ಎಸ್.ಐ.ಓ ದಿಂದ ‘ಅರಿವಿನ ನಾಳೆಗಾಗಿ’ ಜಾಥಾ

Source: sonews | By sub editor | Published on 10th October 2018, 11:37 PM | Coastal News | Don't Miss |

ಮಂಗಳೂರು: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಇದರ ಕರ್ನಾಟಕ ಘಟಕದ ವತಿಯಿಂದ ‘ಅರಿವಿನ ನಾಳೆಗಾಗಿ’ ದಕ್ಷಿಣ ಕರ್ನಾಟಕ ಕಾರವಾನ (ಜಾಥಾ) ಕಾರ್ಯಕ್ರಮವು ಬುಧವಾರ ನಗರದಲ್ಲಿ ಜರುಗಿತು.

ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ದ.ಕ.ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆದ ರ್ಯಾಲಿಯನ್ನು ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯಾಧ್ಯಕ್ಷ ಅತಾರುಲ್ಲಾ ಶರೀಫ್ ಉದ್ಘಾಟಿಸಿದರು.

ಬಳಿಕ ಜಿಲ್ಲಾಧಿಕಾರಿ ಕಚೇರಿಯ ಬಳಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅರಿವನ್ನು ಗಳಿಸಲು ಅಜ್ಞಾನವನ್ನು ಎದುರಿಸಬೇಕಾಗುತ್ತದೆ.ಈ ನಿಟ್ಟಿನಲ್ಲಿ ಎಸ್‌ಐಒ ‘ಅರಿವಿನ ನಾಳೆಗಾಗಿ’ ಎಂಬ ಧ್ಯೇಯವಿಟ್ಟುಕೊಂಡು ಹಮ್ಮಿಕೊಂಡ ಕಾರವಾನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಸಮಾಜದಲ್ಲಿ ಒಂದು ಗುಂಪು ಕೆಡುಕನ್ನು ಪಸರಿಸುತ್ತ ಮುಂದುವರಿಯುತ್ತದೆ, ಇನ್ನೊಂದು ಗುಂಪು ಸುಮ್ಮನೆ ನಿಂತು ವೀಕ್ಷಿಸುತ್ತದೆ. ಆದರೆ ಮೂರನ್ನೇ ಗುಂಪು ತಮ್ಮ ಒಳಿತಿನಿಂದ ಕೆಡಕನ್ನು ತಡೆಯಲು ನಿರಂತರ ಪ್ರಯತ್ನದಲ್ಲಿ ತೊಡಗುತ್ತದೆ. ಒಳಿತನ್ನು ಪಸರಿಸುವ ಕೆಡುಕನ್ನು ತಡೆಯುವವರು ನಾವಾಗಬೇಕು ಎಂದು ಅತಾರುಲ್ಲಾ ಶರೀಫ್ ಅಭಿಪ್ರಾಯಪಟ್ಟರು.

ಎಸ್‌ಐಒ ರಾಷ್ಟ್ರೀಯ ಕಾರ್ಯದರ್ಶಿ ಸೈಯದ್ ಅಝರುದ್ದೀನ್ ಮಾತನಾಡಿ, ಮುಸ್ಲಿಮರು ಈ ದೇಶಕ್ಕೆ ಬಹಳಷ್ಟು ಕೊಡುಗೆ ನೀಡಿದ್ದಾರೆ. ಈ ಮಧ್ಯೆ ಭಾರತದಲ್ಲಿ ಸಮುದಾಯದ ಮೇಲೆ ಶೋಷಣೆ ಮೀತಿ ಮೀರಿದೆ. ಈ ಕೊಡುಗೆಗಳನ್ನು ದೇಶದ ನಾಗರಿಕರಿಗೆ ನೆನಪಿಸುತ್ತಾ ಇನ್ನಷ್ಟು ಕೊಡುಗೆಗಳನ್ನು ನೀಡಬೇಕಾಗಿದೆ ಎಂದರು.

ಸಮಾರೋಪ ಭಾಷಣ ಮಾಡಿದ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಅವಿವೇಕ ಬಹುತೇಕ ರಂಗದ ಬಂಡವಾಳವಾಗಿದೆ. ವಿವೇಕದ ಪಾಠ ಕಲಿಸಿ ಕೊಡುವ ಕೆಲಸವಾಗಬೇಕಿದೆ.ಅದರೊಂದಿಗೆ ವಿವೇಕವನ್ನು ಬೆಳೆಸುವ ಅಗತ್ಯವಿದೆ ಎಂದು ತಿಳಿಸಿದರು.

ಇಂದು ಸಮಾಜ ಭ್ರಮೆಗಳ ಸುತ್ತ ಸುತ್ತುತ್ತಿದೆ. ನಾವು ಭರವಸೆಯ ದಿನಗಳ ಕನಸು ಕಾಣುವವರಾಗಬೇಕು. ಸಮಾಜದ ಉನ್ನತಿಗೆ ಶ್ರಮಿಸಬೇಕೆಂದ ಮುಹಮ್ಮದ್ ಕುಂಞಿ, ಮೌಲ್ಯವಿಲ್ಲದ ಸಮುದಾಯಕ್ಕೆ ಯಾವುದೇ ಬೆಲೆಯಿಲ್ಲ. ಈ ಸಮಾಜದಲ್ಲಿ ಧಾರ್ಮಿಕ ಚಿಂತನೆಗಳನ್ನು ವ್ಯಾಪಕಗೊಳಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂವೇದನಾ ಉಡುಪಿಯ ಕಾರ್ಯಕರ್ತರು ಇಮ್ತಿಯಾಝ್ ಬೇಗ್ ನೇತೃತ್ವದಲ್ಲಿ ಬೀದಿ ನಾಟಕ ಪ್ರದರ್ಶಿಸಿದರು. ವೇದಿಕೆಯಲ್ಲಿ ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ಕೆ.ಅಶ್ರಫ್, ದ.ಕ.ಜಿಲ್ಲಾಧ್ಯಕ್ಷ ಅಮೀನ್ ಅಹ್ಸನ್, ಎಸ್‌ಐಒ ರಾಜ್ಯ ಸಲಹಾ ಸಮಿತಿ ಸದಸ್ಯ ಯಾಸೀನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು.

ರ್ಯಾಲಿಯ ಮೇಲ್ವಿಚಾರಕ ಸೈಯದ್ ಝಾಹಿದ್ ಪ್ರಾಸ್ತಾವಿಸಿದರು. ಡ್ಯಾನಿಶ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read These Next

ದಸರಾ ಉತ್ಸವವನ್ನು ವಿಶಿಷ್ಠವಾಗಿ ಸಂಘಟಿಸುತ್ತಿರುವ ಯುವ ಸಂಘಟಕರ ಕಾರ್ಯ ಶ್ಲಾಘನೀಯ:ಡಾ,ಆರ್. ನರಸಿಂಹ ಮೂರ್ತಿ

ಭಟ್ಕಳ:ಶಿರಾಲಿಯ ಸಾಲೆಮನೆಯ ಮಠದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಅತ್ಯಂತ ವಿಶಿಷ್ಟವಾದುದು. ...

'ಪಾಳು ಬಿದ್ದಿದೆ ಮಹಿಳಾ ಮೀನು ವ್ಯಾಪಾರಿಗಳಿಗೆ ಹಸ್ತಾಂತರಗೊಳ್ಳಬೇಕಾದ ಸುಸಜ್ಜಿತ ಮೀನು ಮಾರುಕಟ್ಟೆ'

ಭಟ್ಕಳ: ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿನ ಸಂತೆ ಮಾರುಕಟ್ಟೆಯ ಆವರಣದೊಳಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನದಡಿಯಲ್ಲಿ 1.30 ...

'ಭಟ್ಕಳ ಬೈಲೂರಿನಲ್ಲಿ ನಿಶ್ಚಯವಾದ ಬಾಲ್ಯ ವಿವಾಹವನ್ನು ತಡೆದ ಇಲಾಖೆ ಅಧಿಕಾರಿಗಳು'

ಭಟ್ಕಳ: ಇಲ್ಲಿನ ಬೈಲೂರಿನ ಗುಡಿಗಾರಬೋಲೆಯ ಸಮೀಪ 17 ವರ್ಷದ 1 ತಿಂಗಳ ಮುಸ್ಲಿಂ ಹುಡುಗಿಗೆ ಅದೇ ಊರಿನ 24 ವರ್ಷದ ಯುವಕನೊಂದಿಗೆ ಬಾಲ್ಯ ವಿವಾಹ ...

'ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಾಣಕ್ಕೆ ನಾಗರಿಕ ವೇದಿಕೆ ಆಗ್ರಹ'

ಭಟ್ಕಳ: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ನಿಲ್ದಾಣದಿಂದ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ಆಗುವ ತೊಂದರೆ ಹಾಗೂ ಅವ್ಯವಸ್ಥೆಯನ್ನು ...

'ಪಂಚಾಯತ ವ್ಯಾಪ್ತಿಯ ಅನಧೀಕೃತ ಕಟ್ಟಡದ ಶೀಘ್ರ ತೆರವು ಕ್ರಮಕ್ಕೆ ಅಧಿಕಾರಿಗಳಿಗೆ ಸದಸ್ಯರ ತಾಕೀತು'

ಭಟ್ಕಳ: ಇಲ್ಲಿನ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸೈಯದ್ ಅದಮ್ ಪಣಂಬೂರ ಅವರ ಅಧ್ಯಕ್ಷತೆಯಲ್ಲಿ ಮೊದಲ ಹಂತದ ಸಾಮಾನ್ಯ ಸಭೆಯೂ ಪಂಚಾಯತ ...