ಎ.೮ರಂದು ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮಿಂಚಿನ ನೊಂದಣಿ ವಿಶೇಷ ಅಭಿಯಾನಕ್ಕೆ ಚಾಲನೆ

Source: sonews | By sub editor | Published on 7th April 2018, 11:54 PM | State News | Don't Miss |

ಶ್ರೀನಿವಾಸಪುರ: ಮತದಾರರ ಪಟ್ಟಿಗೆ ಹೆಸರು ಸೇರಿಸುವ ಮಿಂಚಿನ ನೊಂದಣಿ ಎಂಬ ವಿಷೇಶ ಅಭಿಯಾನವನ್ನು 08.04.2018 ಬಾನುವಾರ ರಂದು ನಡೆಸುತ್ತಿದ್ದೇವೆ ಇದನ್ನು ತಾಲ್ಲೂಕಿನ ಮತದಾರರು ಸದುಪಯೋಗ ಪಡಿಸಿಕೊಳ್ಳಬೇಕೆಂದು ನೂತನ ತಹಸಿಲ್ದಾರ್ ರವರಾದ ಎನ್.ಎಸ್ ಪ್ರಶಾಂತ್ ರವರು ತಿಳಿಸಿದರು.

ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೂತನ ತಹಸಿಲ್ದಾರ್ ರವರಾದ ಎನ್.ಎಸ್ ಪ್ರಶಾಂತ್ ರವರು ಪ್ರಜಾ ಪ್ರಭುತ್ವದಲ್ಲಿ ಮತದಾನವು ಅತ್ಯಂತ ಅಮೂಲ್ಯ ವಾದುದು ಅರ್ಹ ಮತದಾರರು ಇದರಿಂದ ವಂಚಿತರಾಗಬಾರದು ನಿಮ್ಮ ಸಮೀಪದ ಬಿ.ಎಲ್.ಓ ರವರ ಹತ್ತಿರ ನಿಮ್ಮ ಇತ್ತೀಚಿನ 2 ಬಾವಚಿತ್ರ, ಆಧಾರ್ ಕಾರ್ಡ, ವಯಸ್ಸಿನ ದೃಢೀಕರಣಪತ್ರ ನೀಡಿ ನಿಮ್ಮ ಹೆಸರುಗಳನ್ನು ನೊಂದಾಯಿಸಿ ಕೊಳ್ಳಬಹುದು ಹಾಗು ಸೇರ್ಪಡೆ,ತಿದ್ದುಪಡಿಗಳಿಗೆ ಇದೇ ತೀಂಗಳು 14 ರವರೆಗೆ ಚುನಾವಣಾ ಆಯೋಗ ಅವಕಾಶವನ್ನು ಕಲ್ಪಿಸಿದೆ, ನಮ್ಮ ತಾಲ್ಲೂಕಿನಲ್ಲಿ ಒಟ್ಟು ಮತದಾರರು 203225 ಇದರಲ್ಲಿ ಪುರುಷರು 100762 ಮಹಿಳೆಯರು 102463 ಮತ ಚಲಾಯಿಸಲಿದ್ದಾರೆ ಎಂದರು.
     
ಈ ಸಂದರ್ಭದಲ್ಲಿ ಚುನಾವಣೆಯ ಶಿರಸ್ತೆದಾರ್ ಕೆ.ಎನ್ ಮಂಜುನಾಥ್ ಸಿಬ್ಬಂದಿಯಾದ ಸುರೇಶ್ ಹಾಗು ಇನ್ನಿತರರು ಹಾಜರಿದ್ದರು. 
 

Read These Next

ಶುಕ್ರವಾರದ ನಮಾಝ್ ನಲ್ಲಿ ಮುಸ್ಲಿಮ್ ಸಮುದಾಯದಿಂದ ಹುತಾತ್ಮ ಯೋಧರಿಗಾಗಿ ವಿಶೇಷ ಪ್ರಾರ್ಥನೆ ​​​​​​​

ಉಡುಪಿ: ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗಾಗಿ ಗಂಗೊಳ್ಳಿ ...

ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಅರಣ್ಯ ಪರಿಸ್ಥಿತಿ ಕುರಿತ ರಾಜ್ಯ ಮಟ್ಟದ ವಿಚಾರ ಸಂಕೀರಣ

ಭಟ್ಕಳ: ಪರಿಸರ ಪರಿಸ್ಥಿತಿ, ಸಂರಕ್ಷಣೆ, ಸವಾಲು ಹಾಗೂ ಪರಿಹಾರದ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಿಂದ ಜನರು ತಮ್ಮಲ್ಲಿನ ಪರಿಸರದ ...

ಹೆದ್ದಾರಿ ಅಗಲಿಕರಣ; 45ಮೀ ವಿಸ್ತರಣೆಗೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣವನ್ನು 30 ಮೀಟರ್‍ಗೆ ಸೀಮಿತಗೊಳಿಸುವ ...

ಸದಸ್ಯರ ಪ್ರಶ್ನೆಗೆ ಉತ್ತರಿಸಲಾಗದೆ ಸಭೆಯಿಂದ ಹೊರನಡೆದ ಪಂಚಾಯತ್ ಅಭಿವೃದ್ಧಿ ಅಧಿಕಾರಿ

ಭಟ್ಕಳ: ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರ ಪ್ರಶ್ನೆಯೊಂದಕ್ಕೆ ಉತ್ತರಿಸಲಾಗದೇ ಗ್ರಾಮ ಪಂಚಾಯತ್  ಪಂಚಾಯತ್ ಅಭಿವೃದ್ದಿ ...