ಚರಂಡಿ ಕಾಮಗಾರಿ ಮೇಲೆ ನೆಲಕ್ಕುರುಳಿದ 6 ವಿದ್ಯುತ ಕಂಬಗಳು; ಹೆಸ್ಕಾಂ ಇಲಾಖೆಯ ಮುನ್ನೆಚ್ಚರಿಕೆಯಿಂದ ತಪ್ಪಿದ ಭಾರಿ ಅನಾಹುತ.

Source: S O New service | By I.G. Bhatkali | Published on 25th May 2018, 12:47 PM | Coastal News |

ಭಟ್ಕಳ: ಗುರುವಾರದಂದು ಸಂಜೆ ಇಲ್ಲಿನ ಪುರಸಭೆ ವ್ಯಾಪ್ತಿಯ ಮಣ್ಕುಳಿಯ ರೈಲ್ವೆ ನಿಲ್ದಾಣಕ್ಕೆ ತೆರಳುವ ಮಾರ್ಗದಲ್ಲಿ ಹಿಟಾಚಿ ಮೂಲಕ ಚರಂಡಿ ಕಾಮಗಾರಿ ವೇಳೆ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ 6 ವಿದ್ಯುತ್ ಕಂಬ ನೆಲಕ್ಕುಳಿದ್ದು, ಆಗಬಹುದಾದ ಭಾರಿ ಅನಾಹುತವೂ ಸ್ವಲ್ಪದರಲ್ಲೇ ತಪ್ಪಿದೆ.

ಕಳೆದ 15 ದಿನದಿಂದ ಇಲ್ಲಿನ ಮಣ್ಕುಳಿಯ ಪುಷ್ಪಾಂಜಲಿ ಟಾಕೀಸ್ ಹಿಂಬದಿಯಿಂದ 500ಮೀ.ದೂರದವರೆಗೆ ಮುಖ್ಯಮಂತ್ರಿ ನಿಧಿಯಿಂದ ನಗರೋತ್ಥಾನ ಯೋಜನೆಯಲ್ಲಿ 25 ಲಕ್ಷ ರೂ. ಅನುದಾನದಲ್ಲಿ ಚರಂಡಿ ಕಾಮಗಾರಿಯೂ ನಡೆಯುತ್ತಿದ್ದು, ಕಾಮಗಾರಿಯಲ್ಲಿ ಹಿಟಾಚಿಯ ಮೂಲಕ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಕಂಬದ ಸಮೀಪ ಮಣ್ಣು ತೆಗೆದಿದ್ದಾರೆ. ಚರಂಡಿ ಅಗಲೀಕರಣ ಮಾಡುತ್ತಿದ್ದಾಗ ಮಣ್ಣು ಸಡಿಲವಾದ ಕಾರಣ ಹತ್ತಿರದ ಒಂದು ವಿದ್ಯುತ ಕಂಬ ನೆಲಕ್ಕುರುಳುದರೊಂದಿಗೆ ಮುಂದಿನ 5 ವಿದ್ಯುತ್ ಕಂಬವೂ ಸಹ ನೆಲಕ್ಕುರುಳಿವೆ. ಈ ಸಂಧರ್ಬದಲ್ಲಿ ಸ್ಥಳದಲ್ಲಿ ಚರಂಡಿ ಕಾಮಗಾರಿ ನಡೆಸುತ್ತಿದ್ದ ಹಿಟಾಚಿ ಚಾಲಕ ಓರ್ವನಿದ್ದು, ಹಿಟಾಚಿ ತಪ್ಪಿ ವಿದ್ಯುತ ಕಂಬ ಬಿದ್ದ ಪರಿಣಾಮ ಭಾರಿ ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಹಾಗೂ ಒಂದು ವಿದ್ಯುತ್ ಕಂಬ ಇಲ್ಲಿನ ಸ್ಥಳಿಯರ ಮನೆಯೊಂದರ ಎದುರಿಗೆ ಒರಗಿದ್ದು, ವಿದ್ಯುತ್ ಕಂಬ ಬಿದ್ದಾಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತವಾಯಿತು. ತಕ್ಷಣಕ್ಕೆ ಸ್ಥಳಿಯರು ಹೆಸ್ಕಾಂ ಇಲಾಕೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ತಿಳಿಸಿದಾಗ ವಿದ್ಯುತ್ ಸಂಪರ್ಕವನ್ನು ಸಂಪುರ್ಣವಾಗಿ ಸ್ಥಗಿತಗೊಳಿಸಲಾಯಿತು. 

ಕಳೆದ 15-20 ದಿನಗಳಿಂದ ನಡೆಯುತ್ತಿರುವ ಕಾಮಗಾರಿಯಿಂದ ಸ್ಥಳಿಯರಿಗೆ ಹಾಗೂ ಮನೆಗೊಳಗೆ ವಾಹನ ಸಾಗಿಸಲಾಗದೇ ಮನೆಯ ಹೊರಗೆ ವಾಹನ ನಿಲ್ಲಿಸುವ ಪ್ರಸಂಗ ಎದುರಾಗಿದ್ದು, ಅವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಸ್ಥಳಿಯರು ದೂರಿದ್ದಾರೆ. 

ಘಟನೆಯ ಬಳಿಕ ಸ್ಥಳಕ್ಕಾಗಮಿಸಿದ ಹೆಸ್ಕಾಂ ಇಲಾಖೆ ಸೆಕ್ಷನ್ ಆಫೀಸರ್ ಶ್ರೀಕಾಂತ್, ಪುರಸಭೆ ಇಂಜಿನಿಯರ ಪರಿಶೀಲನೆ ನಡೆಸಿದರು. ಘಟನೆಯಲ್ಲಿ ಎರಡು ವಿದ್ಯುತ ಕಂಬ ನೆಲಕ್ಕುರುಳಿದ ಪರಿಣಾಮ ತುಂಡಾಗಿದೆ. ಹಾಗೂ ಇಲ್ಲಿನ ಸ್ಥಳಿಯರ ಮನೆಯ ಸರ್ವಿಸ ಲೈನ್ ಮತ್ತು ರೈಲ್ವೆ ನಿಲ್ದಾಣದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 
ಈ ಬಗ್ಗೆ ನಮ್ಮ ವಾಹಿನಿಯ ಜೊತೆಗೆ ಮಾತನಾಡಿದ ಹೆಸ್ಕಾಂ ಇಲಾಖೆ ಸೆಕ್ಷನ್ ಆಫೀಸರ್ ಶ್ರೀಕಾಂತ್ ‘ಘಟನೆಯೂ ಕಾಮಗಾರಿಯ ಗುತ್ತಿಗೆದಾರರ ನಿರ್ಲಕ್ಷದಿಂದ ನಡೆದಿದ್ದು, ಮನೆಗಳಿಗೆ ಹಾಗೂ ಭಟ್ಕಳ ರೈಲ್ವೆ ನಿಲ್ದಾಣಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಲಾಖೆಯ ದಂಡ ಸಹಿತ ಒಟ್ಟು 50 ಸಾವಿರ ರೂ. ಘಟನೆಯಿಂದ ಹಾನಿಯುಂಟಾಗಿದ್ದು, ವಿದ್ಯುತ್ ಸಂಪರ್ಕವನ್ನು ಶುಕ್ರವಾರದ ಸಂಜೆಯೊಳಗಾಗಿ ಸರಿಪಡಿಸುವುದಾಗಿ ತಿಳಿಸಿದ್ದಾರೆ.  

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...