ಶ್ರೀನಿವಾಸಪುರ:ಮಕ್ಕಳ ದಿನಾಚರಣೆ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ- ಡಾ.ವೆಂಕಟಾಚಲಾಲ

Source: shabbir | By Arshad Koppa | Published on 16th November 2017, 8:18 AM | State News |

 ಶ್ರೀನಿವಾಸಪುರ, - ನವಂಬರ್-14ಮಹಾಪುರುಷರ ದಿನಾಚರಣೆಗಳಂತೆ ಸರ್ಕಾರ ಮಕ್ಕಳ ದಿನಾಚರಣೆಯನ್ನು ಆಚರಣೆ ಮಡುವುದರಲ್ಲಿ ತಪ್ಪಿಲ್ಲ. ಮಕ್ಕಳು ಯಾವುದೇ ಸಮುದಾಯಕ್ಕೆ ಸೀಮಿತರಾಗಿರುವುದಿಲ್ಲ. ಇಂತಹವರ ದಿನಾಚರಣೆಯನ್ನು ಆಚರಣೆ ಮಾಡಿದಲ್ಲಿ ಅದಕ್ಕೊಂದು ಅರ್ಥ ಬರುತ್ತದೆ ಎಂದು ಶ್ರೀವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ವೆಂಕಟಾಚಲಾರವರು ಅಭಿಪ್ರಾಯಿಸಿದರು.
   ಪಟ್ಟಣದ ಕರ್ನಾಟಕ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಶ್ರೀನಿವಾಸಪುರ ಸೆಂಟ್ರಲ್‍ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚೆಗೆ ಮಹಾಪುರುಷರ ದಿನಾಚರಣೆಗಳು ಸಮುಧಾಯಗಳಿಗೆ ಸೀಮಿತವಾಗುತ್ತಿವೆ ಎಂದು ವಿಷಾಧ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಎಲ್ಲಾ ಜಯಂತಿಗಳನ್ನು ಆಚರಣೆ ಮಾಡುತ್ತಿದೆ. ಮಕ್ಕಳ ದಿನಾಚರಣೆಯನ್ನು ಸರ್ಕಾರದವತಿಯಿಂದಲೇ ಮಾಡಬೇಕು ಎಂದು ಒತ್ತಾಯಪಡಿಸಿದ ಅವರು ರೋಟರಿ ಸಂಸ್ಥೆ ಇಂತಹ ಉತ್ತಮವಾದಂತ ಕಾರ್ಯಕ್ರಮವನ್ನು ಆಚರಣೆ ಮಾಡುತ್ತಿರುವುದರಿಂದ ಯುವ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದಂತಾಗಿದೆ. ಇದರ ಜೊತೆಗೆ ಚಿತ್ರಕಲಾ ಸ್ಪರ್ಧೇಯನ್ನು ಏರ್ಪಡಿಸಿರುವುದರಿಂದ ಮಕ್ಕಳು ಬಾಲ್ಯದಿಂದಲೇ ಕಲೆಯನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹಿಸಿದಂತಾಗುವುದು ಎಂದರು.


   ರೋಟರಿ ಸಂಸ್ಥೆಯ ಕಾರ್ಯದರ್ಶಿ ರೊ.ಶಿವಮೂರ್ತಿ ಮಾತನಾಡಿ ಮುಗ್ದ ಮನಸುಗಳ ಮಕ್ಕಳನ್ನು ಪ್ರತಿಭಾವಂತರನ್ನಾಗಿ ಮಾಡುವುದು ಶಿಕ್ಷಕರ ಆದ್ಯಕರ್ತವ್ಯ. ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಮಾಡಬೇಕೆ ವಿನಃ ಮಕ್ಕಳಿಗಾಗಿ ಆಸ್ತಿ ಮಾಡುವುದನ್ನು ಪೋಷಕರು ಬಿಡಬೇಕು. ಶಿಕ್ಷಣ ಇಲಾಖೆ ಮಕ್ಕಳ ದಿನಾಚರಣೆಯ ಮುತುವರ್ಜಿ ವಹಿಸಿ ಮಕ್ಕಳಿಗೆ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವಂತಾಗಬೇಕು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದರೆ ಅವರಲ್ಲಿ ಅಡಗಿರುವ ಸ್ತುಪ್ತ ಪ್ರತಿಭೆಯನ್ನು ಹೊರ ತೆಗೆಯಲು ಸಾದ್ಯವಾಗುತ್ತದೆ ಎಂದರು.
  ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಿದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಿದರು. ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎಂ.ಬೈರೇಗೌಡ, ರೋಟರಿ ಸಂಸ್ಥೆಯ ಬಿ.ಸೀತಾರಾಮರೆಡ್ಡಿ, ರವೀಂದ್ರಯ್ಯಕುಲಕಣ ್, ಬಾಲಚಂದ್ರ, ಪೂಲು ಶಿವಾರೆಡ್ಡಿ, ಶಿಕ್ಷಕರಾದ ರವೀಂದ್ರ, ರಮೇಶ್ ಮುಂತಾದವರು ಹಾಜರಿದ್ದರು. 


ಮಕ್ಕಳ ದಿನಾಚರಣೆ ಅಂಗವಾಗಿ ಶ್ರೀ ವೇಣು ವಿಧ್ಯಾಸಂಸ್ಥೆಯ ವಿಧ್ಯಾರ್ಥಿನಿ ಎಂ.ಚೈತನ್ಯ ರಾಧೆಯ ವೇಷದಾರಿಯಾಗಿರುವುದು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!