ಶ್ರೀನಿವಾಸಪುರದಲ್ಲಿ ಕೋಟಿ ವೃಕ್ಷ ಆಂದೋಲನ: ಮಕ್ಕಳಿಗೆ ಅರಣ್ಯ ಮೌಲ್ಯಗಳ ಪಾಠ ಮಾಡಿದ ಸಚಿವರು

Source: shabbir | By Arshad Koppa | Published on 19th July 2017, 8:55 AM | State News |

ಶ್ರೀನಿವಾಸಪುರ ಜುಲೈ18 ಜೀವ ವೈವಿದ್ಯ ಕಾಪಾಡಿಕೊಳ್ಳುವಂತ ಅರಣ್ಯೀಕರಣವಾದಾಗ ಮಾತ್ರ ಅದಕ್ಕೆ ಒಂದು ಸಾರ್ಥಕತೆ ಇರುತ್ತದೆ. ನೀಲಗಿರಿ ಹಾಗೂ ಜಾಲಿಯಂತ ಮರಗಳನ್ನು ನೆಟ್ಟರೆ ಇತರೆ ಯಾವುದೇ ಪ್ರಾಣಿ ಪಕ್ಷಿಗಳಿಗೆ ಆಶ್ರಯವಾಗಲಿ ಆಹಾರವಾಗಲಿ ದೊರೆಯುವುದಿಲ್ಲ. ಅದನ್ನು ತೆಗೆದು ಫಲ-ಪುಷ್ಪ ನೀಡುವಂತ ನೇರಳೆ, ಹಲಸು, ಬೇಲ, ಹೊಂಗೆ, ಆಲ, ಮಾವುಗಳಂತ ಮರಗಳನ್ನು ಬೆಳೆಸಿದರೆ ಜೀವಿಗಳ ಸಂಕುಲವನ್ನೇ ಸೃಷ್ಠಿಸಿದಂತಾಗುತ್ತದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ.ಆರ್.ರಮೇಶ್ ಕುಮಾರ್ ಅವರು ತಿಳಿಸಿದರು. 
ಇಂದು ಶ್ರೀನಿವಾಸಪುರ ರಸ್ತೆಯ ಸುಮಾರು 50 ಹೆಕ್ಟೇರ್ ಪ್ರದೇಶದಲ್ಲಿ ಕೋಟಿ ಸಸಿಗಳು ಹಾಗೂ ಬೀಜದುಂಡೆ ನೆಡುವ “ವನಮಹೋತ್ಸವ-ನೀರಿಗಾಗಿ ಅರಣ್ಯ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಮಾರು 5000 ಕ್ಕೂ ಹೆಚ್ಚು ಮಕ್ಕಳನ್ನು ಉದ್ದೇಶಿಸಿ ಅವರು ಮಾತನಾಡಿದರು. 
ಮಕ್ಕಳನ್ನು ಇಂತಹ ಕಾರ್ಯಕ್ರಮಗಳಲ್ಲಿ ಸೇರಿಸಿಕೊಂಡು ನಮ್ಮ ನೆಲ, ಮಣ್ಣಿನ ಗುಣ, ಮಳೆ, ಬೆಳೆಯುವಂತಹ ಗಿಡ-ಮರಗಳ ಮಾಹಿತಿ ನೀಡಿದರೆ ಅವರ ಮನಸ್ಸಿನಲ್ಲಿ ಅಚ್ಚಾಗಿ ಉಳಿಯುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆಯೂ ಅವರಿಗೆ ಪಠ್ಯದೊಂದಿಗೆ ಜಾಗೃತಿ ಮೂಡಿಸಬೇಕು. ಇಂತಹ ಶಿಕ್ಷಣ ಬಹಳ ಅರ್ಥಪೂರ್ಣ ಎಂದು ಅಭಿಪ್ರಾಯಪಟ್ಟರು. 
ಸುಮಾರು 5 ಬ್ಲಾಕ್‍ಗಳಲ್ಲಿ ಹಂಚಿಕೆ ಆಗಿದ್ದ, ನೆಡುತೋಪುಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿವಿಧ ಸಸಿಗಳನ್ನು ಹಾಗೂ ಬೀಜದುಂಡೆಗಳನ್ನು ನೆಟ್ಟರು. ಮಕ್ಕಳೊಂದಿಗೆ ದೀರ್ಘವಾಗಿ ಮಾತನಾಡುತ್ತಾ, “ನಿಮ್ಮ ಇಂದಿನ ಈ ಕೆಲಸದಿಂದಾಗಿ ಪ್ರಕೃತಿಯ ಹಲವಾರು ಪಶು-ಪಕ್ಷಿಗಳು ಇಲ್ಲಿ ಬಂದು ವಾಸ ಮಾಡಲು ಅನುಕೂಲವಾಗಲಿದೆ. ನೆರಳು ಸಿಗಲಿದೆ. ಹಸಿದಾಗ ತಿನ್ನಲು ಹಣ್ಣುಗಳು ಸಿಗುತ್ತವೆ. ಇವು ನಮ್ಮ ಪೂರ್ವಜರು ಬೆಳೆಸುತ್ತಿದ್ದಂತ ಮರಗಿಡಗಳು. ನೀಲಗಿರಿ ನಮ್ಮ ಭೂಮಿಯದಲ್ಲ. ನಮ್ಮ ಮೇಲೆ ಅದನ್ನು ಹೇರಲಾಗಿದೆ. ಆದ್ದರಿಂದ ಅದನ್ನು ಸಂಪೂರ್ಣ ತೆಗೆಯುವ ಕಾರ್ಯಕ್ರಮ ಆಗಬೇಕು” ಎಂದು ಹೇಳಿದರು. 
ಅರಣ್ಯ ಅಧಿಕಾರಿಗಳು ಈ ಕಾರ್ಯಕ್ರಮದ ಬಗ್ಗೆ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಿ ಜಾಗೃತಿ ಮೂಡಿಸಬೇಕು. ಇಲ್ಲ ಕಲಿತ ಪಾಠ ಮಕ್ಕಳು ಎಂದಿಗೂ ಮರೆಯುವುದಿಲ್ಲ ಎಂದರು. ನೆಡಲಾಗುತ್ತಿರುವ ಸಸಿ-ಬೀಜಗಳ ಬಗ್ಗೆ ತಿಳಿಸಿಕೊಡಬೇಕು. ಮಣ್ಣಿನ ಬಗ್ಗೆ ವಿವರಿಸಬೇಕು ಎಂದು ಸಲಹೆ ನೀಡಿದರು. 
ಈಗ ಸುತ್ತಲು ಎತ್ತ ನೋಡಿದರೂ ದೂರ ದೂರಕ್ಕೂ ಒಂದು ಪಕ್ಷಿ ಕಾಣುತ್ತಿಲ್ಲ. ಈ ಸಸಿ ನೆಡುವ ಕಾರ್ಯಕ್ರಮದಿಂದ ಇನ್ನು ಬರುವ 5-6 ವರ್ಷಗಳಲ್ಲಿ ಈ ಪ್ರದೇಶದ ಸ್ವರೂಪವೇ ಬದಲಾಗಲಿದೆ. ಸಂಪೂರ್ಣ ಹಸಿರು ಅರಣ್ಯದಂತೆ ಕಂಗೊಳಿಸಿ ಪ್ರಾಣಿ-ಪಕ್ಷಿಗಳಿಂದ ಕೂಡಿರುವ ಪ್ರದೇಶ ಇದಾಗಲಿದೆ ಎಂದು ಆಶಾಭಾವ ವ್ಯಕ್ತಪಡಿಸಿದ ಸಚಿವರು, ಮಕ್ಕಳಿಗೆ ಇಂತಹ ಕಾರ್ಯಕ್ರಮದಿಂದ ಗಿಡಗಳನ್ನು ತಮ್ಮ ಮಕ್ಕಳಂತೆ ಪೋಷಿಸುವ ಭಾವನೆ ಬರುವಂತೆ ಆಗಿದೆ. ಇಂದು ಮುಕ್ತವಾದ ವಾತಾವರಣದಲ್ಲಿ ನೈಸರ್ಗಿಕವಾದ ವಿಭಿನ್ನವಾದ ಪಾಠ ಕಲಿಯುವ ಅವಕಾಶ ಅವರಿಗೆ ದೊರೆತಿದೆ ಎಂದರು. 
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ರೋಹಿಣಿ ಕಟೋಚ್ ಸೆಫೆಟ್, ಬೆಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಮತಿ ಶಾಶ್ವತಿ ಮಿಶ್ರಾ ಸೇರಿದಂತೆ ಇತರೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪಾಲ್ಗೊಂಡಿದ್ದರು.

ವರದಿ ಶಬ್ಬೀರ್ ಅಹ್ಮದ ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...