ರಾಜಕೀಯ ದ್ವೇಷಕ್ಕೆ ಕೆಎಸ್‌ಆರ‍್ಟಿಸಿ ಬಸ್ ಆಹುತಿ

Source: sonews | By sub editor | Published on 1st January 2018, 5:22 PM | State News | Incidents | Don't Miss |

ಶ್ರೀನಿವಾಸಪುರ: ವಿಧಾನ ಸಭಾ ಕ್ಷೇತ್ರದ ಹೋಳೂರು ಹೊಬಳಿ ದಾದಿರೆಡ್ಡಿಹಳ್ಳಿ ಗ್ರಾಮದ ರಾಜಕೀಯ ದ್ವೇಷಕ್ಕೆ ರಾಜ್ಯಸಾರಿಗೆ ಸಂಸ್ಥೆ ಬಸ್ಸ್​ ಬಲಿಯಾದ ಘಟನೆ ಶನಿವಾರ ರಾತ್ರಿ ನಡೆದಿರುತ್ತದೆ.

ಶ್ರೀನಿವಾಸಪುರ ಸಾರಿಗೆ ಸಂಸ್ಥೆ ಘಟಕಕ್ಕೆ ಸೇರಿದ  ಬಸ್ಸು ಎಂದಿನಂತೆ ಗ್ರಾಮದಲ್ಲಿ ತಂಗಲು (ಹಾಲ್ಟ್)  ಆಗುವ  ಸಂದರ್ಭದಲ್ಲಿ ಗ್ರಾಮದ ಚಲಪತಿ ಎಂಬುವರು ತಮ್ಮ ಮನೆ ಮುಂದೆ ಬಸ್ಸು ನಿಲ್ಲಿಸಬಾರದು ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ತಕರಾರು ತೆಗೆದಿದ್ದಾರೆ.  ಇದರಿಂದಾಗಿ ಚಾಲಕನಿಗೂ ಮತ್ತು ಚಲಪತಿಗೆ ವಾಗ್ವಾದ ನೆಡೆದಿರುತ್ತದೆ ನಂತರ ಚಾಲಕ ಬಸ್ಸ್​ನ್ನು ಶಾಲೆ ಮುಂಭಾಗದಲ್ಲಿ ನಿಲ್ಲಿಸಿರುತ್ತಾರೆ ನಂತರದಲ್ಲಿ ತಡರಾತ್ರಿಯಲ್ಲಿ  ಕಿಡಗೇಡಿಗಳು ಬಸ್ಸಿಗೆ KA 07 F 1529 ಬೆಂಕಿಹಚ್ಚಿರುತ್ತಾರೆ ಇದರ ಮಾಹಿತಿ ಗ್ರಾಮದಲ್ಲಿ ಹರಡುವ ಹೊತ್ತಿಗೆ  ಬಸ್ಸು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುತ್ತದೆ. ಸಾರಿಗೆಬಸ್ಸು ಬೆಂಕಿ ಹಚ್ಚಿರುವುದು ಯಾರು ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟತೆ ಇಲ್ಲ .

ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರುದಾಖಲಾಗಿದ್ದು  ಗ್ರಾಮದಲ್ಲಿ ಇತ್ತೀಚಿಗೆ ನಡೆದ ಗ್ರಾಮಪಂಚಾಯಿತಿ ಉಪಚುನಾಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ ಗೆಲವು ಸಾಧಿಸಿದ್ದರು ನಂತರದಲ್ಲಿ ಗ್ರಾಮದ ರಾಜಕೀಯ ಕಾರ್ಯಕರ್ತರ ನಡುವೆ ರಾಜಕೀಯ ಸಂಘರ್ಷಗಳು ನಡೆದು ಗ್ರಾಮದಲ್ಲಿ ಪಕ್ಷಗಳ ಕಾರ್ಯಕರ್ತರ ನಡುವೆ ದ್ವೇಷಮಯ ವಾತವರಣ ಮುಂದುವರೆದಿದೆ ಬಸ್ ಘಟನೆಗೂ ಗ್ರಾಮದಲ್ಲಿ ರಾಜಕೀಯ ಗಲಾಟೆಗೂ ಸಂಬಂಧ ಇರಬಹುದಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಈ ಮದ್ಯೆ ಬಸ್ ನಿಲ್ಲಿಸಬಾರದು ಎಂದು ತಕರಾರು ತೆಗೆದ ವ್ಯಕ್ತಿ ಚಲಪತಿ ಜೆ ಡಿ ಎಸ್ ಕಾರ್ಯಕರ್ತ ಎನ್ನಲಾಗಿದ್ದು ಅತನನ್ನು  ಪೊಲೀಸರು  ವಿಚಾರಣೆಗೆ ಒಳಪಡಿಸಿರುತ್ತಾರೆ.

ಬಸ್ಸು ಬೆಂಕಿಗಾಹುತಿಯಾದ ವಿಚಾರ ತಿಳಿದೊಡನೆ ಸಾರಿಗೆ ಸಂಸ್ಥೆ ಕೋಲಾರ ಜಿಲ್ಲಾ ವಿಭಾಗೀಯ ಅಧಿಕಾರಿ ಪ್ರಕಾಶ್ ಬಾಬು ಡಿ ಎಂ ಇ ನಾಗರಾಜ್,ಡಿ ಟಿ ಒ ನಿರಂಜನ್,ಭದ್ರತಾ ಅಧಿಕಾರಿ ಶಿವಕುಮಾರ್ ಶ್ರೀನಿವಾಸಪುರ ಘಟಕಾಧಿಕಾರಿ ಮಂಜುನಾಥ್ ಭೇಟಿ ನೀಡಿ ಪರಶಿಲನೆ ಮಾಡಿರುತ್ತಾರೆ.

ಹೋಳೂರು ತಾಲೂಕು ಪಂಚಾಯಿತಿ ಸದಸ್ಯ ಗೋಪಾಲಗೌಡ ಪ್ರತಿಕ್ರೀಯೆ ನೀಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು ಸಾರ್ವಜನಿಕರ ಆಸ್ತಿಪಾಸ್ತಿ ಯಾರೆ ನಾಶಮಾಡಿದರು. ಅದು ತಪ್ಪು ಈ ವಿಚಾರದಲ್ಲಿ ಪೊಲೀಸರಿಂದ ಪ್ರಾಮಾಣಿಕವಾದ ತನಿಖೆಯಾಗಬೇಕು ವಿನಾ ಕಾರಣ ಚಲಪತಿಯ ಮೇಲೆ ಆರೋಪ ಹೊರಿಸಿ ಅವರನ್ನು ಬಂಧನಕ್ಕೆ ಒಳಪಡಿಸಿರುವುದು ಸರಿಯಲ್ಲ ಎಂದು ಹೇಳಿದರು ತನಿಖೆಯಾಗದೆ ಚಲಪತಿಯನ್ನು ಬಂಧಿಸಿರುವ ಪೊಲೀಸರ ವಿರುದ್ಧ ತಾಲೂಕು ಪಂಚಾಯಿತಿ ಸದಸ್ಯ ಗೋಪಾಲಗೌಡ ಆಕ್ರೋಶ ಪಡಿಸಿರುತ್ತಾರೆ.

ವರದಿ :ಶಬ್ಬೀರ್ ಅಹ್ಮದ್  ಶ್ರೀನಿವಾಸಪುರ

Read These Next

ದಾವಣಗೆರೆ: ಯುವಕನ ಬರ್ಬರ ಕೊಲೆ

ದಾವಣಗೆರೆ: ಯುವಕನೋರ್ವನನ್ನು ಮಾರಕಾಯುಧಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದ ಘಟನೆ ಹರಿಹರ ತಾಲೂಕಿನ ವಿದ್ಯಾನಗರ ಎಂಬಲ್ಲಿ ಇಂದು ...

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...