ಶ್ರೀನಿವಾಸಪುರ: ಒಣಗಿದ ಮಾವಿನ ತೋಪಿನ ರೈತರಿಗೆ ಪರಿಹಾರ ಒದಗಿಸಲು ಹಸಿರು ಸಂಘ ಆಗ್ರಹ

Source: shabbir | By Arshad Koppa | Published on 13th August 2017, 11:07 AM | State News | Guest Editorial |

ಶ್ರೀನಿವಾಸಪುರ ಆ 12 : ಜಗತ್‍ಪ್ರಸಿದ್ದ ಮಾವು ನಗರಿ ಶ್ರೀನಿವಾಸಪುರ ತಾಲ್ಲೂಕಿನ ಮಾವು ಬೆಳೆಗಾರರು ಈಗ ಸುಮಾರು ಎಕರೆಗಳಲ್ಲಿ ಮಾವಿನ ಮರಗಳು ಒಣಗಿ ಹೋಗಿದ್ದು, ಇದನ್ನೇ ನಂಬಿರುವ ರೈತನಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ  ರೈತರ ಸಮಸ್ಯೆಗಳಿಗೆ ಕೂಡಲೇ ಸ್ಪಂಧಿಸಿ ರೈತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಹಾಗೂ ಕೆರೆಗಳ ಡಿ ನೋಟಿಫಿಕೇಷನ್‍ನ್ನು ಕೈ ಬಿಡಬೇಕೆಂದು ಈ ಮೂಲಕ ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯು ಒತ್ತಾಯಿಸುತ್ತದೆ.
ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಕೆರೆಗಳ ಮರಳನ್ನು ತೆಗೆದು ಕೆರೆಗಳು ಅಸ್ತಿತ್ವನ್ನು ಕಳೆದುಕೊಂಡಿದ್ದು, ದಂದೆಕೋರರ  ಪರವಾಗಿ ಬೆಂಗಾವಲಾಗಿ ನಿಂತಿರುವ ತಾಲ್ಲೂಕು ದಂಡಾಧಿಕಾರಿಗಳೇ ನೇರ ಹೊಣೆಗಾರರು. ಈಗಲಾದರೂ ದಂದೆ ಕೋರರ ವಿರುದ್ಧ ಕೂಡಲೇ ಕ್ರಮಕೈಗೊಂಡು ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ ಜೈಲಿಗೆ ಹಟ್ಟಬೇಕು ಹಾಗೂ ಕೆರೆಗಳಿಗೆ ಪುನಶ್ಚೇತನ ನೀಡಬೇಕು. ಕೆರೆಗಳು ಅಸ್ತಿತ್ವ ಕಳೆದುಕೊಂಡಿದ್ದರಿಂದ  ರಾಜ್ಯ ಸರ್ಕಾರ 19-04-2017ರಂದು ಸಂಪುಟ ಸಭೆ ಸೇರಿ ಕೆರೆಗಳ ಡಿ ನೋಟಿಫಿಕೇಷನ್ ಮಾಡಲು ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ ಕಲಂ 68ರ ಅಡಿಯಲ್ಲಿ ಅವಕಾಶವಿಲ್ಲದಿದ್ದರೂ ಭೂಮಾಫಿಯಾಗಳ ಒತ್ತಡಕ್ಕೆ ಮಣ ದು ಸರ್ಕಾರವು ಕಲಂ 68ನ್ನು ತಿದ್ದುಪಡಿ ಮಾಡಿ ಕೆರೆಗಳ ಡಿ ನೋಟಿಪೇಷನ್ ಮಾಡಲು ಕೊರಟಿರುವುದನ್ನು ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತೀವ್ರವಾಗಿ ಖಂಡಿಸಿ ಡಿ ನೋಟಿಫಿಕೇಷನ್ ತಿದ್ದುಪಡಿಯನ್ನು ವಾಪಸ್ಸು ಪಡೆದು ಕರ್ನಾಟಕ ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಈ ಮೂಲಕ ಒತ್ತಾಯಿಸುತ್ತದೆ.
ಶ್ರೀನಿವಾಸಪುರ ತಾಲ್ಲೂಕಿನಾದ್ಯಂತ ರಸ್ತೆಗಳು ಸಂಪೂರ್ಣ ಹಾಳಾಗಿದೆ  ಕೂಡಲೇ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಜಾತ್ಯಾತೀತವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್‍ನ್ನು ನೀಡಬೇಕು. ಕೆರೆಗಳ ಒತ್ತುವರಿಯನ್ನು ತೆರವುಗೊಳಿಸುವಂತೆ ಸರ್ಕಾರದ ಆದೇಶವಿದ್ದರೂ ಇದುವರೆಗೂ ಯಾವುದೇ ಕೆರೆಗಳ ಒತ್ತುವರಿ ತೆರವು ಮಾಡಿಲ್ಲ. ಹಾಗಾಗಿ ಆದಷ್ಟು ಬೇಗ ಒತ್ತುವರಿ ಒತ್ತುವರಿ ತೆರವುಗೊಳಿಸಬೇಕು ರೈತ ನಾಯಕ ಪ್ರೋ|| ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಶ್ರೀನಿವಾಸಪುರ ನೂತನ ತಾಲ್ಲೂಕು ಅಧ್ಯಕ್ಷರಾದ ತೆರ್ನಹಳ್ಳಿ ಟಿ.ಎನ್.ನಾರಾಯಣಸ್ವಾಮಿಗೌಡ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಕೊಲದೇವಿ ಗೋಪಾಲಕೃಷ್ಣಮೂರ್ತಿ, ಸಂಚಾಲಕ ಗಂಗಾಧರ್, ಮಂಜುನಾಥರೆಡ್ಡಿ, ಗೋವಿಂದರಾಜು, ಪಿಳ್ಳೇಗೌಡ, ಮಲ್ಲೇಶ್, ಮುರಳಿ, ವೆಂಕಟರೆಡ್ಡಿ, ಆಂಜನೇಗೌಡ, ರಾಮಣ್ಣ ಇನ್ನು ಮುಂತಾದವರು ಹಾಜರಿದ್ದರು.

(ತೆರ್ನಹಳ್ಳಿ ಟಿ.ಎನ್.ನಾರಾಯಣಸ್ವಾಮಿಗೌಡ)    
 ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ
ಮೊ. :9663603323

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಕೋಲಾರ: ವೇತನ ತಾರತಮ್ಯ ನಿವಾರಣೆಗೆ ಪ್ರೌಢಶಾಲಾ ವೃತ್ತಿ ಶಿಕ್ಷಕರ ಮನವಿ-ಮೂಲ ವೇತನ ವ್ಯತ್ಯಾಸ ಸರಿಪಡಿಸಲು ಆಗ್ರಹ

ಬೆಂಗಳೂರಿನಲ್ಲಿ ರಾಜ್ಯ ವೇತನ ಆಯೋಗಕ್ಕೆ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಮಂಜೇಗೌಡ ಸೇರಿದಂತೆ ಪದಾಧಿಕಾರಿಗಳು ವೇತನ ತಾರತಮ್ಯ ...

ಕೋಲಾರ: ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ.ಜಿ.ಆಂಜಿನಪ್ಪ ಆಯ್ಕೆ

ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಸರ್ವಸದಸ್ಯರ ಸಭೆ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಪಿಯು ಕಾಲೇಜಿನಲ್ಲಿ ...

ಕೋಲಾರ: ಸರ್ಕಾರದ ಯೋಜನೆಗಳು ಕ್ರೈಸ್ತ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು -ಐವನ್ ಡಿಸೋಜಾ

ರಾಜ್ಯ ಸರ್ಕಾರವು 2013-14, 2014-15, 2015-16, 2016-17, 2017 ಮತ್ತು 2017-18 ನೇ ಸಾಲುಗಳಲ್ಲಿ  ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗೋಸ್ಕರ ಪ್ರಯೋಜಿಸಿರುವ ...

ದುಬೈ: 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017' ಪ್ರಾಪರ್ಟಿ ಶೋನಲ್ಲಿ ಭಾಗವಹಿಸಿ 'ಮಾರ್ಚ್ 22'  ಸಿನೆಮಾದ  ಟಿಕೇಟನ್ನು ಉಚಿತ ಪಡೆಯಿರಿ 

ಶೇಖ್ ಝಹಿದ್  ರಸ್ತೆಯ ಕ್ರೌನ್ ಪ್ಲಾಜಾ ಹೋಟೆಲಿನಲ್ಲಿ ಸೆ. 22-23ರಂದು ಭಾರತದ  ಅತೀ ದೊಡ್ಡ ಪ್ರಾಪರ್ಟಿ ಶೋ 'ರಿಯಾಲಿಟಿ ಇಂಡಿಯಾ ಎಕ್ಸ್ಪೋ-2017