ಶ್ರೀನಿವಾಸಪುರ: ಡೊನೇಶನ್ ಹಾವಳಿ-ತಡೆಗೆ ಕ್ರಮ ಕೈಗೊಳ್ಳಲು ಶಿಕ್ಷಣಾಧಿಕಾರಿಗಳಿಗೆ ಮನವಿ

Source: shabbir | By Arshad Koppa | Published on 25th April 2017, 8:06 AM | State News |

ಶ್ರೀನಿವಾಸಪುರ: ಖಾಸಗಿ ವಿಧ್ಯಾ ಸಂಸ್ಥೆಗಳು ಸೇವೇಭಾವನೆಯಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿದರೂ ಅವು ಪೋಷಕರಿಂದ ದುಬಾರಿ ಡೊನೇಷನ್ ವಸೂಲಿ ಮಾಡುತ್ತಿವೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಎಂದು ಭೀಮಸೇನೆ-ಕರ್ನಾಟಕ ಶ್ರೀನಿವಾಸಪುರ ತಾಲ್ಲೂಕು ಶಾಖೆ ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ಮನವಿಯನ್ನು ಸಲ್ಲಿಸಿದೆ.
     
ಶ್ರೀನಿವಾಸಪುರ ಬೀಮಸೇನೆ-ಕರ್ನಾಟಕ ತಾಲ್ಲೂಕು ಶಾಖೆಯ ಪಧಾದಿಕಾರಿಗಳು ಮನವಿಯನ್ನು ಸಲ್ಲಿಸಿದ ನಂತರ ಮಾತನಾಡಿ  ಸರ್ಕಾರಿ ಶಾಲೆಯಿಂದ 1 ಕಿ.ಮೀ ದೂರ ಯಾವುದೇ  ಖಾಸಗೀ ಶಾಲೆಗಳಿಗೆ ಅನುಮತಿ ನೀಡಬಾರದೆಂದು ಸರ್ಕಾರದ ಸ್ಪಷ್ಟ ನಿರ್ಧೇಶನವಿದೆ ಆದರೂ ಅಧಿಕಾರಿಗಳು ರಾಜಕಾರಣ ಗಳ ಒತ್ತಡಕ್ಕೆ ಮಣ ದು ಅನುಮತಿ ನೀಡುತ್ತಿರುವುದು ದುರುದುಷ್ಟಕರ ಸಂಗತಿಯೆಂದು ಅಪಾಧಿಸಿದರು. ಇದರಿಂದಾಗ ಖಾಸಗೀ ಶಾಲೆಗಳು ಶೈಕ್ಷಣ ಕ ಸಾಲಿನ ಆರಂಭಕ್ಕೆ ಮುಂಚಿತವಾಗಿ ಕರಪತ್ರಗಳು ಗೋಡೆ ಮೇಲೆ ಬಿತ್ತಿಪತ್ರಗಳು ಹಾಗು ವಾಹನಗಳ ಮೇಲೆ ವರ್ಣರಂಜಿತ ಪ್ರಚಾರ ನಡೆಸುತ್ತಿವೆ. ಆದರೂ 1ನೇ ತರಗತಿಗೆ 20 ಸಾವಿರ ರೂ ಮೇಲ್ಪಟ್ಟು ಡೊನೇಷನ್ ವಸೂಲಿ ಮಾಡುವುದರ ಜೊತೆ ನಂತರ ತರಗತಿಗಳಿಗೆ ಹೆಚ್ಚು ಹಣ ವಸೂಲಿಯಲ್ಲಿ ತೊಡಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಅವಕಾಶವಾಗಿದೆ ಎಂದರು. ಆದರೂ ಪಡೆಯುವ ಹಣ ಒಂದಾದರೆನೀಡುವ ರಶೀದಿ ಬೇರೆ ಇರುತ್ತದೆಂದರು. ಹಾಗಾಗಿ ಶಿಕ್ಷಣ ಇಲಾಖೆ ಆಯಾ ಶಾಲೆಗಳಲ್ಲಿ ಯಾವ ತರಗತಿಗೆ ಎಷ್ಟು ಶುಲ್ಕವೆಂದು ಪ್ರಕಟಣಾ ಫಲಕದಲ್ಲಿ ಹಾಕುವಂತಾಗಬೇಕೆಂದು ಒತ್ತಾಯಿಸಲಾಗಿದೆ ಅದೇ ರೀತಿ ನಿಯಮ ಮೀರಿ ಹೆಚ್ಚುವರಿ ಶುಲ್ಕ ಪಡೆಯುತ್ತಿರುವ ಶಾಲೆಗಳ ಅಥವಾ ನವೀಕರಣ ತಡೆಹಿಡಿಯಬೇಕಾಗಿದೆ ಎಂದರು. ಕೆಲವು ಶಾಲೆಗಳಲ್ಲಿ ಮೂಳಭೂತ ಸೌಲಭ್ಯಗಳು ಇಲ್ಲದೇ ಇದ್ದರೂ ನವೀಕರಣ ಮಾಡುತ್ತಿರುವುದು ಜಾಣಕುರುಡತನವಾಗಿದೆ ಹಾಗೆಯೇ ಮಕ್ಕಳ ತೂಕಕ್ಕಿಂತ ಶಾಲಾ ಬ್ಯಾಗಿನ ಪುಸ್ತಕದ ಹೊರೆ ಹೆಚ್ಚಾಗಿರುವುದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
   ಈ ಸಂದರ್ಭದಲ್ಲಿ ಭೀಮಸೇನೆ-ಕರ್ನಾಟಕ ತಾಲ್ಲೂಕು ಅಧ್ಯಕ್ಷ ಕೆ.ವಿ.ನಾಗರಾಜ್, ರಾ.ಸಂ.ಕಾರ್ಯದರ್ಶಿ ಪೆದ್ದಪಲ್ಲಿ ಎಸ್.ಈರಪ್ಪ, ಶ್ರೀನಿವಾಸ್(ಕಪಿಲ್) ರಘುನಾಥಪುರ ಸುಬ್ರಮಣ , ವಿ.ಆನಂದ್, ಪಿ.ಆರ್.ರಾಮಚಂದ್ರ, ಎಸ್.ಬಾಲಕೃಷ್ಣ, ಶ್ರೀರಾಮ್, ವೆಂಕಟೇಶ್ ಇತರರು ಹಾಜರಿದ್ದರು. 

 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...