ಮಾನವ ಕುಲಕ್ಕೆ ಒಳಿತಾಗಿರುವ ಮಹನೀಯರನ್ನು ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸಲಾಗುತ್ತಿದೆ- ರಮೇಶ್‍ಕುಮಾರ್

Source: sonews | By Staff Correspondent | Published on 27th June 2018, 8:39 PM | State News | Don't Miss |

ಶ್ರೀನಿವಾಸಪುರ: ಯಾವುದೇ ಜಾತಿ ಮತ ಧರ್ಮಗಳನ್ನು ಎಣಿಸದೇ ಜಗತ್ತಿನ ಮಾನವ ಕುಲಕ್ಕೆ ಒಳಿತಾಗಿರುವ ಮಹನೀಯರನ್ನು ಕೆಲವೇ ಮಂದಿ ಸ್ವಾರ್ಥಕ್ಕೆ ಒಂದು ಜಾತಿಗೆ, ಧರ್ಮಕ್ಕೆ ಸೀಮಿತಗೊಳಿಸುವ ಮೂಲಕ ಅವರನ್ನು ಸಣ್ಣವರನ್ನಾಗಿ ಮಾಡಲಾಗುತ್ತಿದೆ ಎಂದು ವಿಧಾನಸಭಾದ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ರವರು ವಿಷಾದ ವ್ಯಕ್ತಪಡಿಸಿದರು.

ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ  ಹಾಗು ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ದಿ ಸಂಘ ರವರ ಸಹಯೋಗದಲ್ಲಿ ಏರ್ಪಡಿಸಿದ್ದ ನಾಡಪ್ರಭು ಕೆಂಪೇಗೌಡ ರವರ ಜಯಂತಿ ಉದ್ಘಾಟಿಸಿ ಮಾತನಾಡಿ ಇಡೀ ಮಾನವ ಜಾತಿಗೆ ಹಿತ ಬಯಸಿದ ಮಂದಿಯನ್ನು ಜಯಂತಿಗಳಲ್ಲಿ ಸ್ಮರಿಸುವಂತಾದರೂ ಜಯಂತಿಗಳು ನಾಮಕಾವಾಸ್ತೆಯಾಗಿ ನಡೆಯುತ್ತಿವೆ ಎಂದರು. ಎಷ್ಟೋ ಮಂದಿ ಉಟ್ಟುತ್ತಾರೆ ಸಾಯುತ್ತಿರುತ್ತಾರೆ ಆದರೆ ಕೆಲವೇ ಮಂದಿಯನ್ನು ಸ್ಮರಿಸುತ್ತೇವೆ ಅವರೆಲ್ಲರೂ ಮಹನೀಯರಾಗಿ ಉಳಿದಿದ್ದಾರೆ ಈ ಕಾರಣದಿಂದಲೇ ಅವರನ್ನು ಪೂಜಿಸುವಂತಾಗಿದೆ ಎಂದರು. 
ಪ್ರಸ್ತುತ ನಾವು ಅಂತಹ ದೊಡ್ಡ ಮಟ್ಟದ ಮಹನೀಯರ ಮುಂದೆ ನಾವು ದೊಡ್ಡವರೆನಿಸಿಕೊಳ್ಳಲು ಸ್ವಾರ್ಥಕ್ಕಾಗಿ ಒಂದೊಂದು ಜಾತಿಗೆ ಸೀಮಿತಗೊಳಿಸಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂದರು. ಬೆಂಗಳೂರು ನಗರವನ್ನು ಎಲ್ಲಾ ಜಾತಿಗಳ ಸಮುದಾಯದ ಹಿತ ಬಯಸಿ ಆಯಾ ಪ್ರದೇಶಕ್ಕೆ ಅವರವರ ಹೆಸರುಗಳನ್ನು ಇಟ್ಟು ನ್ಯಾಯ ಒದಗಿಸಿದ್ದಾರೆ ಅವರ ಹೆಸರು ಸ್ಮರಿಸುವ ಜೊತೆ ಜಯಂತಿ ಆಚರಣೆ ಅರ್ಥಪೂರ್ಣವೆನಿಸಿಕೊಳ್ಳುತ್ತದೆ ಎಂದರು. ಡಾ|| ಬಿ.ಆರ್.ಅಂಬೇಡ್ಕರ್ ರವರು ಇಡೀ ದೇಶಕ್ಕೆ ಸಂವಿದಾನ ಕೊಟ್ಟರೂ ಎಸ್ಸಿ ಎಸ್ಟಿ ರವರ ಸಮುದಾಯವೆಂದು ಅವರನ್ನು ಸಣ್ಣ ಮಟ್ಟದಲ್ಲಿ ಕಾಣುತ್ತಿರುವುದು ಜನರ ಸಣ್ಣಬುದ್ದಿಯೆಂದು ಕಳವಳ ವ್ಯಕ್ತಪಡಿಸಿದರು. ಅನೇಕ ಮಹನೀಯರು ಯಾವುದೇ ಭಾಷೆ, ಜಾತಿ, ಧರ್ಮಕ್ಕೆ ಸೀಮಿತಗೊಂಡವರಲ್ಲ ಆದರೂ ಅವರನ್ನು ಕೆಲವು ಸಮುದಾಯಗಳು ನಮ್ಮ ಜಾತಿಯವನೆಂದು ಸ್ವಾರ್ಥಭಾವದಿಂದ  ನೊಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದರು. 
ಕಾರ್ಯಕ್ರಮಕ್ಕೆ ಜನಕಡಿಮೆ ಬಂದಿದ್ದಾರೆ ಸಮುದಾಯ ಮುಂದಿನ ದಿನಗಳಲ್ಲಿ ಸಂಘಟನೆ ಮಾಡುವ ಜೊತೆ ಅವರ ವಿಚಾರದಾರೆಗಳನ್ನು ಜನರಿಗೆ ಮುಟ್ಟಿಸುವಂತಾಗಬೇಕೆಂದರು. ಯಾವುದೇ ಕಾರ್ಯಕ್ರಮಗಳು ಸರಳವಾಗಿ ನಡೆದರೂ ನೀರಸವಾಗಿ ನಡೆಸದೇ ಶುದ್ದ ಮನಸ್ಸಿನಿಂದ ಮಾಡಬೇಕೆಂದರು. ವಿಧ್ಯಾರ್ಥಿಗಳು ಪಠ್ಯ ಪುಸ್ತಕದ ಜೊತೆಗೆ ವಿಚಾರಗಳನ್ನು ತಿಳಿದುಕೊಳ್ಳುವುದರಿಂದ ಮುಂದಿನ ಭವಿಷ್ಯಕ್ಕೆ ಅನುಕೂಲವಾಗುತ್ತಿದೆ ಎಂದು ಕಿವಿಮಾತು ಹೇಳಿದರು. 
ವಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ನೂಲಟೂರು ಚಿನ್ನಪ್ಪರೆಡ್ಡಿ ರವರು ಮಾತನಾಡಿ ಮಹಾನಗರ ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರ ಜಯಂತಿ ಆಚರಣೆ ನಮಗೆ ಗೌರವ ತರುವಂತಾಗಿದೆ ಅವರ ಸೇವೆ ಮಾದರಿಯನ್ನು ನಮ್ಮ ಸಮುದಾಯ ಅಳವಡಿಸಿಕೊಂಡು ಸಮುದಾಯ ಸಮಾಜಕ್ಕೆ ಕೆಲಸ ಮಾಡುವ ಮೂಲಕ ಆದರ್ಶವಾಗಬೇಕಾಗಿದೆ ಎಂದರು. ಜಯಂತಿ ಆಚರಣೆಗೆ ಆದಿಚುಂಚನಗಿರಿ ನಿರ್ಮಲಾನಂದಸ್ವಾಮೀಜಿ ರವರು ಸೂಚನೆ ನೀಡಿ ಸರಳವಾಗಿ ಆಚರಣೆ ಮಾಡಬೇಕೆಂದು ಸೂಚಿಸಿದ್ದರು ಹಾಗಾಗಿ ರಾಷ್ಟ್ರೀ ಹಬ್ಬಗಳ ಆಚರಣಾ ಸಮಿತಿ ಜೊತೆ ಸಹಕರಿಸಿ ಸರಳವಾಗಿ ಆಚರಿಸಲಾಗುತ್ತಿದೆ ಅದ್ದರೂರಿಯಾಗಿ ಮಾಡಬೇಕೆಂಬ ಆಸೆ ಹೊರಲಾಗಿತ್ತು ಜನರ ಜೀವನಾಡಿ ಮಾವು ಬೆಲೆ ಕುಸಿತದಿಂದ ರೈತರಲ್ಲಿ  ಚಂದಾ ಮಾಡಬಾರದು ಎಂಬ ಸದುದ್ದೇಶದಲ್ಲಿ ಸರಳವಾಗಿ ಆಚರಣೆ ಮಾಡಲಾಗಿದೆ ಅದೇ ರೀತಿ ಮುಂದಿನ ದಿನಗಳಲ್ಲಿ ನಾವು ಸಂಘಟಿತರಾಗಿ ಸಮಾಜ ಸಮುದಾಯದ ಹಿತದೃಷ್ಟಿಯಿಂದ ಒಳ್ಳೆಯ ಕೆಲಸಗಳನ್ನು ಮಾಡಲು ಎಲ್ಲರ ಸಹಕಾರ ಅಗತ್ಯವೆಂದು ಅಭಿಪ್ರಾಯಿಸಿದರು.

ಕಾರ್ಯಕ್ರಮದಲ್ಲಿ ಕಲ್ಲೂರು ಎ.ವೆಂಕಟರೆಡ್ಡಿ ಕೆಂಪೇಗೌಡರ ಬಗ್ಗೆ ಉಪನ್ಯಾಸ ನೀಡಿದರು. ಇದೇ ವೇಳೆ ಮ್ಯಾಕಲ ನಾರಾಯಣಸ್ವಾಮಿ, ದಿಂಬಾಲ ಅಶೋಕ್, ಕೆ.ಕೆ. ಮಂಜುನಾಥ್, ಎನ್.ರಾಜೇಂದ್ರಪ್ರಸಾದ್, ವಕ್ಕಲೇರಿ ರಾಮು, ಎಂ.ನಾಗರಾಜ್, ರೋಣೂರು ಚಂದ್ರು, ಎಸ್.ಶ್ರೀನಿವಾಸಪ್ಪ, ಸೋಮಯಾಜಲಹಳ್ಳಿ ಬಾಬು(ಪ್ರಭು), ಕೆ.ನಾಗರಾಜ್, ಪಲ್ಲಾರೆಡ್ಡಿ, ಚೊಕ್ಕರೆಡ್ಡಿ, ಶ್ರೀನಿವಾಸರೆಡ್ಡಿ, ಬೈರೆಡ್ಡಿ, ಸಂಜಯ್‍ರೆಡ್ಡಿ, ಮುದುವಾಡಿ ಮಂಜುನಾಥ್, ಚಂದ್ರು, ಇತರರು ಹಾಜರಿದ್ದರು. ಕಾರ್ಯಕ್ರಮದ ನಂತರ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಇದ್ದ ಪಲ್ಲಕ್ಕಿ ಹಾಗು ಸಾಂಸ್ಕøತಿಕ ತಂಡಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.
1ನೇ ಸುದ್ದಿ ಪೋಟೋ: ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ರವರು ಉದ್ಘಾಟಿಸಿ ಮಾತನಾಡಿದರು.
2.ಶ್ರೀನಿವಾಸಪುರ:  ಸಮುದಾಯದ ಸಂಖ್ಯೆ ಕೊರತೆ, ವಿಧಾನಸಭಾದ್ಯಕ್ಷರ ಆಗಮನ ವಿಳಂಭ, ಶಾಲಾ ವಿಧ್ಯಾರ್ಥಿಗಳೇ ಮೇಲುಗೈ, ಕಾರ್ಯಕ್ರಮ ವಿಳಂಭ ಇತ್ಯಾದಿಯಾಗಿ ಕಾರ್ಯಕ್ರಮದಲ್ಲಿ ಅಸಮದಾನ ಕಂಡು ಕೆಲವರು ಎದ್ದು ಹೋಗುವ ಸನ್ನಿವೇಶ ಇತ್ಯಾದಿಯಾಗಿ  ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಾಣುವಂತಾಯಿತು.
ಶ್ರೀನಿವಾಸಪುರ ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕೆಂಪೇಗೌಡರ ಜಯಂತಿ ಎಂದು ಆಚರಣೆ ಮಾಡಲಾಗಿತ್ತು. ವೇದಿಕೆಯ ಬ್ಯಾನರ್‍ನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಾ ಸಮಿತಿ ಹೆಸರು ಇರದೇ ಕರ್ನಾಟಕ ರಾಜ್ಯದ ಚಿಹ್ನೆಯ ಗುರುತು ಇತ್ತು. ಅದೇ ರೀತಿ ವಕ್ಕಲಿಗರ ಕ್ಷೇಮಾಭಿವೃದ್ದಿ ಸಂಘದ ಹೆಸರು ಎದ್ದು ಕಾಣಿಸುತ್ತಿತ್ತು. ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಎಂದಿದ್ದರೂ ಕಾರ್ಯುಕ್ರಮ 12. 45ಕ್ಕೆ ಪ್ರಾರಂಭವಾಯಿತು. ಕಾರಣ ಶಾಸಕರ ಆಗಮನ ವಿಳಂಭವಾಗಿತ್ತು. ಜೊತೆಗೆ  ಕಳೆದ ವರ್ಷದ ಜಯಂತಿಒಗೆ ಬಂದಿದ್ದ ಸಮುದಾಯ ಅದರಲ್ಲಿ ಶೇ 10 ರಷ್ಟು ಮಾತ್ರ ಕಾಣಿಸಿಕೊಂಡಿದ್ದು ಸಹ ಸಮುದಾಯದ ಕೆಲವರಲ್ಲಿ ಅಸಮದಾನ ಹೊಗೆ ಎದ್ದು ಮಾತನಾಡಿದ್ದು ಆಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಯಕ್ರಮ ತಡ ಮಾಡುತ್ತಿರುವುದರಿಂದ ಬೇಸತ್ತು ಕೆಲವರು ಸಭೆಯಿಂದ ಹೊರನಡೆಯಲು ಎದ್ದು ಹೋಗುತ್ತಿರಲಾಗಿ ಮಾತಿನ ಚರ್ಚೆ ನಡೆಯಿತು. ಕೆಲವರು ಸಮಾದಾನ ಮಾಡಿದರೂ ಅಸಮದಾನ ಎದ್ದು ಸಭೆಯಲ್ಲಿ ಗೊಂದಲದ ವಾತಾವರಣ ಕಾಣಿಸುವಂತಾಯಿತು. ಕಾರ್ಯಕ್ರಮದಲ್ಲಿ ಜನ ಕಡಿಮೆ ಇರುವ ಕಾರಣ ಶಾಲಾ ವಿಧ್ಯಾರ್ಥಿಗಳನ್ನು ವೇದಿಕೆ ಮುಂಬಾಗ ಖಾಲಿ ಇದ್ದ ಕುರ್ಚಿಗಳಲ್ಲಿ ಕುಳಿಸಲಾಗಿತ್ತಾದರೂ ಕಾರ್ಯಕ್ರಮ ವಿಳಂಭದಿಂದ ವಿದ್ಯಾರ್ಥಿಗಳು ಮನೆಯತ್ತ ತೆರಳು ಮುಂದಾಗುತ್ತಿದ್ದರು. ಇದರಿಂದ ಪೋಲೀಸರು ಮಕ್ಕಳನ್ನು ಕುಳಿತುಕೊಳ್ಳುವಂತೆ ಪ್ರಯಾಸಪಡುತ್ತಿದ್ದು ಕಂಡುಬಂದಿತು. ಕೊನೆಗೂ ರಮೇಶ್‍ಕುಮಾರ್ ರವರು ಬಂದೊಡನೆ ಸಭೆಯಲ್ಲಿ ಜನ ಕುಳಿತುಕೊಂಡರು ನೇರವಾಗಿ ರಮೇಶ್‍ಕುಮಾರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಕೆಲವರಿಗೆ ಸನ್ಮಾನಿಸಲು ತಂದಿದ್ದ ಹಣ್ಣು ಹಂಪಲಗಳ ಬುಟ್ಟಿಗಳನ್ನು ಹಾಗು  ಹೂಮಾಲೆಗಳನ್ನು ಕಚೇರಿಗೆ ಯಾರಿಗೆ ಸನ್ಮಾನ ಎಂಬುದು ತಿಳಿಯಲಿಲ್ಲ ಆದರೂ ಕಾರ್ಯಕ್ರಮ ತಡವಾಗಿಯಾದರೂ ಸರಳವಾಗಿ ನಡೆದು ಯಶಸ್ವಿಯತ್ತ ನಡೆಯಿತು. ಆದರೂ ಕಾರ್ಯಕ್ರಮ ನಂತರ ಅಸಮದಾನ ಇದ್ದ ಕೆಲವರು ಮಾತಿಗೆ ಇಳಿದಿದ್ದ ಕೇಳುವಂತಾಯಿತು.

Read These Next

ಜಲಶಕ್ತಿ ಅಭಿಯಾನವನ್ನು ಸಾಕಾರಗೊಳಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಲಿ -ಜೆ.ಮಂಜುನಾಥ್

ಇಂದು ಕೋಲಾರ ತಾಲ್ಲೂಕಿನ ಮುದುವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ...

ಜಿಲ್ಲಾಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್  ಖಜಾಂಚಿಯಾಗಿ ವಿಜಯ್, ರಾಜ್ಯಪರಿಷತ್‍ಗೆ ಡಿ.ಸುರೇಶ್‍ಬಾಬು ಆಯ್ಕೆ

ಕೋಲಾರ: ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕೆ.ಬಿ.ಅಶೋಕ್ ಹಾಗೂ ಖಜಾಂಚಿಯಾಗಿ ಕೆ.ವಿಜಯ್, ರಾಜ್ಯಪರಿಷತ್ ಸದಸ್ಯರಾಗಿ ...

ಮೋದಿ ಸರ್ಕಾರ ಅವಧಿಯಲ್ಲಿ ’ಬೀಫ್’ ರಪ್ತು ಪ್ರಮಾಣದಲ್ಲಿ ಗರಿಷ್ಠ ಏರಿಕೆ; 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ಬೀಫ್ ರಫ್ತು

2014ರಲ್ಲಿ ಮೋದಿ ಸರಕಾರ ಅಧಿಕಾರ ವಹಿಸಿದಂದಿನಿಂದ ಎಮ್ಮೆ ಮಾಂಸದ ರಫ್ತು ಗಣನೀಯಾಗಿ ಹೆಚ್ಚಾಗಿದೆ. 2014-15ರಲ್ಲಿ 14.8 ಲಕ್ಷ ಮೆಟ್ರಿಕ್ ಟನ್ ...