ಶ್ರಿನಿವಾಸಪುರ:ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ  ಆಯ್ಕೆಯಾದ ಕೆ.ಸಿ.ಸೌಂದರ್ಯ

Source: shabbir | By Arshad Koppa | Published on 13th April 2017, 8:37 AM | Sports News |

ಶ್ರಿನಿವಾಸಪುರ: ಕೆ.ಸಿ.ಸೌಂದರ್ಯ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದು ರಾಷ್ಟ್ರೀಯ ಮಟ್ಟಕ್ಕೆ  ಆಯ್ಕೆಯಾಗಿದ್ದಾಳೆ.
  ಬೆಂಗಳೂರು ಜೆಸಿ ರಸ್ತೆಯಲ್ಲಿರುವ ಜೈನ್ ಯುನಿವರ್‍ಸಿಟಿ ಕಾಲೇಜಿನಲ್ಲಿ ಅಕಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷನ್ ಅವರು ಭಾನುವಾರ ಆಯೋಜಿಸಿದ್ದ 9ನೇ ಜೂನಿಯರ್ ಮತ್ತು 21 ವರ್ಷದೊಳಗಿನವರ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‍ಶಿಪ್ 2017 ಸ್ಪರ್ಧೆಯಲ್ಲಿ ಶ್ರೀನಿವಾಸಪುರದ ಬಿಜಿಎಸ್ ಸ್ಕೂಲ್ ಆಫ್ ಬಿಸಿನೆಸ್ ಮೇನೇಜ್ಮೆಂಟ್ ಕಾಲೇಜ್ ಭೈರವೇಶ್ವರನಗರದ ವಿದ್ಯಾರ್ಥಿನಿ ಕೆ.ಸಿ.ಸೌಂದರ್ಯ  ಮೈನೆಸ್ 45 ಕೆಜಿ ವಿಭಾಗದ ಸ್ಪರ್ಧೆಯಲ್ಲಿ  ಭಾಗವಹಿಸಿ ಪ್ರಥಮ ಸ್ಥಾನ ಪಡೆದು ಮೇ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಕಿಲ ಕರ್ನಾಟಕ ಸ್ಪೋಟ್ರ್ಸ್ ಕರಾಟೆ ಅಸೋಸಿಯೇಷÀನ್ ಅಧ್ಯಕ್ಷ ಅರುಣ್ ಮಾಚಯ್ಯ ಬಹುಮಾನ ವಿತರಿಸಿದ್ದಾರೆ, ಪ್ರಧಾನ ಕಾರ್ಯದರ್ಶಿ ಅಲ್ತಫ್ ಪಾಷಾ ಹಜರಿದ್ದು.
 ಬೆಂಗಳೂರು ಜೆನ್ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ಪ್ರಸಾದ್ ಎಂ.ಜಿ. ತರಬೇತಿ ನೀಡಿರುತ್ತಾರೆ.

Read These Next

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...