ಗೋಕರ್ಣದ ಪತ್ರಕರ್ತ ಶ್ರೀಧರ ಅಡಿಗೆ ಶ್ಯಾಮರಾವ್ ಪ್ರಶಸ್ತಿ ಗವಾಯಿ, ಪಾಂಡುರಂಗಗೆ ಅಜ್ಜೀಬಳ ಪ್ರಶಸ್ತಿ ನೀಡಲು ನಿರ್ಧಾರ

Source: sonews | By sub editor | Published on 30th June 2018, 12:26 AM | Coastal News | State News | Don't Miss |

ಶಿರಸಿ; ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಈ ಬಾರಿಯ ಶ್ಯಾಮರಾವ್ ಪ್ರಶಸ್ತಿಯನ್ನು ಗೋಕರ್ಣದ ಹಿರಿಯ ಪತ್ರಕರ್ತ ಶ್ರೀಧರ ಅಡಿಗೆ ಹಾಗೂ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿಯನ್ನು ಭಟ್ಕಳದ ಪತ್ರಕರ್ತ ಇನಾಯತ್ ಗವಾಯಿ,ಜೊಯಿಡಾದ ಪತ್ರಕರ್ತ ಪಾಂಡುರಂಗ ಪಾಟೀಲರಿಗೆ ನೀಡಲು ನಿರ್ಧರಿಸಿದೆ.

ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ಟ ಬಕ್ಕಳ ಅಧ್ಯಕ್ಷತೆಯಲ್ಲಿ ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧರಿಸಲಾಯಿತು.

ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ,ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಗೋಕರ್ಣದಲ್ಲಿ ಜು.15ರಂದು ನಡೆಸಲು ನಿರ್ಣಯಿಸಲಾಯಿತು. ಎಲ್ಲ ತಾಲೂಕಾ ಸಂಘಗಳು ಜುಲೈ ತಿಂಗಳಲ್ಲಿ ಪತ್ರಿಕಾ ದಿನಾಚರಣೆ ನಡೆಸಲು ಸೂಚನೆ ನೀಡಲಾಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ ಶೆಟ್ಟಿ, ಖಜಾಂಚಿ ಸಂಧ್ಯಾ ಹೆಗಡೆ, ರಾಜ್ಯ ಸಮಿತಿ ಸzಸ್ಯ ರಾಧಾಕೃಷ್ಣ ಭಟ್ಟ, ಕಾರ್ಯದರ್ಶಿಗಳಾದ  ಅನಂತ ದೇಸಾಯಿ,ಸುಮಂಗಲಾ ಹೊನ್ನೆಕೊಪ್ಪ, ರಾಘವೇಂದ್ರ ಹೆಬ್ಬಾರ, ಜಿಲ್ಲಾ ಸಮಿತಿ ಸದಸ್ಯರಾದ  ಕೃಷ್ಣಮೂರ್ತಿ ಹೆಬ್ಬಾರ, ಬಸವರಾಜ ಪಾಟೀಲ,ರಾಘವೇಂದ್ರ ಬೆಟ್ಟಕೊಪ್ಪ, ಗುರು ಅಡಿ, ಮಂಜುನಾಥ ಸಾಯಿಮನೆ,ಮುಂಡಗೋಡದ ತಾ.ಅಧ್ಯಕ್ಷ ನಜೀರ ತಾಡಪತ್ರಿ, ಸದಸ್ಯರಾದ ಫಯಾಜ ಮುಲ್ಲಾ, ಎಂ.ಜಿ.ಉಪಾಧ್ಯ, ರವಿ ಸೂರಿ,ಗಜಾನನ ನಾಯ್ಕ,ಇತರರು ಸಭೆಯಲ್ಲಿದ್ದರು.

ಪ್ರಶಸ್ತಿ ಪುರಸ್ಕೃತರ ಪರಿಚಯ:

ಹೆಸರು:ಶ್ರೀಧರ ಅಡಿ ತಂದೆ ಕೃಷ್ಣ ಅಡಿ ಗೋಕರ್ಣ
ಪತ್ರಿಕೆಗಳು:
* 1984ರಿಂದ ಗೋಕರ್ಣದಲ್ಲಿ ಪತ್ರಿಕಾ ವರದಿಗಾರರಾಗಿ ಕಾರ್ಯ.
* 1984-87 ಮುಂಗಾರು-1987ರಿಂದ2012(25 ವರ್ಷ)ಸಂಯುಕ್ತ ಕರ್ನಾಟಕ,
* 2012ರಿಂದ ವಿಜಯವಾಣಿ ಪತ್ರಿಕೆಯಲ್ಲಿ ಕಾರ್ಯ.
* ಸ್ಥಳೀಯ ರಾಷ್ಟ್ರೋತ್ಥಾನ ಬಳಗ,ಮಹಾಬಲೇಶ್ವರ ಅರ್ಬನ್ ಬ್ಯಾಂಕ್ ಆಡಳಿತ ಮಂಡಳಿ,ರೋಟರಿ ಕ್ಲಬ್ ಮುಂತಾದೆಡೆ ಕಾರ್ಯ ನಿರ್ವಹಣೆ.
ವಿದ್ಯಾಭ್ಯಾಸ : ಬಿಕಾಂ.


ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿ

ಇನಾಯತುಲ್ಲಾ ಗವಾಯಿ
ಭಟ್ಕಳ: ಸಾಹಿಲ್ ಆನ್‍ಲೈನ್ ಜಾಲಾತಾಣ ಪ್ರಧಾನ ಸಂಪಾದಕ ಇನಾಯತುಲ್ಲಾ ಗವಾಯಿ ಅವರಿಗೆ ಅಜ್ಜಿಬಳ ಪ್ರಶಸ್ತಿ.

ಭಟ್ಕಳದಲ್ಲಿ ಪ್ರಥಮವಾಗಿ ಸ್ಥಾಪನೆಯಾದ ಉರ್ದು, ಇಂಗ್ಲೀಷ್ ಹಾಗೂ ಕನ್ನಡ ಪತ್ರಿಕೆ ಸಂಪಾದಕ ಇನಾಯತ್ ಗವಾಯಿ ಅವರಿಗೆ ಈ ವರ್ಷದ ಪ್ರತಿಷ್ಟಿತ ಅಜ್ಜಿಬಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 
ಇನಾಯತುಲ್ಲಾ ಗವಾಯಿ ಅವರು ತಮ್ಮ 15ನೇ ವಯಸ್ಸಿನಲ್ಲಿಯೇ ಪತ್ರಿಕಾ ರಂಗಕ್ಕೆ ಧುಮುಕಿದ್ದು ಮುಂಬೈಯಲ್ಲಿನ ಉರ್ದು ಪತ್ರಿಕೆ ವರದಿಗಾರಿಕೆಯಿಂದ ಆರಂಭವಾದ ಇವರ ವೃತ್ತಿ ಜೀವನ, ಭಟ್ಕಳದಲ್ಲಿ ಪ್ರಥಮ ಆನ್‍ಲೈನ್ ಪತ್ರಿಕೆಯನ್ನು ಸ್ಥಾಪಿಸುವ ಮೂಲಕ ಮುಂದುವರಿಯಿತು. ಇವರ ಆನ್‍ಲೈನ್  ಪತ್ರಿಕೆಗೆ ಪ್ರಪಂಚದಾದ್ಯಂತ ಓದುಗರಿದ್ದು ಉತ್ತಮ ವರದಿಗಾರಿಕೆ, ಲೇಖನಗಳಿಂದ ಜನಪ್ರಿಯವಾಗಿದೆ. 

ಕಳೆದ ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲದಿಂದ ವರದಿಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಇವರು ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಅಜ್ಜಿಬಳ ಪ್ರಶಸ್ತಿಯನ್ನು ಗಳಿಸುತ್ತಿರುವ ಭಟ್ಕಳದ ಪ್ರಥಮ ವ್ಯಕ್ತಿ ಇನಾಂiÀiತ್ ಗವಾಯಿ ಆಗಿದ್ದಾರೆ. 


ಪಾಂಡುರಂಗ ದಾಮೋಧರ ಪಟಗಾರ. 
ಸಂಯುಕ್ತ- ಉದಯವಾಣಿ ಪತ್ರಕರ್ತರು ಜೋಯಿಡಾ.

ವೈಯಕ್ತಿಕ ಮಾಹಿತಿ :
ಹೆಸರು   : ಶ್ರೀ ಪಾಂಡುರಂಗ ದಾಮೋಧರ ಪಟಗಾರ.
ವಿಳಾಸ    : ಮು:-ಟೌನ್‍ಶಿಪ್ ಜೋಯಿಡಾ,   ಪೋ:ತಾ:- ಜೋಯಿಡಾ, ಉತ್ತರ ಕನ್ನಡ.
(ಹುಟ್ಟುರು ಕುಮಟಾ ತಾಲೂಕಿನ ಐಗಳಕೂರ್ವೆ ಗ್ರಾಮ.)
ವಿದ್ಯಾರ್ಹತೆ : ಎಮ್.ಎ. - ಬಿ.ಪಿ.ಇಡಿ.
ವೃತ್ತಿ :  ದೈಹಿಕ ಶಿಕ್ಷಣ ಶಿಕ್ಷಕರು,  ಬಿ.ಜಿ.ವಿ.ಎಸ್.ಪದವಿ ಪೂರ್ವ ಕಾಲೇಜ ಜೋಯಿಡಾ.
ಹವ್ಯಾಸ  :  ವರದಿಗಾರಿಕೆ, ವಿವಿದ ಕಾರ್ಯಕ್ರಮ ಸಂಘಟನೆ, ನಿರೂಪಣೆ. ಸಮಾಜ ಸೇವೆ. 
ಸಾಹಿತ್ಯ ಓದು ಬರಹ ಆಸಕ್ತಿ.
ಪತ್ರಿಕಾ ರಂಗದಲ್ಲಿ ಸೇವೆ:- 1997 ರಿಂದ ಇಲ್ಲಿಯ ತನಕ ನಿರಂತರವಾಗಿ ಜೋಯಿಡಾ ತಾಲೂಕಾ   ಪತ್ರಕರ್ತನಾಗಿ 21 ವರ್ಷಗಳ ಸೇವೆ. ಕಳೆದ 14 ವರ್ಷದಿಂದ ಸಂಯುಕ್ತ  ಕರ್ನಾಟಕ ಹಾಗೂ ಉದಯವಾಣಿ ವರದಿಗಾರ

Read These Next

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...

ಅಜರ್‍ಬೈಜಾನ್ ಜೊತೆಗಿನ ದ್ವಿಪಕ್ಷೀಯ ಸಂಬಂಧವನ್ನು ಭಾರತ ಗೌರವಿಸುತ್ತದೆ - ಮುನಿಯಪ್ಪ

ಕೋಲಾರ:  ಭಾರತ ಮತ್ತು ಅಜರ್‍ಬೈಜಾನ್ ನಮ್ಮ ಐತಿಹಾಸಿಕ ಸಂಬಂಧಗಳು ಮತ್ತು ಹಂಚಿಕೆ ಸಂಪ್ರದಾಯಗಳ ಆಧಾರದ ಮೇಲೆ ನಿಕಟ ಮತ್ತು ಸೌಹಾರ್ದಯುತ ...

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...