ಕೋಲಾರ: ವ್ಯವಸ್ಥಾಪಕರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮುಖಿ

Source: sonews | By Staff Correspondent | Published on 1st October 2018, 5:32 PM | State News | Don't Miss |

ಕೋಲಾರ: ಡಾ|| ಬಿ.ಆರ್ ಆಂಬೇಡ್ಕರ್ ಅಭಿವೃದ್ದಿ ನಿಗಮದ  ಕಚೇರಿಯಲ್ಲಿನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಿ.ಬಿ.ಐ ಗೆ ಒಪ್ಪಿಸಿ ಬಡವರ ಅನುದಾನವನ್ನು ಸಮರ್ಪಕವಾಗಿ ತಲುಪಿಸದೇ ದಲ್ಲಾಳಿಗಳಿಗೆ ಕುಮ್ಮಕ್ಕು ನೀಡಿ ಕೋಟಿ ಕೋಟಿ ಲೂಟಿ ಮಾಡುವ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಬಡವರಿಗೆ ನ್ಯಾಯ ಕೊಡಿಸಬೇಕೆಂದು  ರೈತ ಸಂಘದಿಂದ ಡಾ|| ಬಿ.ಆರ್ ಆಂಬೇಡ್ಕರ್ ಅಭಿವೃದ್ದಿ ನಿಗಮದ ಮುಂದೆ ಹೋರಾಟ ಮಾಡುವ ಸಮಯದಲ್ಲಿ  ವ್ಯವಸ್ಥಾಪಕರು ಮತ್ತು ಹೋರಾಟಗಾರರ ನಡುವೆ ಮಾತಿನ ಚಕಮುಖಿ ನಡೆಯಿತು ನಂತರ  ವ್ಯವಸ್ಥಾಪಕರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.  
    
ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ಜಿಲ್ಲಾದ್ಯಕ್ಷ ಮರಗಲ್ ಶ್ರೀನಿವಾಸ್ ನಮಗೆ ಸ್ವಾತಂತ್ರ್ಯ ಬಂದು 7 ದಶಕಗಳು ಕಳೆದರೂ ಸರ್ಕಾರದಿಂದ ಬರುವ ಅನುಧಾನಗಳನ್ನು ಲಂಚ ಹಾಗೂ ದಲ್ಲಾಳಿಗಳ ನೆರವಿಲ್ಲದೆ ಪಡೆಯಲು ಬಡವರಿಗೆ ಇನ್ನೂ ಸ್ವಾತಂತ್ರ್ಯ ಬಂದಿಲ್ಲ ಎಂಬುದು  ಡಾ|| ಬಿ.ಆರ್ ಆಂಬೇಡ್ಕರ್ ಅಭಿವೃದ್ದಿ ನಿಗಮದಲ್ಲಿ ಬಡವರಿಗೆ ಬರುವ ಕೋಟ್ಯಾಂತರ ರೂ ಅನುದಾನವನ್ನು ಪಡೆಯಲು ಕಣ್ಣೀರು ಸುರಿಸುತ್ತಿರುವ ಬಡವರ ಗೋಳು ಕೇಳುವವರು ಇಲ್ಲದಂತಾಗಿದ್ದಾರೆ. ಬಡವರ ಉದ್ದಾರಕ್ಕಾಗಿ ನಾನಾ ಯೋಜನೆಗಳು ಜಾರಿಗೊಳಿಸಿ ಅದರ ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಲು ಅಧಿಕಾರಿಗಳು ಮತ್ತು ದಲ್ಲಾಳಿಗಳೇ ಅಡ್ಡಗಾಲಾಗಿದ್ದಾರೆ. ಮತ್ತೊಂದೆಡೆ ಗಂಗಾ ಕಲ್ಯಾಣಿ ಯೋಜನೆಯ ಬೋರ್‍ವೆಲ್‍ನಲ್ಲಿ ಕೋಟಿ ಕೋಟಿ ಹಗರಣವಾದರೆ ಇನ್ನೂ ಚಿಕ್ಕಪುಟ್ಟ ಕುರಿ ಸಾಲ, ಜಮೀನು ಖರೀದಿಸಲು ನೀಡುವ ಸಾಲ ಮತ್ತಿತರ ನೂರಾರು ಸಾಲ ಸೌಲಭ್ಯಗಳಿದ್ದರೂ ಅದನ್ನು ಪಡೆಯಲು ಲಕ್ಷಕ್ಕೆ 30ಸಾವಿರದಂತೆ ಅಂದರೆ 100ಕ್ಕೆ 30ರಷ್ಟು ಲಂಚದ ಜೊತೆಗೆ ದಲ್ಲಾಳಿಗಳ ಮುಖಾಂತರವೇ  ಬರಬೇಕು. ಇಲ್ಲವಾದರೆ ಯಾವುದೇ ಕಾರಣಕ್ಕೂ ಪಲಾನುಭವಿಗೆ ಸಾಲ ದೊರೆಯುವುದಿಲ್ಲ ಮತ್ತೊಂದೆಡೆ ರಾಜಕೀಯ ವ್ಯಕ್ತಿಗಳ ಆರ್ಭಟಕ್ಕೆ ಜನ ಸಾಮಾನ್ಯರೂ ತತ್ತರಿಸುತ್ತಿದ್ದಾರೆ ಇಷ್ಟೇಲ್ಲಾ ಅವಾಂತರಗಳ ಜೊತೆಗೆ ಅಧಿಕಾರಿಗಳ ಅಸಭ್ಯ ವರ್ತನೆಗೆ ಜನ ಸಾಮಾನ್ಯರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಇಷ್ಟೇಲ್ಲಾ ಅವಾಂತರಗಳೂ ಜಿಲ್ಲಾಡಳಿತದ ಕಣ್ಣು ಮುಂದೆಯೂ ನಡೆಯುತ್ತಿದ್ದರೂ ಈ ಅವ್ಯವಸ್ಥೆಯ ಬಗ್ಗೆ ದ್ವನಿಯೆತ್ತಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿ ಜಾಣ ನಿದ್ರೆಯಲ್ಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಎಂ ಹೊಸಹಳ್ಳಿ ಮಾ ತಾ.ಅದ್ಯಕ್ಷ ವೆಂಕಟೇಶ್ ಮಾತನಾಡಿ ನೊಂದು ಬೆಂದಿರುವ  ಪರಿಶಿಷ್ಠ ಪಂಗಡ ಮತ್ತು ಪರಿಶಿಷ್ಠ ಜಾತಿಯವರಿಗೆ ಇರುವ ಈ ಸಂಸ್ಥೆಯೇ ಈಗಾದರೆ ಬಡವರ ಅಭಿವೃದ್ದಿಯಾಗುವುದು ಹೇಗೆ ಕುರಿ ಸಾಲಕ್ಕಾಗಿ ಅರ್ಜಿ ಹಾಕಿ ಸಾಲ ಮಂಜೂರಾಗಿ 2 ತಿಂಗಳೂ ಕಳೆದರೂ ಇದುವರೆಗೂ ಹಣ ನೀಡದೇ ಸತಾಯಿಸುತ್ತಿದ್ದಾರೆ. ಕೇಳಿದರೆ ಸಂಬಂಧಪಟ್ಟ ಅಧಿಕಾರಿಗಳನ್ನು  ನೋಡಿಕೋ ಇಲ್ಲವಾದರೆ ನಿನ್ನ ಹಣ ಬಿಡುಗಡೆಯಾಗುವುದಿಲ್ಲ. ಎಂದು ನೇರವಾಗಿ ಹಣ ಕೇಳುತ್ತಾರೆ. ಮತ್ತೊಂದೆಡೆ ಎಲ್ಲಾ ತಾಲ್ಲೂಕು ಮ್ಯಾನೇಜರ್‍ಗಳು ಹಣವಿಲ್ಲದೆ ಯಾವುದೇ ಪಲಾನುಭವಿಯ ಸಾಲದ ಮಾಹಿತಿಯನ್ನು ನೀಡುವುದಿಲ್ಲ ಲಕ್ಷ ರೂ ಸಾಲ ಪಡೆಯಲು 30 ಸಾವಿರ ಲಂಚ ಕೋಡಲೇಬೇಕಾದ ಪರಿಸ್ಥಿತಿ ಪಲಾನುಭವಿಯಾದಾಗಿದೆ. ಬರುವ ಲಕ್ಷದಲ್ಲಿ 30 ಸಾವಿರ ಅವರಿಗೆ  ಕೊಟ್ಟರೆ ಇನ್ನೂ ನಮ್ಮ ಗತಿಯೇನು ಎಂಬುಂದು ನನ್ನಂತಹ ಸಾವಿರಾರು ಅಮಾಯಕರ ನೋವಿನ ಕಥೆಯಾಗಿದೆಂದು ಆಕ್ರೋಶ ವ್ಯಕ್ತಪಡಿಸಿದರು.  

ಮನವಿ ಸ್ವೀಕರಿಸಿದ ವ್ಯವಸ್ಥಾಪಕರು ಇಲಾಖೆಯಲ್ಲಿ ದಲ್ಲಾಳಿಗಳ ಮತ್ತು ಭ್ರಷ್ಟಚಾರತೆ ಇರುವುದು ಸತ್ಯ ಒಂದು ಕಡೆ ದಲ್ಲಾಳಿಗಳ ಒತ್ತಡವಾದರೆ ಮತ್ತೊಂದೆಡೆ ರಾಜಕೀಯ ವ್ಯಕ್ತಿಗಳ ಆರ್ಭಟಕ್ಕೆ ಕೆಲಸ ನಿರ್ವಹಿಸಲು ಸಾಧ್ಯವಿಲ್ಲದಂತಾಗಿದೆ. ಮತ್ತೊಂದೆಡೆ ಇಲಾಖೆಯಲ್ಲಿ ಒಬ್ಬರ ಮಾತು ಒಬ್ಬರು ಕೆಳದ ಮಟ್ಟಕ್ಕೆ ಅಧಿಕಾರಿಗಳ ರಾಜಕೀಯ ವ್ಯವಸ್ಥೆಯಿದೆ. ನಿಮ್ಮ ಈ ನ್ಯಾಯಯುತ ಹೋರಾಟದ ಅಂಶಗಳು ನೊಂದವರ ಪರವಾಗಿದೆ. ಕೂಡಲೇ ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ಈ ಕಚೇರಿಯನ್ನು  ಒಂದು ವಾರದೊಳಗೆ ನೂತನ ಜಿಲ್ಲಾಧಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡುತ್ತೇವೆಂದು ಭರವಸೆ ನೀಡಿದರು.

ಈ ಹೋರಾಟದಲ್ಲಿ ತಾಲ್ಲೂಕು ಅದ್ಯಕ್ಷ ಈಕಂಬಳ್ಳಿ ಮಂಜುನಾಥ್ ತೆರ್ನಹಳ್ಳಿ ಆಂಜಿನಪ್ಪ,  ಯಲ್ದೂರ್ ಮಂಜುನಾಥ್, ಕೆ.ಜಿ.ಎಪ್ ತಾ.ಅದ್ಯಕ್ಷ ಕ್ಯಾಸಂಬಹಳ್ಳಿ ಪ್ರತಾಪ್, ಶ್ರೀನಾಥ್ ವಿ.ವೈ, ಶಿವಪ್ಪ, ದೇವರಾಜ್, ಮುರ್‍ಗೇಶ್, ವೆಂಕಟರಮಣಪ್ಪ, ನಾರಾಯಣಸ್ವಾಮಿ, ಲಕ್ಷಣ ವಿ.ಟಿ, ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಕೆ.ಶ್ರೀನಿವಾಸಗೌಡ, ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿ, ಶ್ರೀನಿವಾಸ್, ಆಂಜಿನಪ್ಪ, ಅರುಣ್‍ಕುಮಾರ್, ಯುವ ಮುಖಂಡ ಪುತ್ತೇರಿ ರಾಜು ಸಾಗರ್ ರಂಜಿತ್, ಚಂದ್ರಪ್ಪ, ಮುಂತಾದವರಿದ್ದರು.


 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...