ಆಧ್ಯಾತ್ಮಿಕವಾಗಿ ನಾವು ಜನತೆಯನ್ನು ಮೇಲಕ್ಕೆತ್ತಲು ಸಾಧ್ಯ. ಇಕ್ಬಾಲ್ ಮುಲ್ಲಾ. ಜ. ಇ. ಹಿಂದ್ ರಾಷ್ಠ್ರೀಯ ಕಾರ್ಯದರ್ಶಿ

Source: sonews | By Staff Correspondent | Published on 3rd December 2018, 12:33 AM | Coastal News | Don't Miss |

ಉಡುಪಿ:  ಬ್ರಹ್ಮಾಂಡದ ಮಾಲಿಕನಾದ ದೇವನನ್ನು ನಾವೆಲ್ಲರು ನಂಬುತ್ತೇವೆ. ಆತನ ಮಾರ್ಗದರ್ಶನ ಅನಾದಿ ಕಾಲದಿಂದಲೂ ಆತನ ಪ್ರವಾದಿಗಳ ಹಾಗೂ ಸತ್ಯ ಸಂದ ದಾಸರ ಮುಖಾಂತರ ಮಾನವನಿಗೆ ಬಂದಿರುತ್ತದೆ. ಇಹಲೋಕ ಜೀವನವು ಪರೀಕ್ಷೆಯಾಗಿದ್ದು ಈ ಜೀವನದ ನಂತರ ಇನ್ನೊಂದು ಶಾಶ್ವತ ಜೀವನದ ಸತ್ಯವನ್ನು ತೋರಿಸಿದ್ದಾರೆ. ಆದರೆ ಇಂದು ಸಮಾಜದಲ್ಲಿ ಕೆಡುಕುಗಳು ಅವ್ಯಾಕೃತವಾಗಿ ಸಂಭವಿಸುತ್ತಾ ಹತ್ಯಗಳು ನಡೆಯುತ್ತಿದೆ. ಗಡಿ ವಿವಾದಗಳು, ರೈತರ ಆತ್ಮಹತ್ಯೆ, ಮಹಿಳೆಯರ ಸಮಸ್ಯೆಗಳು, ಅನೈತಿಕತೆ ಅರಾಜಕತೆ ಅತ್ಯಧಿಕವಾಗಿರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ. ಇದಕ್ಕೆ ಮೂಲ ಕಾರಣ ದೇವಾದೇಶದ ಧಿಕ್ಕಾರ ಎಂದು ಇಕ್ಬಾಲ್ ಮುಲ್ಲಾ. ಜಮಾಅತೆ ಇಸ್ಲಾಮೀ ಹಿಂದ್ ರಾಷ್ಠ್ರೀಯ ಕಾರ್ಯದರ್ಶಿ ಇವರು ಮಾಧ್ಯಮ ಮಿತ್ರರೊಂದಿಗೆ ಡಯನಾ ಹೊಟೇಲ್ ಉಡುಪಿಯಲ್ಲಿ ಹೇಳಿದರು.

ಮುಹಮ್ಮದ್(ಸ)ರವರು ಇಸ್ಲಾಮ್ ಧರ್ಮದ ಸಂಸ್ಥಾಪಕರಲ್ಲ ಬದಲಾಗಿ ಸೃಷ್ಠಿ ಕರ್ತನ ಕೊನೇಯ ಪ್ರವಾದಿಯಾಗಿದ್ದಾರೆ ಅವರು ಜಗತ್ತಿನ ಎಲ್ಲ ಮಾನವರಿಗೆ ಬಂದಂತಹ ಪ್ರವಾದಿ. ಅವರು ಶಾಂತಿಯ ಸಂದೇಶವನ್ನು ನೀಡಿದವರು. ದೇವನಿಗೆ ಶರಣಾಗಿ ಆತನ ಆದೇಶಗಳ ಪಾಲನೆಯಿಂದ ಮಾತ್ರ ಮುಕ್ತಿ ಎಂದು ತಿಳಿಸಿದವರು. ಸೂರ್ಯ, ಚಂದ್ರ, ಗಾಳಿ, ಬೆಳಕು ಮುಂತಾದವುಗಳಿಂದ ಹೇಗೆ ನಾವು ಪ್ರಯೋಜನವನ್ನು ಪಡೆಯುತ್ತೇವೆಯೋ ಅದೇ ರೀತಿ ದೇವಗ್ರಂಥದಿಂದಲೂ ಪ್ರಯೋಜನವನ್ನು ಪಡೆಯು ಬೇಕು. ಕುರ್‍ಆನ್ ಎಲ್ಲ ಭಾಷೆಗಳಲ್ಲೂ ಲಭ್ಯವಿದೆ ಎಂದರು.

ಮಾಧ್ಯಮಗಳು ರಚನಾತ್ಮಕವಾಗಿ ಕೆಲಸಮಾಡುತ್ತಿದೆ. ಅವರಿಗೆ ನಾನು ಅಬಾರಿಯಾಗಿದ್ದೇನೆ ಎಂದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...