ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗಾಗಿ ಪುನಚ್ಚೇತನಾ ಕಾರ್ಯಾಗಾರ

Source: sonews | By Staff Correspondent | Published on 11th July 2018, 8:06 PM | State News |

ಶ್ರೀನಿವಾಸಪುರ: ಯಾವುದೇ ದೇಶ ಅಭಿವೃದ್ದಿಯಾಗಬೇಕಾದರೆ ಅಥವಾ ಯಾವುದೇ ವ್ಯಕ್ತಿ ಉನ್ನತ ಹುದ್ದೆ ಅಲಂಕರಿಸಿ ಜ್ಞಾನ ಪಡೆಯಬೇಕಾದರೆ ಈ ಎಲ್ಲಾ ಯಶಸ್ವಿಗೆ ಶಿಕ್ಷಕರೇ ಮೂಲ ಕಾರಣವೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಂಷುನ್ನೀಸಾ ರವರು ಅಭಿಪ್ರಾಯಿಸಿದರು. 

ಶ್ರೀನಿವಾಸಪುರ ಪಟ್ಟಣದ ಸರ್ಕಾರಿ  ನೌಕರರ ಭವನದಲ್ಲಿ ಕಸಬಾ ಹೋಬಳಿಯ 6 ಕ್ಲಷ್ಟರ್‍ಗಳ  ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಏರ್ಪಡಿಸಿದ್ದ ಶಾಲಾ ಆಡಳಿತ ನಿರ್ವಹಣೆ ಪುನಚ್ಚೇತನಾ  ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಶಿಕ್ಷಕರ ಸ್ಥಾನ ಮಹತ್ವರ ಸ್ಥಾನವಾಗಿದೆ ಇದನ್ನು ತಾವು ಗೌರದಿಂದ ಸ್ವೀಕರಿಸುವ ಮೂಲಕ ಸೇವೆ ಆರಂಬಿಸಬೇಕು ಕೆಲವರು ಅನೇಕ ಇಲಾಖೆಗಳಲ್ಲಿ ಹುದ್ದೆಗಳಿಗೆ ಅರ್ಜಿ ಹಾಕಿದರೂ ಸಿಕ್ಕದಿದ್ದ ಮೇಲೆ ಕೊನೆಗೆ ಶಿಕ್ಷಕ ವೃತ್ತಿಯನ್ನು ಅವಲಂಬಿಸಬೇಕಾಯಿತು ಎನ್ನುತ್ತಾರೆ ಆದರೆ ಈ ಹುದ್ದೆ ಸಿಕ್ಕಿರುವುದು ತಮ್ಮ ಪುಣ್ಯವೆಂದರು. ಜಗತ್ತಿನ ಎಲ್ಲಾ ವ್ಯವಹಾರಗಳಿಗೆ ಅಭಿವೃದ್ದಿಗಳಿಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ ಇದರಿಂದ ಶಿಕ್ಷಕನಿಂದ ಜ್ಞಾನ ಪಡೆದವರು ಪ್ರಧಾನಿ, ರಾಷ್ಟ್ರಪತಿ, ಮುಖ್ಯ ಮಂತ್ರಿ, ಉನ್ನತ ಪದವಿಗಳನ್ನು ಪಡೆದವರೆಲ್ಲರೂ ಪ್ರಾಥಮಿಕ ಶಿಕ್ಷಣದಿಂದಲೇ ಸಾಧ್ಯವಾಯಿತು ಎನ್ನುತ್ತಾರೆ ಇವರು ಎಂದೋ ಒಂದು ಸಲ ಶಿಕ್ಷಕರನ್ನು ಸ್ಮರಿಸುತ್ತಾರೆಂದರೆ ಶಿಕ್ಷಕರ ಸ್ಥಾನ ಎಂತದ್ದು ಎಂಬುದು ತಿಳಿಯುತ್ತದೆ ಹಾಗಾಗಿ ಶಿಕ್ಷಕರ ವೃತ್ತಿ ಗೌರವಕ್ಕೆ ಶ್ರೇಷ್ಟವೆನಿಸಿದೆ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿರುತ್ತದೆ ಅದನ್ನು ಅಳವಡಿಸಿಕೊಂಡು ಶಾಲಾ ಶೈಕ್ಷಣಿಕ ಮಟ್ಟವನ್ನು ಅಭಿವೃದ್ದಿಪಡಿಸಬೇಕೆಂದರು. ಯಾವುದೇ ಕಟ್ಟಡ ಕಟ್ಟಬೇಕಾದರೆ ತಳಪಾಯ ಮುಖ್ಯ ಅದೇ ರೀತಿ ಶೈಕ್ಷಣಿಕ ಗುಣಮಟ್ಟಕ್ಕೆ ಶಿಕ್ಷಕರಾದ ತಾವೇ ತಳಪಾಯವೆಂದರು. ಅಬ್ದುಲ್ ಕಲಾಂ, ರಾದಾಕೃಷ್ಣನ್ ರಂತವರ ಮಾದರಿಯ ಜೀವಿತವನ್ನು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಂಡು ನಡೆಯಬೆಕಾಗಿದೆ ಎಂದರು. ಈ ನಿಟ್ಟಿನಲ್ಲಿ ಶಾಲೆಗಳಲ್ಲಿ ಮೂಳಭುತ ಸೌಲಭ್ಯಗಳು, ಶೈಕ್ಷಣಿಕ ಗುಣಮಟ್ಟ, ಅಭಿವೃದ್ದಿ, ಶಾಲಾ ದಾಖಲಾತಿ, ಇತ್ಯಾದಿಗಳ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುವ ಈ ಕಾರ್ಯಾಗಾರ ತಮ್ಮ ಶಾಲೆಗಳ ಪ್ರಗತಿಗೆ ಕಾರಣವಾಗಲಿ ಎಂದು ಆಶಿಸಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಬಂಗವಾದಿ ಎಂ.ನಾಗರಾಜ್ ರವರು ಮಾತನಾಡಿ ಶೈಕ್ಷಣಿಕ ಅಭಿವೃದ್ದಿಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಮ್ಮಿಕೊಂಡಿರುವ ಕ್ರಗಳು ಸ್ವಾಗತಾರ್ಹ ಅವರನ್ನು ಈ ಮೂಲಕ ಅಭಿನಂದಿಸುತ್ತೇನೆ ಈಗಾಗಲೇ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಕಾರ್ಯಾಗಾರಗಳನ್ನು ನಡೆಸಿ ಇಮದು ಕಸಬಾ ಹೋಬಳಿ ಮಟ್ಟದ ಕಾರ್ಯಾಗಾರ ನಡೆಸಲಾಗುತ್ತಿದೆ. ತಾಲ್ಲೂಕಿನಾಧ್ಯಂತ ಶಿಕ್ಷಕರು ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಕಾರಣದಿಂದಲೇ ಶ್ರೀನಿವಾಸಪುರ ರಾಜ್ಯಮಟ್ಟದಲ್ಲಿ 2ನೇ ಸ್ಥಾನ ದೊರಕಿದೆ ಎಂದರು ಇದು ಶಿಕ್ಷಕರಿಗೆ ಸಲ್ಲುವ ಗೌರವಾಗಿದೆ ಎಂದರು. ಸಿದ್ದರಾಮಯ್ಯ ಸಿಎಂ ಆಗಿರುವ ಸಂದರ್ಭದಲ್ಲಿ 6ನೇ ವೇತನ ಅಯೋಗದಲ್ಲಿ  ಶೇ 30 ರಷ್ಟೂ ವೇತನ ಹೆಚ್ಚಿಸಿದ್ದಾರೆ ಇದು ಸಂಘದ ಹೋರಾಟದ ಫಲವೆಂದರು. ದೇ ತಮ್ಮೆಲ್ಲರ ಶ್ರಮದಿಂದ ಸರ್ಕಾರಿ ನೌಕರರ ಭವನ ಪೂರ್ಣಗೊಂಡಿದೆ ಎಂದ ಅವರು ನೌಕರರ ಎಲ್ಲಾ ಸಮಸ್ಯೆಗಳಿಗೆ ಸರ್ಕಾರಿ ನೌಕರರ ಸಂಘ ಹಾಗು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸ್ಪಂದಿಸಿ ಹಕ್ಕುಗಳನ್ನು ಹಾಗು ಬೇಡಿಕೆಗಳನ್ನು ಈಡೇರಿಸುತ್ತಿದೆ ಎಂದು ತಿಳಿಸಿದರು.
ಬಿಆರ್‍ಸಿ ಕ್ಷೇತ್ರ ಸಮನ್ವಯಾಧಿಕಾರಿ ಡಾ|| ವೀರಭದ್ರಪ್ಪ ರವರು ಪ್ರಾಸ್ಥಾವಿಕವಾಗಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಈ ಕಾರ್ಯಾಗಾರ ಹಮ್ಮಿಕೊಂಡು ಶಿಕ್ಷಕರಿಗೆ ತಿಳುವಳಿಕೆ ನೀಡಲಾಗುತ್ತಿದೆ ಎಂದರು. ಶಾಲೆಯ ಶೈಕ್ಷಣಿಕ ಆಡಳಿತ ಸುದಾರಣೆಯಾಗಬೇಕಾದರೆ ಮುಖ್ಯ ಶಿಕ್ಷಕರು ಕೇಂದ್ರಬಿಂದುಗಳಾಗಿದ್ದಾರೆ. ಅದೇ ರೀತಿ ಶೈಕ್ಷಣಿಕ ಅಭಿವೃದ್ದಿಗೆ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಹಾಗಾಗಿ ಈ ಕಾರ್ಯಾಗಾರದಲ್ಲಿ ನಡತೆ,, ಹಣಕಾಸು, ನಿಯಮಗಳು, ಕ್ರಿಯಾಶೀಲತೆ ಇತ್ಯಾದಿಯಾಗಿ ಸಂಪನ್ಮೂಲ ತಿಳಿಸಲಾಗುತ್ತದೆ ಇದನ್ನು ತಾವು ಶಾಲೆಗಳ ಪ್ರಗತಿಗೆ ಕ್ರಿಯಾತ್ಮಕವಾಗಿ ಕೆಲಸ ಮಾಡಬೇಕೆಂದು ಹೇಳಿದರು.

ಪ್ರಾ.ಶಾ.ಶಿ.ಸಂ.ಅಧ್ಯಕ್ಷ ಜಿ.ಎನ್.ಗೋವಿಂದರೆಡ್ಡಿ ರವರು ಮಾತನಾಡಿ 4ನೇ ಹಂತದ ಕಾರ್ಯಾಗಾರ ನಡೆಯುತ್ತಿದೆ ಸೇವೆ 20ರಿಂದ 25 ವರ್ಷ ಪೂರೈಸಿದರೂ ಸರ್ಕಾರದ ನಿಯಮಗಳಿಗೆ ಅನುಸಾರವಾಗಿ ಹಮ್ಮಿಕೊಳ್ಳುವ ಪ್ರಸ್ತುತ ಕಾರ್ಯಾಗಾರಗಳಿಗೆ ತಾವು ಬದ್ದರಾಗಬೇಕಾಗಿದೆ ಎಂದರು. ಅನೇಕ ಶಾಲೆಗಳಲ್ಲಿ ಮುಖ್ಯ ಶಿಕ್ಷಕರ ಹುದ್ದೆ ಖಾಲಿ ಇದ್ದರೂ ಪ್ರಭಾರಿ ಶಿಕ್ಷಕರೇ ಅದನ್ನು ನಿರ್ವಹಿಸುತ್ತಿದ್ದಾರೆ. ಮತ್ತೊಂದಡೆ ಖಾಸಗೀ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಬಂದರೆ ಖಾಸಗೀ ಶಾಲೆಗಳು ಟೀಸಿ ಕೊಡುತ್ತಿಲ್ಲ ಸರ್ಕಾರದ ಸುತ್ತೋಲೆ ಇದ್ದರೂ ಖಾಸಗೀ ಶಾಲೆಗಳು ಅದನ್ನು ನಿರ್ಲಕ್ಷ ಮಾಡುತ್ತಿವೆ ಇದರಿಂದ ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡಬೇಕೆಂದು ಬಿಇಓ ರವರಲ್ಲಿ ಮನವಿ ಮಾಡಿದರು.
ಪ್ರಾ.ಶಾ.ಶಿ.ಸಂ. ರಾಜ್ಯ ಉಪಾಧ್ಯಕ್ಷ ಕೆ.ಹೆಚ್.ಸಂಪತ್‍ಕುಮಾರ್ ರವರು ಮಾತನಾಡಿ ಸರ್ಕಾರದ ನಿಯಮಗಳಿಗೆ ಶಿಕ್ಷಕರು ಬದ್ದರಾಗಿ ಕೆಲಸ ಮಾಡಿದಾಗ ಅಭಿವೃದ್ದಿ ಸಾದ್ಯವೆಂದರು. ಸಂಘ ರಾಜ್ಯಾಧ್ಯಂತ  ಕೆಲಸ ಮಾಡುತ್ತಿದೆ ಈಗಾಗಿ ಗ್ರಾಮೀಣ ಭತ್ಯೆ 450 ಇದ್ದು ಅದನ್ನು 800 ರೂ ನಿಂದ 1080 ರೂ ಆಗಲಿದೆ ಎಂದರು. ಸಂಘ ಎಲ್ಲಾ ಸಮಸ್ಯೆಗಳಿಗೆ ಹೋರಾಟ ಮಾಡಿಕೊಂಡು ಬರುತ್ತಿದೆ ಎಂದ ಅವರು ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಕ್ಯೆ ಕಡಿಮೆಯಾಗುತ್ತಿದೆ ಆದರೆ ಸರ್ಕಾರ ಖಾಸಗೀ ಶಾಲೆಗಳಿಗೆ ಆರ್‍ಟಿಇನಲ್ಲಿ ಮಕ್ಕಳನ್ನು ದಾಖಲಿಸುವ ಮೂಲಕ ಅವರಿಗೆ ಹಣ ನೀಡುತ್ತಿದೆ ಆದರೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೇಗೆ ಮಾಡಲು ಸಾದ್ಯವೆಂದರು. ಶಿಕ್ಷಕರು ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಕೆಲಸ ಮಾಡೋಣವೆಂದು ಕಿವಿಮಾತು ಹೇಳಿದರು. 
ಈ ಸಂದರ್ಭದಲ್ಲಿ ಪ್ರಾ.ಶಾ.ಶಿ.ಸಂ ಜಿಲ್ಲಾ ಉಪಾಧ್ಯಕ್ಷ ಎಸ್.ಶಿವಮೂರ್ತಿ, ತಾಲ್ಲೂಕು ಕಾರ್ಯದರ್ಶಿ ಕಿಟ್ಟಣ್ಣ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಡಾ||ಆರ್.ರವಿಕುಮಾರ್, ಪ್ರಾ.ಶಾ.ಶಿ. ಸಂಘದ ರಾ.ಸಹ ಕಾರ್ಯದರ್ಶಿ,  ಕಲಾ ಶಂಕರ್, ಇಸಿಓ ಶ್ರೀವಾಣಿ, ಸಂಪನ್ಮೂಲ ವ್ಯಕ್ತಿಗಳಾದ ಕೃಷ್ಣಮೂರ್ತಿ, ಚನ್ನಪ್ಪ, ಸುರೇಶ್, ಶ್ರೀನಿವಾಸರೆಡ್ಡಿ ಇತರರು ಉಪಸ್ಥಿತರಿದ್ದರು.

 

Read These Next

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ