ಮುಸ್ಲಿಮ್ ಸಮುದಾಯದ ವಧು ವರರ ಉಚಿತ ಸಾಮೂಹಿಕ ವಿವಾಹ  ಸಮಾರಂಭ

Source: sonews | By Staff Correspondent | Published on 8th January 2018, 11:08 PM | State News | Don't Miss |

ಶ್ರೀನಿವಾಸಪುರ:  ಪಟ್ಟಣದ ಹೊರವಲಯದ ಕಿಸಾನ್ ಆಗ್ರೋ ಮಾವಿನ ಮಂಡಿಯಲ್ಲಿ  ರೋಹಿ ಮಿಲನ್ ಕಮಿಟಿಯಿಂದ   ಮುಸ್ಲಿಮ್ ಸಮುದಾಯದ ವಧು ವರರ ಉಚಿತ ಸಾಮೂಹಿಕ ವಿವಾಹ ಸಮಾರಂಭ ಜರಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ಸಚಿವಾ ರಮೇಶ್ ಕುಮಾರ್,  ಶ್ರೀಮಂತರು ಆದ್ದೂರಿ ವಿವಾಹ ಮಾಡುತ್ತಾರೆ ಅದನ್ನು ಅನುಸರಿಸಲು ಹೋಗುವ ಮಧ್ಯಮ ವರ್ಗ ಸಾಲದ ಹೊರೆಯನ್ನು  ಹೊತ್ತು ನರಳುತ್ತಿದೆ ಈ ಪರಿಸ್ಥಿತಿ ಬದಲಾಗಬೇಕು, ವಿವಾಹ  ವ್ಯಾಪಾರವಾಗಬಾರದು ಎರಡು ಹೃದಯಗಳನ್ನು ಬೆಸೆಯುವ ಬಂಧನವಾಗಬೇಕು ಎರಡು ಕುಟುಂಬಗಳ ಸಂಭ್ರಮವಾಗಬೇಕು ಎಂದರು. ಈ ಬೆಸುಗೆ ಬಹುಕಾಲ ಬಾಳಬೇಕು ಕಿರಿಯರಿಗೆ ಆದರ್ಶವಾಗಬೇಕು, ಯಾವುದೇ ಕಾರಣಕ್ಕೂ ಸಾಮಾಹಿಕ ವಿವಾಹದ ಬಗ್ಗೆ ಕೀಳರಿಮೆ ಕೂಡದು ಸರಳ ವಿವಾಹ ಹೆಮ್ಮೆಯ ಪ್ರತಿಕ ಎಂಬುದನ್ನು ಮರೆಯಬಾರದು ಉಳ್ಳವರು ಬಡವರ ಮಕ್ಕಳ ಮದುವೆಗೆ ಸಹಾಯ ಹಸ್ತ ನೀಡಬೇಕು ಎಂದರು. 

ಸಂಸದ ಕೆ ಎಚ್ ಮುನಿಯಪ್ಪ ಮಾತನಾಡಿ ಮದುವೆ ಪವಿತ್ರವಾದದು ಕೈ ಹಿಡಿದ ಹೆಣ್ಣು ಮಗಳನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು ಮನಸ್ಸಿಗೆ ನೋವಾಗದಂತೆ ನೋಡಿಕೊಳ್ಳಬೇಕು ಎಂದರು ದಂಪತಿಗಳು ಸುಖ ದುಃಖವನ್ನು ಸಮನಾಗಿ ಸ್ವೀಕರಿಸಿ ಬಾಳ್ವೆ ನಡೆಸಬೇಕು  ಮಕ್ಕಳ  ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ವಿದ್ಯೆಯ ಮೂಲಕ ಬದುಕು ಕಟ್ಟಿಕೊಡಬೇಕು ಎಂದು ಹೇಳಿದರು
 ರಾಜ್ಯ ಅಲ್ಪ  ಸಂಖ್ಯಾತರ ನಿಗಮದ ಅಧ್ಯಕ್ಷ ನಜೀರ್ ಮಾತನಾಡಿ ನವ ದಂಪತಿಗಳಿಗೆ ಶುಭ ಹಾರೈಸಿ ಮಾತನಾಡಿ ಆರ್ ಎಸ್ ಎಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಗಲಬೆ ಸೃಷ್ಠಿಸುತ್ತದೆ  ಸಚಿವ ರಮೇಶ್ ಕುಮಾರ್ ಇಡೀ ರಾಜ್ಯದಲ್ಲಿ  ಆರೋಗ್ಯ ಕ್ಷೇತ್ರವನ್ನು ಸುಧಾರಿಸಿ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಅಲ್ಪ ಸಂಖ್ಯಾತತರಿಗೂ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.

ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್  ವಧುವರರಿಗೆ ಶುಭ ಹಾರೈಸಿ ಮಾತನಾಡಿ  ಕೋಲಾರ ಶಾಸಕ ವರ್ತೂರ್ ಪ್ರಕಾಶ್ ನಿನ್ನೆ ಮೊನ್ನೆಯ ರಾಜಕೀಯ ಬಚ್ಚಾ  ನನಗೆ ಮತ್ತು ನಸೀರ್ ಅಹ್ಮದ್ ಕೋಲಾರ ವಿಧಾನಸಭಾ ಕ್ಷೇತ್ರದ ಜವಾಬ್ದಾರಿ ಕೊಡಿ ವರ್ತೂರನ್ನು ಗಂಟು ಮೂಟೆ ಕಟ್ಟುವ ಹಾಗೆ ಮಾಡುತ್ತೇವೆ ಎಂದು ಹೇಳಿದರು.

ಹಿರಿಯ ಮುತ್ಸದ್ದಿ ಸಚಿವ ರಮೇಶ್ ಕುಮಾರ್ ವಿರುದ್ದ ಮಾತನಾಡುವ ನೈತಿಕ ಹಕ್ಕು ವರ್ತೂರಿಗೆ ಇಲ್ಲ ಆತನನ್ನು ಈ ಬಾರಿ ಗಂಟುಮೂಟೆ ಕಟ್ಟಿಸಬೇಕು ಎಂದು  ನುಡಿದರು ಬಿ ಜೆ ಪಿ ಮತ್ತು ಜೆ ಡಿ ಎಸ್ ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ ಜೆ ಡಿ ಎಸ್ ಗೆ ಜಾತ್ಯತೀತ ಪಕ್ಷ ಎಂದು ಹೇಳಿಕೊಳ್ಳುವ ನೈತಿಕತೆಯೇ ಇಲ್ಲ ಜೆ ಡಿ ಎಸ್ ಗೆ ಮತ ನೀಡಿದರೆ ಅದು ಪರೋಕ್ಷವಾಗಿ ಬಿ ಜೆ ಪಿ ಮತಪೆಟ್ಟಿಗೆಗೆ ಬಿದ್ದಂತೆ ಎಂದು ವಾಗ್ದಾ ನಡೆಸಿದರು

ಮುಸಲ್ಮಾನರಿಗೆ ಭಾರತದಲ್ಲಿ ನೀಡುವ ಗೌರವ ಬೇರೆ  ದೇಶಗಳಲ್ಲಿ ಇಲ್ಲ ಇಲ್ಲಿ ಎಲ್ಲ ಜನಾಂಗದವರು ಐಕ್ಯತೆಯಿಂದ  ಸಹಬಾಳ್ವೆ ನಡೆಸುತ್ತಿದ್ದಾರೆ ನರೇಂದ್ರ ಮೋದಿ ಪ್ರಧಾನಿಯಾದ ನಂತರ ದೇಶಗಳಲ್ಲಿ ಮತೀಯ ಗಲಬೆಗಳು ಹೆಚ್ಚಾಗುತ್ತಿವೆ ಬಿ ಜೆ ಪಿ ಯವರು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಕರ್ನಾಟಕದಲ್ಲಿ ಅವರ ಆಟ ನಡೆಯುವುದಿಲ್ಲ ಎಂದು ಹೇಳಿದರು.

ರಾಜ್ಯ ಮಾವು ಅಭಿವೃದ್ದಿ ಹಾಗೂ ಮಾರುಕಟ್ಟೆ ನಿಗಮದ ಅಧ್ಯಕ್ಷ ಎಲ್ ಗೋಪಾಲಕೃಷ್ಣ ಕೋಚಿಮುಲ್ ಅಧ್ಯಕ್ಷ ಎನ್ ಜಿ ಬ್ಯಾಟಪ್ಪ ದಿಂಬಾಲ ನಾರಾಯಣಸ್ವಾಮಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್, ಪುರಸಭೆ ಅಧ್ಯಕ್ಷರಾದ ರತ್ನಮ್ಮ ನಾಗರಾಜ್, ಉಪಾಧ್ಯಕ್ಷ ಟಿಎಂಬಿ ಮುಕ್ತಿಯಾರ್, ಜಿಲ್ಲಾ ವಕ್ಪ್ ಮಂಡಳಿ ಅಧ್ಯಕ್ಷ ಇದಾಯತ್‍ವುಲ್ಲಾ ಷರೀಫ್, ಪುರಸಭೆ ಸದಸ್ಯರಾದ ಅಬ್ದುಲ್ ಸತ್ತಾರ್, ಅನಿಸ್ ಅಹಮದ್, ಇಪ್ತಿಕಾರ್ ಅಹಮದ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಕ್ಬರ್ ಷರೀಫ್ ಮುಖಂಡರಾದ ಎಮನೂರು ನಾಗರಾಜ್, ಮುನಿರಾಜು, ವಿ ಶಂಕರ್, ಗಂಗಾದರ್, ಕ್ರಿಷ್ಣಗೌಡ ,ವೆಂಕಟಾದ್ರಿ.ಎಲ್, ಬಿ.ಜಿ ಸೈಯದ್ ಖಾದರ್,  ಇತಾವುಲ್ಲಾ ಕೆ ಕೆ ಮಂಜು ಮುಂಖರು  ಉಪಸ್ಥಿತರಿದ್ದರು. 
 

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...