ಶ್ರೀನಿವಾಸಪುರ:ಇನ್ನೂ ಸಮಾಜದಲ್ಲಿ ಶೈಕ್ಷಣಿಕ ಸಾಮಾಜಿಕ ಭಾವನಾತ್ಮಕ ತಾರತಮ್ಯ ಜನರಿಂದ ದೂರವಾಗದಿರುವುದು  ನಮ್ಮ ದೌರ್ಬಲ್ಯ - ಬೈರೇಗೌಡ 

Source: shabbir | By Arshad Koppa | Published on 17th August 2017, 8:39 AM | State News | Guest Editorial |

ಕನಕದಾಸರು ಪುರಂದರದಾಸರು ಅಕ್ಕಮಹಾದೇವಿ ತತ್ವ ಪದಗಳ ಮೂಲಕ ಸಮಾಜದಲ್ಲಿ ಜಾತಿ ಮತ ಅಂಕು ಡೊಂಕು ತಿದಿದ್ದರೂ ಇನ್ನೂ ಸಮಾಜದಲ್ಲಿ ಶೈಕ್ಷಣಿಕ ಸಾಮಾಜಿಕ ಭಾವನಾತ್ಮಕ ತಾರತಮ್ಯ ಜನರಿಂದ ದೂರವಾಗದಿರುವುದು  ನಮ್ಮ ದೌರ್ಬಲ್ಯ ಎಂದು ತಾಲೂಕು ಸರಕಾರಿ ನೌಕರರ ಸಂಘದ ನಿರ್ದೇಶಕ ಎಂ. ಬೈರೇಗೌಡ ಹೇಳಿದರು.
   ತಾಲೂಕಿನ ಹೊದಲಿ ಗ್ರಾಮ ಪಮಚಾಯಿತಿ ವ್ಯಾಪ್ತಿಯ ಆರ್.ತಿಮ್ಮಸಂದ್ರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶ್ರೀಯೋಗ ಸಾಂಸ್ಕøತಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಶ್ರೀನಿವಾಸಪುರದ 2ನೇ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಉಚಿತ ಬಾಟಲ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
  ಸಮಾಜದಲ್ಲಿ ಹುಟ್ಟಿದ ಪ್ರತಿಯೊಬ್ಬರು ಬಗವಂತನ ಪ್ರೇಣೆಗೆ ಪಾತ್ರರಾಗಬೇಕು. ಇಲ್ಲಿ ಹಣ ಆಸ್ತಿ ಎಂದು ಸಾಮಾಜಿಕ ಬದ್ದತೆ ಇಲ್ಲದೆ ಜಾತಿ ಮತ ತಾರತಮ್ಯ ಹೆಚ್ಚಾದಾಗ ವ್ಯಾಸರಾಯರಿಂದ ಧೀಕ್ಷೆ ಪಡೆದ ಕನಕದಾಸರು ಪುರಂದರದಾಸರಾದಿಯಾಗಿ ಭಕ್ತಿಯಡೆಗೆ ಆದ್ಯತೆ ಕೊಟ್ಟು ನಿರಂತರ ಮೇಲು ಕೀಳು ಅಳಿಸುವಂತೆ ಕನ್ನಡ ಸಾಹಿತ್ಯ ಸರಸ್ವತ ಲೋಕಕ್ಕೆ ಜೀವ ತುಂಬಿದರು. ಕಲಿಕೆ ಎಂಬುದು ಪಠ್ಯಾ ಪುಸ್ತಕಕ್ಕಿಂತ ಪಠ್ಯೇತ್ತರ ಚೆಟುವಟಿಕೆಗಳ ಪರೇರಣೆಯಿಂದ ಕಲಿಯಬೇಕು. ಸ್ವಚ್ಚತೆ ಮೋದಿ ಒಬ್ಬರು ಮಾಡಿದರೆ ಸಾಲದು. ಪ್ರತಿಯೊಬ್ಬರು ಶಿಸ್ತು ಸ್ವಚ್ಚತೆ ಸಮಯ ಪ್ರಜ್ಞೆ ಇಟ್ಟುಕೊಂಡಾಗ ಮನೆಯಂತೆ ಸಮಾಜದ ಸುಚಿತ್ವವಾಗಿರುತ್ತದೆ. ಬಡವರ ಕುಟುಂಬಗಳಲಿ ಜನಿಸಿದವರು ಸೇವೆ ಮಾಡುತ್ತಾರೆ. ಅದೆ ರೀತಿ ಸರಕಾರಿ ಶಾಲೆ ಮಕ್ಕಳಲ್ಲಿ ಸಮಾಜಿಕ ನೈತಿಕ ಮೌಲ್ಯಗಳು ಇರುತ್ತವೆ. ವಿದ್ಯಾರ್ಥಿಗಳು ಶಾಲೆಯಲ್ಲಿ ದೊರಯುವ ಸೌಲಭ್ಯಗಳು ಬಳಸಿಕೊಂಡು ಶೈಕ್ಷಣ ಕ ಸತ್ಪ್ರಜೆಗಲಾಗಬೇಕೆಂದು ತಾಕೀತು ಮಾಡಿದರು.
ಶ್ರೀಯೋಗ ಸಾಂಸ್ಕøತಿಕ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ ಕಾರ್ಯದರ್ಶಿ ಕೆ.ಎಂ.ಚೌಡಪ್ಪ ಉಚಿತ ಬಾಟರ್ ವಿತರಣೆ ಮಾತನಾಡಿ ಸಾಮಾಜಿಕ ಸೇವೆಗೆ ಗುಣಾತ್ಮಕ ಚಿಂತನೆ ಇರಬೇಕು. ಓದಿದವರೆಲ್ಲಾ ಎಂಜಿನಿಯರ್ ಆಗಬೇಕೆನ್ನುವುದು ಒಳ್ಳೆಯದೆ. ಆದರೆ ಸಮಾಜ ಸೇವೆ ಮತ್ತು ಸುಸಂಸ್ಕøತರಾಗಿ ಬದುಕಲು ಶಿಕ್ಷಣವೆ ಬೇಕಾಗಿಲ್ಲ. ಓದಿದವರು ಒಳ್ಳೆಯ ಗುಣಗಳು ಬೆಳೆಸಿಕೊಂಡು ಮನೆಗಳು ಉಳಿಸುವ ನೈತಿಕ ಸಾಕ್ಷರತೆ ಕಲಿಯಬೇಕÀು. 400 ವರ್ಷಗಳ ಹಿಂದೆ ಕನಕದಾಸರು ಸಮಾಜದಲ್ಲಿ ಜನ ಸಮುದಾಯಕ್ಕೆ ಮನುಷ್ಯರಾಗಿ ಬದುವಕುವ ನೈತಿಕ ಶಿಕ್ಷಣ ನೀಡಿದ ಅವರು ಇಂದಿಗೂ ಆದರ್ಶವಾಗಿದ್ದಾರೆ. ಅವರು ಅವರ ಕುಟುಂಬಕ್ಕಾಗಿ ಬದುಕಲಿಲ್ಲ ಸಮಾಜವೆ ಒಂದು ಕುಟುಂಬ ಎಂದು ಸಮಾಜಕ್ಕಾಗಿ ಬದುಕಿದ ಅವರ ಆದರ್ಶ ಎಲ್ಲರಿಗೂ ಆದರ್ಶವಾದಂತೆ ವಿದ್ಯಾರ್ಥಿಗಳು ಸಮಾಜಕ್ಕೆ ಏನಾದರೊಂದು ಕೊಡುವ ನಿಟ್ಟಿನಲ್ಲಿ  ಸಾರ್ಥಕ ಶಿಕ್ಷಣ ಪಡೆಯಬೇಕೆಂದು ತಿಳಿಸಿದರು.


 ನಿರ್ದೇಶಕ ಕೆ.ವಿ.ಸಿ.ರೆಡ್ಡಿ ಮಾತನಾಡಿ ಉಚಿತವಾಗಿ ಕೊಡುವ ಯಾವುದೆ ವಸ್ತುವಿಗೆ ಬೆಲೆ ಕಟ್ಟಲಾಗದು. ವಿದ್ಯಾರ್ಥಿಗಳು ಸಂಸ್ಥೆಯಿಂದ ಉಚಿತವಾಗಿ ಕೊಡುವ ಬಾಟಲ್ ಸದ್ಬಳಕೆ ಮಾಡಿಕೊಂಡು ಕುಟುಂಬಗಳಲ್ಲಿನ ಪರಿಸ್ಥಿತಿ ಅರಿತು ನೀತಿವಂತರಾಗಿ. ಶಿಕ್ಷಣದಿಂದ ಸುಜ್ಞಾನ ಪಡೆದು ಶಿಕ್ಷಣದಿಂದಲೆ ಜೀವನ ರೂಪಿಸಿಕೋಳ್ಳಿ. ಸರಕಾರಿ ಶಾಲೆಗಳಲ್ಲಿ ದೊರೆಯುವ ಸೌಲಭ್ಯಗಳು ಯಾವುದೆ ಖಾಸಗಿ ಶಾಲೆಗಿಂತ ಕಡಿಮೆಯಿಲ್ಲ. ಈ ಹಿಂದೆ ಉನ್ನತ ಹುದ್ದೆಗಳು ಪಡೆದವರೆಲ್ಲರೂ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವರೆ ಎನ್ನುವುದು ಯಾರು ಮರೆಯಬಾರದೆಂದರು. ಸಿಆರ್‍ಪಿ ಶ್ರೀರಾಮರೆಡ್ಡಿ ಮಾತನಾಡಿದರು. ಶ್ರೀಯೊಸಾಗ್ರಾಸೇ ಸಂಸ್ಥೆಯ ಅಧ್ಯಕ್ಷೆ ಎಂ.ಆರ್.ಪ್ರಭಾವತಮ್ಮ, ಪ್ರಾಥಮಿಕಶಿಕ್ಷಕ ಸಂಘದ ನಿರ್ದೇಶಕ ಡಿ.ಆರ್.ಶ್ರೀರಾಮೇಗೌಡ, ಶಾಂತಲ ಹಾಜರಿದ್ದರು. 

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...