ಶ್ರೀನಿವಾಸಪುರ: ರೋಟರಿ ಪರಸ್ಪರ ಸಂಕಷ್ಠಕ್ಕೆ ಹೆಗಲು ನೀಡುವ ಸಂಸ್ಥೆಯಾಗಿದೆ-ರೋಟರಿ ರಾಜ್ಯಪಾಲೆ ಆಶಾ ಪ್ರಸನ್ನಕುಮಾರ್

Source: sonews | By Staff Correspondent | Published on 7th December 2017, 11:22 PM | State News |

ಶ್ರೀನಿವಾಸಪುರ: ರೋಟರಿ ಸಂಸ್ಥೆ ಒಂದು ಶಿಸ್ತು ಬದ್ದ ಸಂಸ್ಥೆಯಾಗಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಒಬ್ಬರಿಗೊಬ್ಬರು ಸಹಾಯ ನೀಡಿ ಇನ್ನೊಬ್ಬರ ಸಂಕಷ್ಟಕ್ಕೆ ಸಹಕಾರ ನೀಡಲು ಹೆಗಲು ನೀಡುವ ಕುಟುಂಬಗಳ ನಿರ್ಮಾಣದಲ್ಲಿ ತೊಡಗಿದೆ ಎಂದು ರೋಟರಿ ರಾಜ್ಯಪಾಲೆ ಆಶಾ ಪ್ರಸನ್ನಕುಮಾರ್ ತಿಳಿಸಿದರು. 

ಪಟ್ಟಣದ ಸಾಯಿ ಶಿವಕೃಪ ಕನ್ವಷನ್ ಹಾಲ್‍ನಲ್ಲಿ ಶ್ರೀನಿವಾಸಪುರ ರೋಟರಿ ಸೆಂಟ್ರಲ್‍ನಿಂದ ಏರ್ಪಡಿಸಲಾಗಿದ್ದ ರೋಟರಿ ರಾಜ್ಯಪಾಲರ ಅಧಿಕೃತ ಬೇಟಿ ಮತ್ತು ವೃತ್ತಿಪರ ಸೇವಾ ನಿರತರಿಗೆ ಸನ್ಮಾನ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಇವರು ಮನುಷ್ಯನಾಗಿ ಹುಟ್ಟಿದ ನಾನು ಇನ್ನೊಬ್ಬರಿಗೆ ಸಹಾಯ ಮಾಡದೆ ಇದ್ದರೇ ಈ ಮನುಷ್ಯನ ಜನ್ಮಕ್ಕೆ ಅರ್ಥವಿರುವುದಿಲ್ಲ. ಈ ಸಮಾಜದಿಂದ ನಾನು ಏನೆಲ್ಲಾ ಪಡೆದುಕೊಂಡಿದ್ದೇನೆ ಮತ್ತು ಈ ಸಮಾಜಕ್ಕೆ ನಾನು ಏನು ನೀಡಬೇಕೆಂಬುದು ಎಂಬುದರ ಬಗ್ಗೆ ಸಂಕ್ಷಿಪ್ತ ಗುರಿಯನ್ನು ನೀಡಿ ಸಮಾಜದ ಒಳತಿಗೆ ದುಡಿಯುವುದು ರೋಟರಿ ಸಂಸ್ಥೆಯ ಮುಖ್ಯ ಗುರಿಯಾಗಿದೆ. ಸಮಾಜದ ಎಲ್ಲರನ್ನೂ ಸಹೋದರರಂತೆ ಭಾವಿಸಿ ಒಂದೇ ಕುಟುಂಬದವರಾಗಿ ಜೊತೆಗೂಡಿ ಒಬ್ಬರಗೊಬ್ಬರಿಗೆ ಸಹಕಾರ ನೀಡುವ ಮಹತ್ಕಾರ್ಯ ನಮ್ಮದಾಗಿದೆ ಎಂದರು.
    
ರೋಟರಿ ಸಂಸ್ಥೆಯಿಂದ ಬಡವರಿಗೆ ವೈಧ್ಯಕೀಯ ಸಹಾಯ ಹಸ್ತ ನೀಡುತ್ತಿದ್ದು ಈ ಸಾಲಿನಲ್ಲಿ ಉಚಿತವಾಗಿ 1160ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ್ದೇವೆ. ಇದರಲ್ಲಿ ಪಾಕಿಸ್ಥಾನ, ನೈಜೀರಿಯಾ, ಶ್ರೀಲಂಕಾ ಸೇರಿದಂತೆ ವಿದೇಶಗಳಿಂದ ಬಂದ 250ಬಡ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗಿದೆ. ನಮ್ಮ ಸಂಸ್ಥೆಯಲ್ಲಿ ಸಹಕಾರ ನೀಡಿದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕಾರಣ ಅವರ ಕೆಲಸ ಇನ್ನಿತರರಿಗೆ ಸ್ಪೂರ್ಥಿ ನೀಡುವುದಲ್ಲದೆ ಮತ್ತಷ್ಟು ಕೆಲಸ ನಮಾಡಲು ಅವರಿಗೆ ಪ್ರೇರಣೆ ನೀಡಿದಂತಾಗುತ್ತದೆ. ಅವರಜೊತೆಗೆ ಅವರ ಕುಟುಂಬದವರನ್ನು ಕರೆಸಿ ಗೌರವಿಸುವುದರಿಂದ ಅವರ ಕುಟುಂಬದ ಸದಸ್ಯರಿಗೆ ಇತರರಿಗೆ ಸಹಾಯ ಮಾಡಬೇಕು ಎನ್ನುವುದು ಮಕ್ಕಳಿಂದಲೇ ಅರಿವಾಗುತ್ತದೆ ಎಂದು ತಿಳಿಸಿದರು. 
     
ಶ್ರೀನಿವಾಸಪುರ ರೋಟರಿ ಸೆಂಟ್ರಲ್‍ನ ಕಾರ್ಯದರ್ಶಿ ಶಿವಮೂರ್ತಿ ಪ್ರಾಸ್ತಾವಿಕ ಬಾಷಣ ಮಾಡಿ ರಾಜ್ಯಪಾಲೆ ಆಶಾ ಪ್ರಸನ್ನಕುಮಾರ್ ರವರು 140ಕ್ಲಬ್ಬುಗಳಿಗೆ ಮುಖ್ಯಸ್ಥರಾಗಿ ನಮ್ಮ ತಾಯಿ ಸಮಾನರಾಗಿ ನಮಗೆ ಮಾರ್ಗದರ್ಶನ ನೀಡಿ ನಮ್ಮನ್ನು ಮತ್ತಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಲು ಸಹಕಾರ ನೀಡುತ್ತಿದ್ದಾರೆ. ಅವರ ಸಹಕಾರದಿಂದ ನಮ್ಮ ಸಂಸ್ಥೆ ಎಲೆ ಮರೆ ಕಾಯಿಯಂತೆ ರಾಷ್ಟ್ರ ನಿರ್ಮಾಣ ಮಾಡುವ ಶಿಕ್ಷಕರನ್ನು ಗುರ್ತಿಸಿ ಸನ್ಮಾನಿಸಿದ್ದೇವೆ. ತಾಲೂಕಿನಲ್ಲಿ ವ್ಯಾಪಕವಾಗಿ ಚಿಕನ್ ಗುನ್ಯ ಮತ್ತು ಡೆಂಗ್ಯೂ ಜ್ವರಗಳು ಉಲ್ಬಣಿಸಿದಾಗ ತಾಲೂಕಿನ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ಸೇರಿಸಿ ಸ್ವಚ್ಚತೆಯ ಬಗ್ಗೆ ಸಾಮಾಜಿಕ ಕಾರ್ಯದ ಜೊತೆಗೆ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲು ಕಾರ್ಯಾಗಾರವನ್ನು ನಡೆಸಿದೆವು. ತಾಲೂಕಿನ ಸರ್ಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ 8ನೇತರಗತಿಯ ವಿಧ್ಯಾರ್ಥಿಗಳಿಗೆ ಉಚಿತ ಕನ್ನಡ ಇಂಗ್ಲೀಷ್ ನಿಘಂಟುಗಳನ್ನು ನೀಡಿದ್ದೇವೆ. ದಳಸನೂರು ಮತ್ತು ಮಸ್ತೇನಹಳ್ಳಿ ಶಾಲೆಗಳ ಎಸ್.ಎಸ್.ಎಲ್.ಸಿ.ಮಕ್ಕಳಿಗೆ ಉಚಿತ ಸೋಲಾರ್ ವಿಧ್ಯುತ್ ದೀಪಗಳನ್ನು ನೀಡಿದ್ದೇವೆ. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕಬ್ಬಡ್ಡಿ ಟೀಂಗೆ ಸಮವಸ್ತ್ರ ಹಾಗೂ ಆರ್ಥಿಕ ಸಹಾಯವನ್ನು ರೋಟೇರಿಯನ್ ಪೂಲು ಶಿವಾರೆಡ್ಡಿ ನೀಡಿರುವುದರಿಂದ ಅವರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿ ಸಂತಸ ಮೂಡಿಸಿದ್ದಾರೆ ಎಂದು ಅವರ ಕಾರ್ಯವನ್ನು ಶ್ಲಾಘಿಸಿದರು.
     
ಮುಂದಿನ ದಿನಗಳಲ್ಲಿ ಮೆಗಾ ಹೆಲ್ತ್ ಕ್ಯಾಂಪ್ ನಡೆಸಿ ಎಲ್ಲಾ ಶ್ರಮಿಕವರ್ಗದವರಿಗೆ ಉಚಿತ ಆರೋಗ್ಯ ತಪಾಸಣೆ ಶಿಭಿರವನ್ನು ನಡೆಸಲಾಗುವುದು. ಭೃಹತ್ ಉದ್ಯೋಗ ಮೇಳವನ್ನು ಆಯೋಜಿಸಿ ಹೈಸ್ಕೂಲ್ ನಿಂದ ಉನ್ನತ ಶಿಕ್ಷಣವನ್ನು ಪಡೆದವರಿಗೆ ಅಂತರರಾಷ್ಟ್ರೀಯ ಮಟ್ಟದ ಐಟಿ ಮತ್ತು ಬಿಟಿ ಕಂಪನಿಗಳ ಮುಖ್ಯಸ್ಥರನ್ನು ಕರೆಸಿ ಸ್ಥಳದಲ್ಲಿಯೇ ಉದ್ಯೋಗ ನೀಡುವ ಕೆಲಸವನ್ನು ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
  
ಕಾರ್ಯಕ್ರಮದಲ್ಲಿ ಶ್ರೀನಿವಾಸಪುರ ರೋಟರಿ ಸೆಂಟ್ರಲ್‍ನ ಅಧ್ಯಕ್ಷ ರಾಜೇಂದ್ರಪ್ರಸಾದ್, ಅಂಬಿಕಾ ನಾರಾಯಣ್, ಪ್ರಸನ್ನಕುಮಾರ್, ಗೋಪಾಲಕೃಷ್ಣಗೌಡ, ಗೋವಿಂದನ್, ಕೆ.ಎನ್.ಪ್ರಕಾಶ್, ಎನ್.ನಂಜುಂಡೇಗೌಡ, ರವಿ, ಬಾಲಚಂದ್ರ, ಕೃಷ್ಣಮೂರ್ತಿ, ರೋಣೂರು ಚಂದ್ರಶೇಖರ್, ಎಂ.ಶ್ರೀನಿವಾಸ್ ಇತರರು ಹಾಜರಿದ್ದರು.

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...