ಶೀಘ್ರದಲ್ಲಿ ಎಲ್ಲಾ ರಸ್ತೆಗಳು ಡಾಂಬರಿಕರಣ - ಪುರಸಭೆ ಅಧ್ಯಕ್ಷೆ ರತ್ನಮ್ಮ ನಾಗರಾಜ್

Source: sonews | By Sub Editor | Published on 11th January 2018, 5:54 PM | State News | Don't Miss |

ಶ್ರೀನಿವಾಸಪುರ: ಪಟ್ಟಣದ ಬಹುತೇಕ ರಸ್ತೆಗಳು ಅಭಿವೃದ್ದಿಯಾಗುತ್ತಿದೆ ಒಟ್ಟು 39 ಲಕ್ಷದಲ್ಲಿ ನಾಲ್ಕು ರಸ್ತೆಗಳು ಅತಿ ಶೀಘ್ರದಲ್ಲಿ ಎಲ್ಲಾ ರಸ್ತೆಗಳು ಡಾಂಬರಿಕರಣವಾಗಲಿದೆ ಎಂದು ಪುರಸಭೆ ಅಧ್ಯಕ್ಷೆ ರತ್ನಮ್ಮನಾಗರಾಜ್ ಹೇಳಿದರು ಅವರು ಇಂದು ಪಟ್ಟಣದ ವಾರ್ಡ್ ನಂ 17 ಜಾಕೀರ್ ಹುಸೇನ್ ಮೊಹಲ್ಲಾ ಮತ್ತು ವೆಂಕಟೇಶ್ವರ ಬಡಾವಣೆ ನಡುವಿನ ನಾಲ್ಕು ರಸ್ತೆಗಳ ಅಭಿವೃದ್ದಿ ಕಾಮಗಾರಿಗೆ ಪೂಜೆ ನೆರವೇರಿಸಿ ಮಾತನಾಡಿದರು.

ಒಟ್ಟು 39 ಲಕ್ಷದಲ್ಲಿ ನಾಲ್ಕು ರಸ್ತೆಗಳು ಡಾಂಬರಿಕರಣವಾಗುವಂತ ರಸ್ತೆಕಾಮಗಾರಿಯಲ್ಲಿ ಗುಣಮಟ್ಟ ಕಾಪಾಡುವಂತೆ ಸೂಚಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್ ರಮೇಶ್‍ಕುಮಾರ್  ಅವರ  ಒತ್ತಾಸೆಯಿಂದ ಪಟ್ಟಣದ ರಸ್ತೆ ಅಭಿವೃದ್ದಿಗೆ 1 ಕೋಟಿ ರೂಪಾಯಿಗಳ ಅನುಧಾನ ಕೋಡಸಿದ್ದಾರೆ ಸಣ್ಣ ಪುಟ್ಟ ಬಹುತೇಕ ರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳು ಅಭಿವೃದ್ದಿಯಾಗುತ್ತಿದೆ ಎಂದ ಅವರು ಈ ಹಿಂದೆ ಯಾರು ಮಾಡದಷ್ಟು ಅಭಿವೃದ್ದಿಯನ್ನು ರಮೇಶ್ ಕುಮಾರ್ ಅವಧಿಯಲ್ಲಿ ಆಗುತ್ತಿರುವುದು ಪಟ್ಟಣದ ಜನರ ಹೆಮ್ಮೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಯಮ್ಮನೂರುನಾಗರಾಜ್.ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ್ ಅಭಿಯಂತರ ಶ್ರೀನಿವಾಸ್ ಸದಸ್ಯರಾದ ಪ್ರಕಾಶ್, ಶಂಕರ್,ಹರ್ಷ ಮಾಜಿ ಸದಸ್ಯ ಕೆ ವಿ ಮಂಜುನಾಥ್ ದಿಂಬಾಲ್ ಅಶೋಕ್ ಮುನಿಶಾಮಿರೆಡ್ಡಿ ವೆಂಕಟರಮಣಪ್ಪ ಗುತ್ತಿಗೆದಾರ ಮಂಜುನಾಥರೆಡ್ಡಿ,ರಾಜಣ್ಣ ಮುಂತಾದವರು ಇದ್ದರು.

Read These Next

ರಸ್ತೆ ಅಪಘಾತದಲ್ಲಿ ವರದಿಗಾರ ಮೌನೇಶ್ ಪೋತರಾಜ್ ನಿಧನ;ಕಸದ ವಾಹನದಲ್ಲಿ ಮೃತದೇಹ ಸಾಗಿಸಿದ ಪೊಲೀಸರು ಪತ್ರಕರ್ತರ ವಲಯದಲ್ಲಿ ಆಕ್ರೋಶ

ಕಾರವಾರ: ಸುದ್ದಿ ಟಿವಿಯ ಉತ್ತರಕನ್ನಡ ಜಿಲ್ಲಾ ವರದಿಗಾರನಾಗಿ ಶಿರಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮೌನೇಶ ಪೋತರಾಜ (28) ತನ್ನ ...

ಅಂಜುಮನ್ ಸಂಸ್ಥೆಯ ಪ್ರತಿಷ್ಠಿತ ’ವಕಾರೆ ಅಂಜುಮನ್’ ’ವಕಾರೆ ಇಸ್ಲಾಮಿಯ’ ಪ್ರಶಸ್ತಿ ಪ್ರದಾನ

ಭಟ್ಕಳ: ಅಂಜುಮನ್ ಹಾಮಿಯೇ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಗಳ ಇಸ್ಲಾಮಿಯಾ ಅಂಗ್ಲೋ ಉರ್ದು ಪ್ರೌಢಶಾಲೆ ಹಾಗೂ ಅಂಜುಮನ್ ಬಾಲಕರ ...