ಸಿದ್ದಗಂಗಾ ಶ್ರೀಗಳ ನಿಧನ: ಜಮಾಅತೆ ಇಸ್ಲಾಮಿ ಹಿಂದ್ ಸಂತಾಪ

Source: sonews | By Staff Correspondent | Published on 22nd January 2019, 12:21 AM | Coastal News | State News | Don't Miss |

ಮಂಗಳೂರು: ಸಿದ್ದಗಂಗಾ ಶ್ರೀಗಳ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಅತರುಲ್ಲಾ ಷರೀಫ್ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. 

ಸಿದ್ದಗಂಗಾ ಶ್ರೀಗಳು ಓರ್ವ ವ್ಯಕ್ತಿ ಎಂಬುದಕ್ಕಿಂತ ಒಂದು ಶಕ್ತಿಯಾಗಿ ಬದುಕಿದವರು. ಅನೇಕಾರು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸಮಾಜಕ್ಕೆ ಅರ್ಪಿಸಿದವರು. ಧರ್ಮಸ್ಥಳದಲ್ಲಿ ನಡೆದ ಸರ್ವ ಧರ್ಮ ಸಮ್ಮೇಳನದ ಅಧ್ಯಕ್ಷ ಸ್ಥಾನ ವಹಿಸಿಕೊಂಡಿರುವುದೇ ಧಾರ್ಮಿಕ ಸೌಹಾರ್ದತೆಯ ಮೇಲೆ ಅವರಿಗಿದ್ದ ಬದ್ಧತೆಗೆ ಸಾಕ್ಷಿ. ಅವರು ಜಾತಿ ಧರ್ಮದ ಗೋಡೆಯನ್ನು ಮೀರಿ ಬೆಳೆದವರು. ಸಮಾಜವನ್ನು ಜನರ ಒಂದು ಗುಂಪಾಗಿ ಅವರು ನೋಡಿರುವರೇ ಹೊರತು ಹಿಂದೂ ಮುಸ್ಲಿಂ ಆಗಿ ಅಲ್ಲ. ಈ ಗುಣವೇ ಅವರನ್ನು ಅನನ್ಯಗೊಳಿಸಿದೆ.ಅವರ ನಿಧನವು ಈ ಸಮಾಜಕ್ಕೆ ಬಹುದೊಡ್ಡ ನಷ್ಟ. ಅವರು ಪ್ರತಿಪಾದಿಸಿದ ಸೌಹಾರ್ದ ಸಮಾಜ ಕಾರ್ಯರೂಪಕ್ಕೆ ಬರಲಿ ಮತ್ತು ಅವರ ಪರಿವಾರ, ಅಭಿಮಾನಿ ವರ್ಗಕ್ಕೆ ಅವರ ಅನುಪಸ್ಥಿತಿಯನ್ನು ಸಹಿಸುವ ಸಾಮರ್ಥ್ಯವನ್ನು ದೇವನು  ದಯಪಾಲಿಸಲಿ ಎಂದವರು.

ಅವರೊಂದು ಸರ್ಕಾರದಂತೆ ಕಾರ್ಯನಿರ್ವಹಿಸಿದರು. ಅನ್ನದಾನ ಮತ್ತು ವಿದ್ಯಾದಾನದ ಮೂಲಕ ಲಕ್ಷಾಂತರ ಮಂದಿ ಹೊಟ್ಟೆಯ ಹಸಿವು ಮತ್ತು ಮೆದುಳಿನ ಹಸಿವನ್ನು ತಣಿಸಿದರು. ಆದ್ದರಿಂದ ಭಾರತ ಸರಕಾರವು ಅವರಿಗೆ  ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಮುಹಮ್ಮದ್ ಅತರುಲ್ಲಾ ಷರೀಫ್ ವಿನಂತಿಸಿದ್ದಾರೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...