ಮಾವು ಬೆಲೆ ಕುಸಿತ; ಟೈರ್ ಸುಟ್ಟು ಆಕ್ರೋಷ ವ್ಯಕ್ತಪಡಿಸಿದ ರೈತರು 

Source: sonews | By sub editor | Published on 9th July 2018, 11:41 PM | State News |

ಶ್ರೀನಿವಾಸಪುರ:  ಮಾವು ಬೆಲೆ ಕುಸಿತದಿಂದ ನೊಂದ ರೈತರು ಶ್ರೀನಿವಾಸಪುರ ಬಂದ್ ಕರೆ ನೀಡಿದ್ದರಿಂದ ತಾಲ್ಲೂಕಿನ ಪುಂಗನೂರು ಕ್ರಾಸ್‍ನಲ್ಲಿ ರೈತರು ರಸ್ತೆಯಲ್ಲಿ ಅಡುಗೆ ಮಾಡುವುದರ ಜೊತೆ ಟೈರುಗಳನ್ನು ಸುಟ್ಟು ಅಕ್ರೋಷ ವ್ಯಕ್ತಪಡಿಸಿದರು.

ಶ್ರೀನಿವಾಸಪುರ ತಾಲ್ಲೂಕಿನ ಪುಂಗನೂರು ಕ್ರಾಸ್ ಆಂದ್ರಪ್ರದೇಶಕ್ಕೆ ಸಂಪರ್ಕವಿರು ನಾಲ್ಕು ಕೂಡುವ ರಸ್ತೆಯ ವೃತ್ತದಲ್ಲಿ ನೀಲಟೂರು. ಬೈಯ್ಯಪಲ್ಲಿ, ಕೊತ್ತಪಲ್ಲಿ, ಮನಿಗನಹಳ್ಳಿ, ಆರಿಕುಂಟೆ, ಶೀಗಹಳ್ಳಿ, ನಾಗದೇನಹಳ್ಳಿ, ಆರ್.ತಿಮ್ಮಸಂದ್ರ, ಬೈರಪಲ್ಲಿ, ಎನುಮರೇಪಲ್ಲಿ, ಕುಮ್ಮಗುಂಟೆ ಸೇರಿದಂತೆ 20ಕ್ಕಿಂತ ಮೇಲ್ಪಟ್ಟು ಗ್ರಾಮಗಳ ರೈತರು ಬಂದ್‍ನಲ್ಲಿ ಪಾಲ್ಗೊಂಡಿದ್ದರು. ರಸ್ತೆಯ ವೃತ್ತದ  ನಾಲ್ಕು ದಿಕ್ಕುಗಳಲ್ಲಿ ವಾಹನಗಳು ಸಂಚರಿಸದಂತೆ ಮರದ ತುಂಡುಗಳನ್ನು ಇಟ್ಟು ತಮ್ಮ ಪ್ರತಿಭಟನೆ ಮುಂದುವರಿಸಿದ್ದರು. 

ಇದರ ಜೊತೆ ರಸ್ತೆಯ ಮದ್ಯೆ ಅಡುಗೆ ಮಾಡುವ ಮೂಲಕ ಮಾವಿಗೆ ಸೂಕ್ತ ಬೆಲೆ ನೀಡಲು ಘೋಷಣೆಗಳನ್ನು ಕೂಗಿದರು. ರೈತರ ಬದಕಿಗೆ ವರ್ಷದಲ್ಲಿ ಒಂದಿಷ್ಟು ನೆರವು ನೀಡುವ ಮಾವಿಗೆ ಪ್ರಸ್ತುತ ಬೆಲೆ ತೀವ್ರ ಕುಸಿತಗೊಂಡಿದೆ ಆದ್ದರಿಂದ ಸಕಾರ ಕೂಡಲೆ ಟನ್ನಿಗೆ 5 ಸಾವಿರ ರೂ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿದರು.
 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...