ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಪಾತ್ರವೇನು?

Source: sonews | By sub editor | Published on 10th March 2018, 12:10 AM | Special Report | Don't Miss |

 

ಪ್ರತೀ ಜನವರಿ 26ರಂದು ತ್ರಿವರ್ಣಧ್ವಜವನ್ನು ಸಾರ್ವಜನಿಕವಾಗಿ ಅರಳಿಸಬೇಕೆಂಬ 1929ರ ಲಾಹೋರ್ ಕಾಂಗ್ರೆಸ್ ಕರೆಗೆ ಹೆಡಗೇವಾರ್ ಓಗೊಟ್ಟರೆಂದು ಈಗ ಹೇಳಲಾಗುತ್ತಿದೆ. ಸತ್ಯ ಏನೆಂದರೆ, ಹೆಡಗೇವಾರ್ ಆಜ್ಞೆಯ ಪ್ರಕಾರ ಆರೆಸ್ಸೆಸ್ ಈ ಕರೆಯನ್ನು ತಿರಸ್ಕರಿಸಿತ್ತು. 1930ರ ಜನವರಿ 21ರಂದು ಎಲ್ಲ ಆರೆಸ್ಸೆಸ್ ಶಾಖೆಗಳಿಗೆ ‘‘ರಾಷ್ಟ್ರೀಯ ಧ್ವಜ ಅರ್ಥಾತ್ ಭಗವಾಧ್ವಜ(ಕೇಸರಿ ಧ್ವಜ)ವನ್ನು ಪೂಜಿಸುವಂತೆ ಅವರು ಆಜ್ಞೆ ನೀಡಿದ್ದರು. ಈ ಆಜ್ಞೆ 1980ರಲ್ಲಿ ಪ್ರಕಟವಾದ ಹೆಡಗೇವಾರ್‌ರ ಪತ್ರಗಳ ಸಂಗ್ರಹದಲ್ಲಿದೆ.

ಭಾರತ ಸ್ವಾತಂತ್ರ ಹೋರಾಟದಲ್ಲಿ ಆರೆಸ್ಸೆಸ್ ಭಾಗವಹಿಸಿತ್ತು ಎಂಬ ಒಂದು ಕಥಾನಕವನ್ನು ಸೃಷ್ಟಿಸಲು ಆರೆಸ್ಸೆಸ್ ಸಿದ್ಧಾಂತಿಗಳು ಭಾರೀ ಒದ್ದಾಡುತ್ತಿದ್ದಾರೆ. 2014ರಲ್ಲಿ ಒಂದು ಸಾವಿರ ವರ್ಷಗಳ ಬಳಿಕ ಹಿಂದೂ ಆಡಳಿತದ ಮರುಸ್ಥಾಪನೆ ಎಂದು ಸಂಭ್ರಮಿಸಲಾದ 2014ರ ಆರೆಸ್ಸೆಸ್ ಬಿಜೆಪಿ ಚುನಾವಣಾ ಗೆಲುವಿನ ಬಳಿಕ ಈ ಕಥಾನಕ ಸೃಷ್ಟಿಯ ಯೋಜನೆಗೆ ಚಾಲನೆ ದೊರಕಿತು. ಇತ್ತೀಚೆಗೆ ಈ ಕುರಿತು ಕೆಲಸ ಮಾಡಿದವರು ಸಿ.ಕೆ ಸಾಜಿ ನಾರಾಯಣನ್. (‘ಡೋಂಟ್ ಫಾಸ್ಟ್ ಫಿಯರ್ ಒನ್‌ಟು ನ್ಯಾಶನಲಿಸಂ’; ಔಟ್‌ಲುಕ್ ಫೆಬ್ರವರಿ 5, 2018) ಸ್ವಾತಂತ್ರ ಹೋರಾಟದಲ್ಲಿ ಆರೆಸ್ಸೆಸ್ ಭಾಗವಹಿಸಿತ್ತು ಎಂದು ಸಾಬೀತು ಪಡಿಸಲು ಇವರು ದೈರ್ಯವಾಗಿ ನಾಚಿಕೆ ಇಲ್ಲದೆ ಸುಳ್ಳುಗಳ ಸರವನ್ನೇ ಹೆಣೆದಿದ್ದಾರೆ.

ಆರೆಸ್ಸೆಸ್ ಸ್ಥಾಪಕ ಕೆ.ಬಿ. ಹೆಡಗೇವಾರ್ ಓರ್ವ ಕಟ್ಟಾ ರಾಷ್ಟ್ರೀಯವಾದಿ; ಬ್ರಿಟಿಷ್ ಆಡಳಿತದಲ್ಲಿ ಅವರು ಜೈಲಿಗೆ ಹೋಗಿದ್ದರು; ಮತ್ತು 1929ರ ‘ಸಂಪೂರ್ಣ ಸ್ವಾತಂತ್ರ’ ಎಂದು ಕಾಂಗ್ರೆಸ್‌ನ ಠರಾವನ್ನು 1930ರ ಜನವರಿ 26ರಂದು ರಾಷ್ಟ್ರಧ್ವಜವನ್ನು ಅರಳಿಸುವ ಮೂಲಕ ಸಂಭ್ರಮಾಚರಣೆ ನಡೆಸಬೇಕೆಂದು ಎಲ್ಲ ಆರೆಸ್ಸೆಸ್ ಶಾಖೆಗಳಿಗೆ ಅವರು ನಿರ್ದೇಶನ ನೀಡಿದ್ದರೆಂದು ಸಾಜಿ ವಾದಿಸುತ್ತಾರೆ. ಅಲ್ಲದೇ ಕ್ವಿಟ್ ಇಂಡಿಯಾ ಚಳವಳಿ ವೇಳೆ ವಿದರ್ಭದಲ್ಲಿ ಚಿಮೋರ್ ಚಳವಳಿಯಲ್ಲಿ ಆರೆಸ್ಸೆಸ್ ಸ್ವಯಂ ಸೇವಕರು ತಮ್ಮ ಪ್ರಾಣತೆತ್ತರು. ರಾಷ್ಟ್ರ ಧ್ವಜವನ್ನು ಅರಳಿಸುವಾಗ ಪೊಲೀಸರು ಓರ್ವ ಆರೆಸ್ಸೆಸ್ ಸ್ವಯಂ ಸೇವಕನ್ನು ಗುಂಡಿಕ್ಕಿ ಕೊಂದರು ಎಂದೂ ಸಾಜಿ ಹೇಳುತ್ತಾರೆ. ಅವರ ಪ್ರಕಾರ, ಅರುಣ ಅಸಫ್ ಅಲಿ, ಜಯಪ್ರಕಾಶ್ ನಾರಾಯಣ ಮೊದಲಾದ ಹಲವು ಭೂಗತ ಸಮಾಜವಾದಿ ಹಾಗೂ ಕಾಂಗ್ರೆಸ್ ನಾಯಕರು ಆರೆಸ್ಸೆಸ್ ನಾಯಕರ ಮನೆಗಳಲ್ಲಿ ಅಡಗಿ ಆಶ್ರಯ ಪಡೆದಿದ್ದರು.
ಆದರೆ, ಹೀಗೆ ಆಶ್ರಯ ನೀಡಿದ ಲಾಲಾ ಹನ್ಸ್ ರಾಜ್ ಗುಪ್ತ, ಭಾವೂ ಸಾಹೇಬ್ ದೇಶಮುಖ್ ಮತ್ತು ಪಂಡಿತ್ ಎಸ್.ಡಿ. ಸತ್ವಲೇಕರ್ ಅದು ಹೇಗೆ ಆಶ್ರಯ ನೀಡಿದರು? ಎಂದು ನಾವು ಕೇಳಬೇಕು. ಈ ಆರೆಸ್ಸೆಸ್ ನಾಯಕರು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ್ದಲ್ಲಿ ಅವರು ಕೂಡಾ ಭೂಗತರಾಗಿರಬೇಕಾಗಿತ್ತು ಮತ್ತು ಅವರ ಮನೆಗಳ ಮೇಲೆ ಪೊಲೀಸರ ಕಣ್ಗಾವಲು ಇರುತ್ತಿತ್ತು. ಅಂತಹ ಮನೆಗಳಲ್ಲಿ ಆಶ್ರಯ ಪಡೆಯುವುದು ಆ ನಾಯಕರಿಗೆ ಆತ್ಮಘಾತುಕವಾಗುತ್ತಿತ್ತು. ಆರೆಸ್ಸೆಸ್ ನಾಯಕರು ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸದೆ ಇದ್ದಲ್ಲಿ ಮತ್ತು ಅವರ ಮನೆಗಳ ಮೇಲೆ ಪೊಲೀಸರ ಕಾವಲು ಇರದಿದ್ದಲ್ಲಿ ಮಾತ್ರ ಆ ಮನೆಗಳಲ್ಲಿ ಕಾಂಗ್ರೆಸ್ ನಾಯಕರು ಆಶ್ರಯ ಪಡೆಯಬಹುದಾಗಿತ್ತು.

ಹೆಡಗೇವಾರ್ ಮತ್ತು ಸ್ವಾತಂತ್ರ ಹೋರಾಟದ ಸುಳ್ಳುಗಳನ್ನು ಸತ್ಯವೆಂಬಂತೆ ಬಿಂಬಿಸುವ ಪ್ರಯತ್ನ
 ಪ್ರತೀ ಜನವರಿ 26ರಂದು ತ್ರಿವರ್ಣಧ್ವಜವನ್ನು ಸಾರ್ವಜನಿಕವಾಗಿ ಅರಳಿಸಬೇಕೆಂಬ 1929ರ ಲಾಹೋರ್ ಕಾಂಗ್ರೆಸ್ ಕರೆಗೆ ಹೆಡಗೇವಾರ್ ಓಗೊಟ್ಟರೆಂದು ಈಗ ಹೇಳಲಾಗುತ್ತಿದೆ. ಸತ್ಯ ಏನೆಂದರೆ, ಹೆಡಗೇವಾರ್ ಆಜ್ಞೆಯ ಪ್ರಕಾರ ಆರೆಸ್ಸೆಸ್ ಈ ಕರೆಯನ್ನು ತಿರಸ್ಕರಿಸಿತ್ತು. 1930ರ ಜನವರಿ 21ರಂದು ಎಲ್ಲ ಆರೆಸ್ಸೆಸ್ ಶಾಖೆಗಳಿಗೆ ‘‘ರಾಷ್ಟ್ರೀಯ ಧ್ವಜ ಅರ್ಥಾತ್ ಭಗವಾಧ್ವಜ(ಕೇಸರಿ ಧ್ವಜ)ವನ್ನು ಪೂಜಿಸುವಂತೆ ಅವರು ಆಜ್ಞೆ ನೀಡಿದ್ದರು. ಈ ಆಜ್ಞೆ 1980ರಲ್ಲಿ ಪ್ರಕಟವಾದ ಹೆಡಗೇವಾರ್‌ರ ಪತ್ರಗಳ ಸಂಗ್ರಹದಲ್ಲಿದೆ. ಇಷ್ಟೇ ಅಲ್ಲ, ತ್ರಿವರ್ಣ ಧ್ವಜದ ಬಗ್ಗೆ ಆರೆಸ್ಸೆಸ್‌ಗೆ ದ್ವೇಷವಿತ್ತು. ಇತಿಹಾಸದಲ್ಲಿ ಮೊದಲಬಾರಿ ಕೆಂಪು ಕೋಟೆಯಲ್ಲಿ ಜವಾಹರಲಾಲ್ ನೆಹರೂ ಈ ಧ್ವಜ ಅರಳಿಸುವುದನ್ನು ನೋಡಲು ಇಡೀ ದೇಶ ಸಿದ್ಧವಾಗುತ್ತಿರುವಾಗ ಆರೆಸ್ಸೆಸ್‌ನ ಇಂಗ್ಲಿಷ್ ಮುಖವಾಣಿ ಪತ್ರಿಕೆ ‘ಆರ್ಗನೈಸರ್’ ತನ್ನ 1947 ಆಗಸ್ಟ್ 14ರ ಸಂಚಿಕೆಯಲ್ಲಿ ರಾಷ್ಟ್ರಧ್ವಜವನ್ನು ಟೀಕಿಸಿ ಹೀಗೆ ಬರೆಯಿತು. ‘‘ರಾಷ್ಟ್ರಧ್ವಜವನ್ನು ಹಿಂದೂಗಳು ಎಂದಿಗೂ ಗೌರವಿಸುವುದಿಲ್ಲ ಮತ್ತು ಅದು ನಮ್ಮದೆಂದು ಒಪ್ಪಿಕೊಳ್ಳುವುದೂ ಇಲ್ಲ. ತ್ರೀ (ಮೂರು) ಎಂಬ ಶಬ್ದವೇ ಒಂದು ಕೆಡಕು (ಈವಿಲ್) ಮತ್ತು ಮೂರು ಬಣ್ಣಗಳಿರುವ ಒಂದು ಧ್ವಜ ಖಂಡಿತವಾಗಿಯೂ ಒಂದು ಕೆಟ್ಟ ಮಾನಸಿಕ ಪರಿಣಾಮವನ್ನುಂಟುಮಾಡುತ್ತದೆ ಮತ್ತು ಅದು ಒಂದು ದೇಶಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಇದೆ.’’

ಓರ್ವ ಕಾಂಗ್ರೆಸಿಗನಾಗಿ ಹೆಡಗೇವಾರ್ ಜೈಲಿಗೆ ಹೋದದ್ದು 
ಓರ್ವ ಆರೆಸ್ಸೆಸ್ ನಾಯಕನಾಗಿ 1921 ಮತ್ತು 1931ರಲ್ಲಿ ಖಿಲಾಫತ್ ಚಳವಳಿ ಹಾಗೂ ಉಪ್ಪಿನ ಸತ್ಯಾಗ್ರಹದ ಅವಧಿಯಲ್ಲಿ ಹೆಡಗೇವಾರ್ ಜೈಲಿಗೆ ಹೋದರೆಂದು ಹೇಳಲಾಗುತ್ತದೆ. ಸತ್ಯವೇನೆಂದರೆ, ಎರಡೂ ಸಂದರ್ಭಗಳಲ್ಲಿ ಅವರು ಜೈಲಿಗೆ ಹೋದದ್ದು ಒಬ್ಬ ಕಾಂಗ್ರೆಸಿಗನಾಗಿಯೇ ಹೊರತು ಒಬ್ಬ ಆರೆಸ್ಸೆಸ್ ನಾಯಕನಾಗಿ ಅಲ್ಲ. ಇದು ಆರೆಸ್ಸೆಸ್ ಪತ್ರಾಗಾರದ ದಾಖಲೆಗಳಿಂದಲೇ ತಿಳಿದು ಬರುತ್ತದೆ.

ಈ ಜೈಲು ಶಿಕ್ಷೆಯ ಬಗ್ಗೆ ಎರಡು ಮುಖ್ಯ ಸಂಗತಿಗಳಿವೆ. ಖಿಲಾಫತ್ ಚಳವಳಿಯ ಬಗ್ಗೆ ಉದ್ರೇಕಕಾರಿ ಭಾಷಣ ಮಾಡಿದ್ದಕ್ಕಾಗಿ ಜೈಲಿಗೆ ಹೋದ ಅವರು, ಬಂಧಿತರಾದ ಯಾರೂ ಕೂಡ ತಮ್ಮ ಪರವಾಗಿ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಬಾರದೆಂಬ ಗಾಂಧಿ ಹಾಗೂ ಕಾಂಗ್ರೆಸ್‌ನ ನಿರ್ದೇಶನವನ್ನು ಸಾರಾಸಗಟಾಗಿ ಉಲ್ಲಂಘಿಸಿದ್ದರು. ಎರಡನೆಯದಾಗಿ, ಒಂದು ವರ್ಷದ ಕಠಿಣ ಶಿಕ್ಷೆ ಮುಗಿಸಿ 1922ರ ಜುಲೈ12ರಂದು ಜೈಲಿನಿಂದ ಬಿಡುಗಡೆಯಾದಾಗ ಅವರಿಗೆ ಅವರ ಹಳೆಯ ಅಂಗಿ ಮತ್ತು ಕೋಟು ತೊಡಲಾಗದಷ್ಟು ಬಿಗಿಯಾಗಿತ್ತು. ಅವರ ತೂಕದಲ್ಲಿ 25 ಪೌಂಡ್ (11+ ಕಿಲೋ ಗ್ರಾಂ) ಹೆಚ್ಚಳವಾಗಿತ್ತು. ಬ್ರಿಟಿಷರ ಜೈಲಿನಲ್ಲಿದ್ದ ಸ್ವಾತಂತ್ರ ಹೋರಾಟಗಾರರಲ್ಲಿ ಒಬ್ಬ ರಾಜಕೀಯ ಕೈದಿ 11ಕಿ.ಗ್ರಾಂಗಳಿಗಿಂತಲೂ ಹೆಚ್ಚು ತೂಕ ಹೆಚ್ಚಳ ಮಾಡಿಕೊಂಡಿದ್ದು ಜೈಲಿಗೆ ಹೋದ ಸ್ವಾತಂತ್ರ ಹೋರಾಟಗಾರರ ಇತಿಹಾಸದಲ್ಲಿ ಅದೇ ಮೊದಲು ಮತ್ತು ಅದೇ ಕೊನೆ ಬಾರಿ. ಇದು ಹೇಗೆ ಸಾಧ್ಯವಾಯಿತು ಎಂದರೆ? ಕ್ರೂರ ಬ್ರಿಟಿಷ್ ಜೈಲು ಅಧಿಕಾರಿ ಸರ್ ಜಾಥರ್ ಜತೆ ಹೆಡಗೇವಾರ್ ತುಂಬಾ ಗೆಳೆತನ ಹೊಂದಿದ್ದರು ಎನ್ನುತ್ತದೆ ಈ ಎಲ್ಲ ವಿವರಗಳಿರುವ ಹಾಗೂ ಎಚ್. ವಿ. ಶೇಷಾದ್ರಿ, ಬರೆದಿರುವ, ಆರೆಸ್ಸೆಸ್ ಇಂಗ್ಲಿಷ್‌ನಲ್ಲಿ (1981)ರಲ್ಲಿ ಪ್ರಕಟಿಸಿರುವ ಹೆಡಗೇವಾರ್‌ರ ಜೀವನಚರಿತ್ರೆ.

‘‘ಉಪ್ಪಿನ ಸತ್ಯಾಗ್ರಹದಲ್ಲಿ ಸಂಘವು ಭಾಗವಹಿಸ ಕೂಡದು’’ ಎಂದು ಹೆಡಗೇವಾರ್ ಆಜ್ಞೆ ಮಾಡಿದ್ದರು, ಎನ್ನುತ್ತದೆ ಸಿ.ಪಿ. ಭಿಶಿಕರ್ ಬರೆದ ಹಾಗೂ ಆರೆಸ್ಸೆಸ್ ಪ್ರಕಟಿಸಿದ ಹೆಡಗೇವಾರ್‌ರ ಹಿಂದಿ ಜೀವನ ಚರಿತ್ರೆ. ಆದರೂ ಅವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕೆ ಕಾರಣ ಬೇರೆ ಇತ್ತು: ಜೈಲಿನಲ್ಲಿ ಕಾಂಗ್ರೆಸಿಗರ ಮನ ಒಲಿಸಿ ಸಂಘದ ಪರವಾಗಿ ಅವರು ಕೆಲಸ ಮಾಡುವಂತೆ ಪ್ರಯತ್ನಿಸುವುದು.
 

ಹಾಗೆಯೇ ಆರೆಸ್ಸೆಸ್ ಸ್ವಾತಂತ್ರ ಚಳವಳಿಯಿಂದ ದೂರ ಉಳಿದಿತ್ತು ಎಂಬುದು ಕೂಡ ಗೋಳ್ವಾಲ್ಕರ್‌ರವರ ಬರವಣಿಗೆಗಳಿಂದ ಸ್ಪಷ್ಟವಾಗುತ್ತದೆ. (ಶ್ರೀ ಗುರೂಜಿ ಸಮಗ್ರ ದರ್ಶನ್, ಸಂಪುಟ 4, ಆರೆಸ್ಸೆಸ್‌ನಿಂದ ಪ್ರಕಟಿತ)

ಸಾವರ್ಕರ್‌ರವರ ಹಿಂದಿ ಸಂಗ್ರಹ ಲೇಖನಗಳ (1963) ಪ್ರಕಾರ, 1942ರಲ್ಲಿ ತ್ರಿವರ್ಣ ಧ್ವಜ ಹಿಡಿದುಕೊಂಡ ದೇಶಭಕ್ತ ಭಾರತೀಯರ ಮೇಲೆ ಬ್ರಿಟಿಷರು ಗುಂಡು ಹಾರಿಸುತ್ತಿದ್ದಾಗ ಬಂಗಾಲ ಮತ್ತು ಸಿಂಧ್‌ನಲ್ಲಿ ಮುಸ್ಲಿಂ ಲೀಗ್ ಜತೆ ಸೇರಿ ವಿಡಿ ಸಾವರ್ಕರ್ ಸಮ್ಮಿಶ್ರ ಸರಕಾರ ನಡೆಸುವ ಹಂತಕ್ಕೂ ಹೋಗಿದ್ದರು.
ಸ್ವಾತಂತ್ರ ಹೋರಾಟದಲ್ಲಿ ಆರೆಸ್ಸೆಸ್‌ನ ಪಾತ್ರವನ್ನು ಸೃಷ್ಟಿಸುವುದರಲ್ಲಿ ಬಿಜಿಯಾಗಿರುವ ಹಿಂದುತ್ವ ಬುದ್ಧಿಜೀವಿಗಳು ಸ್ವಾತಂತ್ರ ಪೂರ್ವದ ಆರೆಸ್ಸೆಸ್ ದಾಖಲೆಗಳಿಗೆ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕಾಗಿದೆ.
ಕೃಪೆ: counter currents.org

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...