ಶ್ರೀನಿವಾಸಪುರ:ಕೃಷಿ ಯಂತ್ರೋಪಕರಣಗಳ ಬಳಕೆ ಹಾಗೂ ನಗದು ರಹಿತ ವ್ಯವಹಾರ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ”

Source: shabbir | By Arshad Koppa | Published on 19th August 2017, 7:59 AM | State News | Special Report |

ಶ್ರೀನಿವಾಸಪುರ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಯಲ್ದೂರು ಗ್ರಾಮದಲ್ಲಿ ಕೃಷಿ ಯಂತ್ರೋಪಕರಣ ಬಾಡಿಗೆ ಆಧಾರಿತ ಸೇವಾಕೇಂದ್ರ ಆವರಣದಲ್ಲಿ ದಿನಾಂಕ: 18.08.2017 ರಂದು ಆಯೋಜನೆ ಮಾಡಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ಸೀತಮ್ಮ, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಯಲ್ದೂರು ಹಾಗೂ ಈ ಕಾರ್ಯಕ್ರಮವನ್ನು  ರಾಜ್ಯ ಪ್ರಶಸ್ತಿ ಪುರಸ್ಕøತರಾದ ಟಿ.ರಾಮಪ್ಪ ರವರು ಉದ್ಘಾಟನೆಯನ್ನು ಮಾಡಿ ಮಾತನಾಡುತ್ತಾ, ಧರ್ಮಸ್ಥಳ ಎಂಬುದು ಧರ್ಮದಿಂದ ಕೂಡಿದ್ದು ರೈತರಿಗೆ ಸಹಾಯ ಮಾಡುತ್ತಿದೆ.  ಇಲ್ಲಿ ದೊರೆಯುವ ಯಂತ್ರೋಪಕರಣಗಳನ್ನು ಎಲ್ಲಾ ರೈತರು ಉತ್ತಮವಾದ ರೀತಿಯಲ್ಲಿ ಪಡೆದುಕೊಂಡು ಕೃಷಿಯಲ್ಲಿ ಉತ್ತಮ ಅಭಿವೃದ್ಧಿಯನ್ನು ಸಾಧಿಸಿ ಎಂದು ತಿಳಿಸಿದರು. 
          ಧರ್ಮಸ್ಥಳದ ಸಿ.ಹೆಚ್.ಎಸ್.ಸಿ ನಿರ್ದೇಶಕರಾದ ಶ್ರೀ ಗಣೇಶ್ ಕುಡ್ವ ರವರು ಮಾತನಾಡುತ್ತಾ, “ ಕೃಷಿಯು ರಾಷ್ಟ್ರದ ಬೆನ್ನೆಲುಬು” ಯಂತ್ರಧಾರೆಯು 2014 ರಲ್ಲಿ ಸ್ಥಾಪನೆಯಾಗಿದ್ದು, ಗ್ರಾಮೀಣ ಭಾಗದ ರೈತರಿಗೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಸೇವೆಯನ್ನು ನೀಡುತ್ತಿದ್ದೆ. ರೈತರನ್ನು ನೇರವಾಗಿ ಭೇಟಿ ಮಾಡಿ ಸಹಕಾರ ನೀಡುತ್ತಿದ್ದು, ಸರ್ಕಾರ ಮತ್ತು ಗ್ರಾಮಾಭಿವೃದ್ಧಿ ಯೋಜನೆ ಒಟ್ಟು ಗೂಡಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದೆ.  ಇದಕ್ಕೆ ಗ್ರಾಮೀಣ ಭಾಗದ ಎಲ್ಲಾ ರೈತರು ಯಂತ್ರೋಪಕರಣಗಳ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. 
       ಮೋಹಿತ್ ಕುಮಾರ್, ಸಹಾಯಕ ಪ್ರಾಧ್ಯಾಪಕರು, ಕೃಷಿ ಇಂಜಿನಿಯರಿಂಗ್ ರವರು ಮಾತನಾಡುತ್ತಾ, ಇಂದಿನ ಪರಿಸ್ಥಿತಿಯಲ್ಲಿ ಯಂತ್ರೋಪಕರಣಗಳ ಮಹತ್ವ ತುಂಬಾ ಪ್ರಮುಖವಾದದು, ಕಡಿಮೆ ಸಮಯದಲ್ಲಿ ಯಂತ್ರೋಪಕರಣಗಳಿಂದ ಹೆಚ್ಚು ಉಳುಮೆ ಮಾಡಬಹುದು. 100 ಜನ ಮಾಡುವ ಕೆಲಸ ಒಂದು ಯಂತ್ರ ಮಾಡುತ್ತದೆ. ಆಳುಗಳ ಕೊರತೆ ನಿವಾರಣೆಯಾಗುತ್ತದೆ, ಸ್ಥಳೀಯ ಸಿಗುವಂತಹ ತರಕಾರಿ ಹಣ್ಣುಗಳನ್ನು ಸಂಸ್ಕರಣೆ ಮಾಡಿ ಆರ್ಥಿಕವಾಗಿ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಿ ಎಂದು ತಿಳಿಸಿದರು.

    ಸಹಾಯಕ ಕೃಷಿ ನಿರ್ದೇಶಕರಾದ ಅಮೃತವಲ್ಲಿ ರವರು ಮಾತನಾಡುತ್ತಾ, ಕೃಷಿ ಯಂತ್ರಧಾರೆ ಕಾರ್ಯಕ್ರಮವು ಒಳ್ಳೆಯ ಕಾರ್ಯಕ್ರಮವಾಗಿದ್ದು, ಇದರಿಂದ ರೈತರಿಗೆ ಸಹಾಯವಾಗುತ್ತಿದೆ ಹಾಗೂ ಕೃಷಿ ಇಲಾಖೆಯಿಂದ ಸಿಗುವಂತಹ ಅನುಕೂಲಗಳು ಮತ್ತು ಇಲಾಖೆಯಿಂದ ಸಿಗುವ ಅನುದಾನಗಳ ಬಗ್ಗೆ ಮಾಹಿತಿಯನ್ನು ನೀಡಿದರು. 

    ಕರ್ನಾಟಕ ರಾಜ್ಯ ರೈತ ಸಂಘ: ಮೋಹನ್ ಗೌಡ ಮಾತನಾಡುತ್ತಾ, ಭಾರತ ದೇಶದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿರುವ ಒಳ್ಳೆಯ ಕೆಲಸ ಕಾರ್ಯಗಳು ಹಾಗೂ ಅನುಕೂಲಗಳನ್ನು ಬೇರೆ ಯಾವ ಸಂಸ್ಥೆಯ ಮಾಡುತ್ತಿಲ್ಲ ಎಂದು ತಿಳಿಸಿದರು.


    ಸಿ.ಹೆಚ್.ಎಸ್.ಸಿ ಸಮನ್ವಯಾಧಿಕಾರಿಗಳಾದ ಶ್ರೀ ಹರೀಶ್ ಕುಮಾರ್ ರವರು ಮಾತನಾಡುತ್ತಾ, ಸೇವಾಕೇಂದ್ರದಲ್ಲಿ ನಗದು ರಹಿತ ವ್ಯವಹಾರದ ಬಗ್ಗೆ ಮಾಹಿತಿ ನೀಡುತ್ತಾ ರೈತರ ಜೊತೆ ನಮ್ಮ ಯೋಜನೆ ಬೆಳೆದಿದೆ ಇದಕ್ಕೆ ಎಲ್ಲಾ ರೈತರ ಸಹಕಾರ ಬೇಕಾಗಿದೆ ಎಂದು ತಿಳಿಸಿದರು. 
     ಮುಖ್ಯ ಉಪಸ್ಥಿತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ನಿರ್ದೇಶಕರಾದ ಶ್ರೀ ಜೆ.ಚಂದ್ರಶೇಖರ್, ತಾಲೂಕಿನ ಯೋಜನಾಧಿಕಾರಿಯಾದ ಶ್ರೀ ಸುರೇಶ್ ಶೆಟ್ಟಿ, ಕೃಷಿ ಅಧಿಕಾರಿಯಾದ ರವಿ, ವಲಯದ ಮೇಲ್ವಿಚಾರಕರಾದ ವಿಶ್ವನಾಥ, ಕೃಷಿ ಮೇಲ್ವಿಚಾರಕರಾದ ಯೋಗೇಶ್,  ಸಿ.ಹೆಚ್.ಎಸ್.ಸಿ ಪ್ರಬಂಧಕರಾದ ರೇಣುಕಾ ಪ್ರಸಾದ್, ಒಕ್ಕೂಟದ ಅಧ್ಯಕ್ಷರು, ವಲಯದ ಎಲ್ಲಾ ಸೇವಾಪ್ರತಿನಿಧಿಗಳು ಉಪಸ್ಥಿತಿಯಲ್ಲಿದ್ದರು.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...