ಹೊಸ ಮಧ್ಯದಂಗಡಿ ಅನುಮತಿ; ರೈತಸಂಘ ಹಾಗೂ ಹಸಿರು ಸೇನೆಯಿಂದ ವಿರೋಧ

Source: sonews | By Staff Correspondent | Published on 21st March 2018, 12:15 AM | State News | Don't Miss |

ಶ್ರೀನಿವಾಸಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಶ್ರೀನಿವಾಸಪುರ ತಾಲ್ಲೂಕು ಸಂಘದಿಂದ ಹೊಸ ಬ್ರಾಂದಿ ಅಂಗಡಿಗಳು ತೆರೆಯದಂತೆ ಜಿಲ್ಲಾಧ್ಯಕ್ಷ ಎಸ್. ಜಿ. ವೀರಭದ್ರಸ್ವಾಮಿ ನೇತೃತ್ವದಲ್ಲಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ನೀಡಿದರು. 

ತಾಲ್ಲೂಕಿನ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ಧರಣಿ ನಿರತರಾಗಿ ತಾಲ್ಲೂಕಿನಲ್ಲಿ ಈಗಾಗಲೇ ಎಂ.ಎಸ್.ಐ.ಎಲ್. ಬ್ರಾಂದಿ ಅಂಗಡಿಗಳು ಹೆಚ್ಚಾಗಿದ್ದು ರೈತರ ಬದುಕು ಅಧೋಗತಿಗೆ ಸೇರುತ್ತಿದೆ. ಇಂತಹ ಸಂಧರ್ಭದಲ್ಲಿ ಹೊಸದಾಗಿ ಅಂಗಡಿಗಳನ್ನು ತೆರೆಯುವುದಕ್ಕೆ ನಮ್ಮ ರೈತ ಸಂಘಗಳು ವಿರೋಧಿಸುತ್ತವೆ. 

ತಾಲ್ಲೂಕಿನಲ್ಲಿ ನೀರಾವರಿಯ ಮಟ್ಟ ಕುಸಿಯುತ್ತಿರುವುದರಿಂದ ರೈತ ಕುಟುಂಬಗಳು ಜೀವನ ನಡೆಸುವುದೇ ಕಷ್ಟÀಕರವಾಗಿದೆ. ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಇಲ್ಲದೆ ಮಾರುಕಟ್ಟೆ ವ್ಯವಸ್ಥೆ ಸರಿಯಾಗಿಲ್ಲದೆ ಪರದಾಡುತ್ತಿದ್ದಾರೆ. ರೈತರಿಗೆ ಉತ್ತಮ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಬೇಕಾದ ಸೌಲಭ್ಯಗಳನ್ನು ನೀಡದೆ ಹೊಸ ಬ್ರಾಂದಿ ಶಾಖೆಗಳನ್ನು  ತೆಗೆದು ರೈತರ ಬದುಕಿನ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಎಂ.ಎಸ್.ಐ.ಎಲ್. ಅಂಗಡಿಗಳು ತೆಗೆಯುವುದರಿಂದ ಕಾನೂನು ಬಾಹಿರ ಚಟುವಟಿಕೆಗಳು, ಕಳ್ಳತನಗಳು ಹೆಚ್ಚಾಗುತ್ತವೆ. ಇಂತಹ ಅನಾಹುತಗಳಿಗೆ ಅನುವು ಮಾಡಿಕೊಡದೆ ಸಹಕರಿಸಬೇಕು ಒಂದು ವೇಳೆ ಈ ಮನವಿಗೆ ಸಹಕರಿಸದೇ ಇದ್ದರೆ ಮುಂದೆ ಆಗುವ ಅನಾಹುತಗಳಿಗೆ ತಾವು ಕಾರಣರಾಗುತ್ತೀರೆಂದು ಎಚ್ಚರಿಕೆ ನೀಡಿ, ಇದರೆ ಬಗ್ಗೆ ಅಬಕಾರಿ ಇಲಾಖೆಯವರು ಕೂಲಂಕುಷವಾಗಿ ಚರ್ಚಿಸಿ ಕ್ರಮಕೈಗೊಳ್ಳಬೇಕೆಂದು ವಿನಂತಿಸಿ ತಾಲ್ಲೂಕು ದಂಡಾಧಿಕಾರಿ ವೈ. ರವಿ ರವರಿಗೆ ಮನವಿ ಪತ್ರ ನೀಡಿದರು.

ಸಂಧರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ನಾರಾಯಣಸ್ವಾಮಿ, ತಾಲ್ಲೂಕು ಅಧ್ಯಕ್ಷ 
ಎನ್. ಜಿ. ಶ್ರೀರಾಮರೆಡ್ಡಿ, ಉಪಾಧ್ಯಕ್ಷ ಚಂದ್ರಶೇಖರ್, ನಂಜುಂಡಪ್ಪ, ಈರಪ್ಪರೆಡ್ಡಿ, ಮುನಿಶಾಮಿರೆಡ್ಡಿ, ಅಶ್ವತ್ಥ್, ಚಂದ್ರಣ್ಣ, ಶಿವಣ್ಣ, ರಮೇಶ್, ಶ್ರೀನಿವಾಸರೆಡ್ಡಿ ಇತರರು ಹಾಜರಿದ್ದರು.
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...