಿ.ಹಿಂ.ಪ.ಅಧ್ಯಕ್ಷ ಎಂ.ವೇಮಣ್ಣ ತಿಳಿಸಿದರು.

 ತಾಲೂಕಿನ ವಿವಿಧ ಶಾಲೆಗಳಲ್ಲಿ ಪರೀಕ್ಷೆ ಬರೆಯುತ್ತಿರುವ ವಿಧ್ಯಾರ್ಥಿಗಳನ್ನು ಬೇಟಿ ಮಾಡಿ ಶುಭ ಕೋರಿ ಸಿಹಿವಿತರಿಸಿ ಮಾತನಾಡಿದ ಇವರು ಜಗತ್ತಿನ ಶ್ರೇಷ್ಠ ಪುರುಷ ಶ್ರೀರಾಮನ ಆಧರ್ಶಗಳನ್ನು ಯುವ ಜನಾಂಗಕ್ಕೆ ತಿಳಿಸಬೇಕಾಗಿದೆ. ಸೀತಾ ಮಾತೆಯ ಉದಾತ್ತ ಶ್ರೇಷ್ಠ ಗುಣಗಳ ಬಗ್ಗೆ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಪರೀಕ್ಷೆ ಎಂಬುದು ಮಕ್ಕಳಿಗೆ ಹಿಂದೂ ಧರ್ಮಗ್ರಂಥಗಳ ಬಗ್ಗೆ ಆಸಕ್ತಿ ಬರಲು ಹಾಗೂ ಅವುಗಳ ಬಗ್ಗೆ ತಿಳುವಳಿಕೆ ನೀಡುವ ಒಂದು ಸಾಧನವಾಗಿದೆಯೇ ಹೊರೆತು ಸ್ಪರ್ಧಾತ್ಮಕವಾಗಿ ಅಲ್ಲ. ಹಿಂದಿನ ದಿನಗಳಲ್ಲಿ ಕಥಾ ಕಲಾಕ್ಷೇಪಗಳಲ್ಲಿ ಹಿರಿಯರು ಮಕ್ಕಳಿಗೆ ನಾಟಕ, ಯಕ್ಷಗಾನ, ಜಾನಪದ ನೃತ್ಯಗಳ ಮೂಲಕ ರಾಮಾಯಣ ಮತ್ತು ಮಹಾಭಾರತದ ಸನ್ನಿವೇóಗಳನ್ನು ವಿಸ್ತಾರವಾಗಿ ತಿಳಿಸುತ್ತಿದ್ದರು. ಆಧುನಿಕತೆ ಹೆಚ್ಚಾದಂತೆ ಟಿ.ವಿ. ಕಂಪ್ಯೂಟರ್ ಹಾಗೂ ಇತ್ತೀಚೆಗೆ ಮೊಬೈಲ್‍ಗಳಿಗೆ ಮಾರು ಹೋದ ಯುವ ಜನಾಂಗ ನಮ್ಮ ಸನಾತನ ಸಂಸ್ಕøತಿಯ ಬಗ್ಗೆ ಆಸಕ್ತಿ ಕಡಿಮೆ ಯಾಗುತ್ತಿರುವುದನ್ನು ಮನಗಂಡ ವಿಶ್ವಹಿಂದೂ ಪರಿಷದ್ ಮಕ್ಕಳಲ್ಲಿ ಮಹಾನ್ ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
   ತಾಲೂಕಿನ ಲಕ್ಷ್ಮೀಪುರ ಕ್ರಾಸ್‍ನಲ್ಲಿರುವ ಮಿನರ್ವ ಪ್ರೌಢಶಾಲೆ, ಯಲ್ದೂರಿನ ನ್ಯಾಷನಲ್ ಹೈಸ್ಕೂಲ್, ಪಟ್ಟಣದ ಶ್ರೀವೇಣು ವಿಧ್ಯಾ ಸಂಸ್ಥೆ, ಜಿಜಿ ವೇಣು ವಿಧ್ಯಾ ಸಂಸ್ಥೆ, ಸಾಯಿ ವಿಜಯ ಪದವೀಪೂರ್ವ ಕಾಲೇಜು ಮತ್ತು ಮ್ಯಾಂಗೋ ವ್ಯಾಲಿ ಪಬ್ಲಿಕ್‍ಸ್ಕೂಲ್‍ನಲ್ಲಿ ಪರೀಕ್ಷೆಗಳನ್ನು ನಡೆಸಲಾಯಿತು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...