ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆಯಿಂದ ಜಾನಪದ ಉತ್ಸವ ಹಾಗು ಕ್ರೀಡಾಕೂಟ

Source: sonews | By sub editor | Published on 11th January 2018, 5:50 PM | State News | Don't Miss |

ಶ್ರೀನಿವಾಸಪುರ: ಯಾವುದೇ ಜಾತಿ ಮತ ಧರ್ಮ ಭೇದವೆಣಿಸದೇ ಗ್ರಾಮೀಣ ಹಾಗು ಪಟ್ಟಣದ ಕುಟುಂಬಗಳ ಶ್ರೇಯೋಭಿವೃದ್ದಿಗೆ ಕಳೆದ 3 ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸಿ ಅವರನ್ನು ಸ್ವಾವಲಂಬನೆಯತ್ತ ನಡೆಸಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಿಣಾಭಿವೃದ್ದಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಸುರೇಶ್ ಶೆಟ್ಟಿ ರವರು ತಿಳಿಸಿದರು.
ಶ್ರೀನಿವಾಸಪುರ ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ದಿ ಯೋಜನೆ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮ ಅಡಿಯಲ್ಲಿ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಮಂಗಳವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಹಾಗು ಕ್ರೀಡಾಕೂಟ ಮತ್ತು ಸ್ವ-ಉದ್ಯೋಗ ತರಬೇತಿದಾರರಿಗೆ ಪ್ರಮಾಣ ಪತ್ರಗಳನ್ನು ವಿತರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ  ಮಾತನಾಡಿ ಕೇವಲ ಅಭಿವೃದ್ದಿ ಅಥವಾ ಸಂಘಟನೆಗೆ ಮಾತ್ರ ಸೀಮಿತವಾಗಿದೆ ಸ್ವಾವಲಂಬನೆ ಬದಕು ನಡೆಸುವ ವೃತ್ತಿ ತರಬೇತಿಗಳನ್ನು ನೀಡಲಾಗುತ್ತಿದೆ ಎಂದರು.  ಜೊತೆಗೆ  ಸಾಂಸ್ಕøತಿಕವಾಗಿ ಮಹಿಳೆಯರನ್ನು ಸಂಘಟಿಸಿ ಜಾನಪದ ಸೊಗಡನ್ನು ಬಿಂಬಿಸುವ ಕಾರ್ಯಕ್ರಮಗಳಲ್ಲಿ ಇಂದಿನ ಕಾರ್ಯಕ್ರಮವಾಗಿದೆ ಎಂದರು ಅದೇ ರೀತಿ ಮಹಿಳೆಯರು ತಮಗೆ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕೆಂದು ಹೇಳಿದರು. 
ಸಮಾಜ ಸೇವಾ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ವಿ.ನಾಗರಾಜ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಬದಕಿನ ಚಿತ್ರಣ ಜೊತೆಗೆ ಮಾನವೀಯ ಸಂಬಂದಗಳನ್ನು ತಿಳಿಸಿಕೊಡುವ ಜನರ ಬಾಯಿಂದ ಬಂದ ಜನಪದ ಸಾಹಿತ್ಯ ಸಾಂಸ್ಕøತಿಕವಾಗಿ ಇಂದಿನ ಸಿನಿಮಾ ದೂರದರ್ಶನದಂತಹ ಕಾರ್ಯಕ್ರಮಗಳಿಗೆ ಸಹಕಾರಿಯಾಗಿದೆ ಎಂದರು. ಶ್ರೀ.ಕ್ಷೇ.ಧ.ಗ್ರಾ.ಯೋ. ವಿವಿಧ ಕಾರ್ಯಕ್ರಮಗಳಲ್ಲಿ ಜಾನಪದ ಸಂಸ್ಕøತಿಯನ್ನು ಬಿಂಬಿಸುವ ನಿಟ್ಟಿನಲ್ಲಿ   ಇಂದು ಮಹಿಳೆಯರಿಗೆ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ ಎಂದರು. ಬದಕಿನ ಜಂಜಾಟದ ನಡುವೆ ಮನಸ್ಸಿಗೆ ಖುಷಿ ತರುವ ಜಾನಪದ ಸಂಪತ್ತನ್ನು ಬೆಳೆಸುವ ಅಥವಾ ಪೋಷಿಸುವ ಮನಸ್ಸುಗಳು ಬರಬೇಕಾಗಿದೆ ಎಂದರು. ಅದೇ ರೀತಿ ಸಂಘಗಳು ತಾನು ಹಾಗು ಕುಟುಂಬಗಳ ಅಭಿವೃದ್ದಿಗೆ ಮಾತ್ರ ಸೀಮಿತವಾಗದೇ ಎಳೆಯ ಮಕ್ಕಳ ಮೇಲೆ ನಡೆಸುವ ಕ್ರೌರ್ಯ, ದಬ್ಬಾಳಿಕೆ ಅತ್ಯಾಚಾರದಂತ ಪಿಡುಗಿನ ಬಗ್ಗೆ ಸಿಡಿದೇಳಬೇಕು ಇತ್ತೀಚಿಗಿನ  ವಿಜಯಯಪುರದ ವಿಧ್ಯಾರ್ಥಿನಿ ದಾನಮ್ಮ ಮೇಲೆ ನಡೆದ ಅತ್ಯಾಚಾರ ಕೊಲೆ ಮಾಡಿದ ಕಿಡಿಗೇಡಿಗಳ ವಿರುದ್ದ ಮಹಿಳೆಯರು ಸಂಘಟಿತ ದ್ವನಿಯಾಗಿ ನಿಂತಾಗ ಸಂಘಗಳ ರಚನೆಗೆ ಸಾರ್ಥಕವೆನಿಸಿಕೊಳ್ಳುತ್ತದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜ್ಞಾನ ವಿಕಾಸ ಮಹಿಳಾ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಶ್ಯಾಲಿನಿ, ಪುರಸಭಾ ವಲಯ ಮೇಲ್ವಿಚಾರಕ ಶೇಖರ್‍ಶೆಟ್ಟಿ, ಮಹಿಳಾ ಸಂಘದ ಒಕ್ಕೂಟಗಳ ಅಧ್ಯಕ್ಷರಾದ ನಾಗವೇಣಿರೆಡ್ಡಿ, ಉಮಾದೇವಿ, ಹೊಗಳಗೆರೆ ಸುನಂದಮ್ಮ, ಕಾರಂಗಿ ಆಂಜಮ್ಮ, ಎನ್‍ಆರ್‍ಎಲ್‍ಎಂ ಜಿಲ್ಲಾ ಸಂಚಾಲಕ ಸಿ.ಕೆ.ಶಿವಕುಮಾರ್, ವಲಯ ಮೇಲ್ವಿಚಾರಕ ವಿಶ್ವನಾಥ್, ಜಗದಾಂಬಿಕಾ ಇತರರು ಉಪಸ್ಥಿತರಿದ್ದರು.

Read These Next

ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ; ಉರ್ದು ಭಾಷಣದಲ್ಲಿ  ಖುಬೈಬ್ ಆಹ್ಮದ್ ಅಕ್ರಮಿ ದ್ವಿತೀಯಾ

ಭಟ್ಕಳ: ಮೈಸೂರಿನಲ್ಲಿ ಇಂದು ನಡೆದ ರಾಜ್ಯಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಟ್ಕಳದ ಇಸ್ಲಾಮಿ ಆಂಗ್ಲೋ ಉರ್ದು ...

ಭಟ್ಕಳದಲ್ಲಿ ಹೆದ್ದಾರಿಗೆ ಮತ್ತೆ ಹೊಸ ರೂಪ ನೀಡಿದ ಪ್ರಾಧಿಕಾರ, ಫ್ಲೈ ಓವರ್ರೂ ಇಲ್ಲ, ಅಂಡರ್ ಪಾಸೂ ಇಲ್ಲ; 30ಮೀ.ಗೆ ಸೀಮಿತ

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗೆ ವೇಗ ದೊರಕಿರುವಂತೆಯೇ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ನೂತನ ಹೆದ್ದಾರಿ ನಿರ್ಮಾಣಕ್ಕೆ ...