ಶಿರಸಿ:ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ತಾಲೂಕಾಧ್ಯಕ್ಷರು, ಮಹಿಳಾ ತಾಲೂಕಾಧ್ಯಕ್ಷರ ಆಯ್ಕೆ

Source: manju | By Arshad Koppa | Published on 25th September 2016, 8:50 PM | Coastal News |

ಶಿರಸಿ, ಸೆ ೨೪: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಶಿರಸಿ ತಾಲೂಕಿನಲ್ಲಿ ನೂತನವಾಗಿ ತಾಲೂಕಾಧ್ಯಕ್ಷರು ಹಾಗೂ ಮಹಿಳಾ ತಾಲೂಕಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶಿರಸಿಯ ಪರ್ತಕರ್ತರ ಭವನದಲ್ಲಿ ಶನಿವಾರದಂದು ನಡೆಯಿತು. 
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ "ಸ್ವಾಭಿಮಾನಿ ಬಣ" ಉತ್ತರಕನ್ನಡ ಜಿಲ್ಲಾ ಶಿರಸಿ ತಾಲೂಕಾ ಘಟಕದ ತಾಲೂಕಾ ಅಧ್ಯಕ್ಷರಾಗಿ ವಿಶ್ವನಾಥ್ ಶೀಗೆಹಳ್ಳಿ (ಶಿರಸಿ), ಕಾರ್ಯದರ್ಶಿಯಾಗಿ ಉಮೇಶ ನಾರಾಯಣ ಹರಿಕಾಂತ (ಶಿರಸಿ) ಹಾಗೂ ಮಹಿಳಾ ಅಧ್ಯಕ್ಷರಾಗಿ ಲಕ್ಶ್ಮೀ ವೆಂಕಟೇಶ್ ನಾಯ್ಕ (ಶಿರಸಿ) ಹಾಗೂ ಮಹಿಳಾ ಕಾರ್ಯದರ್ಶಿಯಾಗಿ ಶ್ರೀಕಲಾ ರಾಮ ನಾಯ್ಕ (ಶಿರಸಿ) ಆಯ್ಕೆ ಮಾಡಲಾಗಿದೆ. ನೂತನವಾಗಿ ಆಯ್ಕೆಯಾದ ವಿವಿಧ ವಿಭಾಗದ ಅಧ್ಯಕ್ಷರುಗಳಿಗೆ ಸಂಘಟನೆಯಿಂದ ಶಾಲು, ಹಾರ ಹಾಗೂ ನೇಮಕಾತಿ ಪತ್ರವನ್ನು ವಿತರಿಸಲಾಯಿತು. 


ನೂತನ ತಾಲೂಕಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಉತ್ತರ ಕನ್ನಡ ಜಿಲ್ಲಾಧ್ಯಕ್ಷರಾದ ಹೆಚ್.ಆರ್.ಗಣೇಶ್ “ ಈಗಾಗಲೇ ನಮ್ಮ ಸಂಘಟನೆಯ ಶಕ್ತಿ ಎಲ್ಲಾ ತಾಲೂಕು ಘಟಕಗಳ ಮೂಲಕ ಪಸರಿಸುತ್ತಿದ್ದು, ಇನ್ನು ಮುಂದೆಯೂ ಸಹ ಸಂಘಟನೆಯ ಮೂಲಕ ಸಮಾಜದ ಕಾರ್ಯ ಮಾಡುವವರಿದ್ದೇವೆ. ಸಮಾಜದಲ್ಲಿನ ಜನರಿಗೆ ಸಂವಿಧಾನದಲ್ಲಿನ ಶಾಸಕಾಂಗ, ನ್ಯಾಯಾಂಗ ಹಾಗೂ ಕಾರ್ಯಾಂಗದಲ್ಲಿ ನ್ಯಾಯ ಸಿಗದಿದ್ದರೆ ಸಂಘಟನೆಯ ಮೂಲಕ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡುತ್ತೇವೆ.” ಎಂದರು.


ಸಂಘಟನೆಯ ಮಹತ್ವತೆ ಹಾಗೂ ಕಾರ್ಯದ ಬಗ್ಗೆ ಇದೇ ಸಂಧರ್ಭದಲ್ಲಿ ವಿವರಿಸಿದರು. 


ಈ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಸಂಜು ಲಂಬಾಣಿ, ಜಿಲ್ಲಾ ಮಹಿಳಾ ಅಧ್ಯಕ್ಷರು ಶೋಭಾ ಆರ್ ನಾಯ್ಕ, ಭಟ್ಕಳ ತಾಲೂಕಾ ಅಧ್ಯಕ್ಷರು ಈಶ್ವರ್ ನಾಯ್ಕ ಬೈಲೂರು, ಪ್ರಧಾನ ಕಾರ್ಯದರ್ಶಿ ಪ್ರವೀಣ ನಾಯ್ಕ, ಮುಂಡಗೋಡ ತಾಲೂಕಾ ಅಧ್ಯಕ್ಷರು ಮಂಜು ಕೆ.ಲಂಬಾಣಿ, ಪ್ರಧಾನ ಕಾರ್ಯದರ್ಶಿ ಸುರೇಶ ಲಂಬಾಣಿ ಹಾಗೂ ಇನ್ನುಳಿದ ತಾಲೂಕಾ ಘಟಕದ ಅಧ್ಯಕ್ಷರು ಪದಾದಿಕಾರಿಗಳು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು. 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...